ಕಲಬುರಗಿ ಜಿಲ್ಲೆಯ ವಸತಿ ಶಾಲೆಗಳಲ್ಲಿ ಕರಾಟೆ ಶಿಕ್ಷಕರ ಅರ್ಧ ವೇತನ ನೀಡದೆ ಹೊಸ ಕರಾಟೆ ಶಿಕ್ಷಕರ ನೇಮಕಕ್ಕೆ ಮುಂದಾದ ಅಧಿಕಾರಿಗಳ, ಶಿಕ್ಷಕರ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾದ ಮಹೇಂದ್ರ ಕ್ಷಿರ ಸಾಗರ

ಕಲಬುರಗಿ : ಜಿಲ್ಲೆಯ ವಸತಿ ಶಾಲೆಗಳಲ್ಲಿ 2022-23ನೇ ಸಾಲಿನಲ್ಲಿ ಮೊರಾರ್ಜಿ ದೇಸಾಯಿ , ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ ನುರಿತ ಅನುಭವಿ ಹಾಗೂ ಹಿರಿಯ ಕರಾಟೆ ಶಿಕ್ಷಕರು ತರಬೇತಿ ನೀಡಿದ್ದರು.

ಕರಾಟೆ ಶಿಕ್ಷಕರಿಗೆ ಸರ್ಕಾರದ ಆದೇಶದಂತೆ ಅರ್ಧವೆತನ ಪಾವತಿ ಮಾಡಿ ಇನ್ನರ್ದ ವೇತನ ನೀಡದೆ .  ಅಧಿಕಾರಿಗಳು ಹಾಗೂ ಶಿಕ್ಷಕರು ಈ ಹಿಂದೆ ತರಬೇತಿ ನೀಡಿದ ಹಳೆಯ ಕರಾಟೆ ಶಿಕ್ಷಕರನ್ನು ಕಡೆಗಣಿಸುತ್ತಿದ್ದಾರೆ .

ಹಳೆಯ ಕರಾಟೆ ಶಿಕ್ಷಕರನ್ನು ಬಿಟ್ಟು ಮಹಿಳಾ ಶಿಕ್ಷಕರಿಗೆ ಮೊದಲ ಆದ್ಯತೆ ನೀಡುತ್ತೇವೆ ಎನ್ನುತ್ತಿರುವುದು ವಿಷಾಧಕರ ಸಂಗತಿಯಾಗಿದೆ.

  ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಸತಿ ಶಾಲೆಯ ಶಿಕ್ಷಕರಿಗೆ ಮನವಿ ಏನೆಂದರೆ ಈ ಹಿಂದೆ ತರಬೇತಿ ನೀಡಿದ ಕರಾಟೆ ಶಿಕ್ಷಕರ ಉಳಿದ ಅನುದಾನ ಬಿಡುಗಡೆ ಮಾಡಬೇಕು .

 ಕರಾಟೆ ಖಾಲಿ ಹುದ್ದೆ ಭರ್ತಿ ಗಾಡಿ  ಪತ್ರಿಕಾ ಪ್ರಕಟಣೆಯಲ್ಲಿ  ಮಹಿಳಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತೆವೆ ಎಂದು ಪ್ರಕಟಣೆ ಹೊರಡಿಸಿ ನಂತರ ನೇಮಕ ಮಾಡಿ.

ಒಂದು ವೇಳೆ ನಿರ್ಲಕ್ಷ ಮಾಡಿ ಹೊಸ ಮಹಿಳಾ ಶಿಕ್ಷಕರಿಗೆ ನೇಮಕ ಮಾಡಿಕೊಂಡರೆ. ದಾಖಲೆ ಸಮೇತ ಕಾನೂನಾತ್ಮಕ ಹೋರಾಟ ಹಮ್ಮಿಕೊಳ್ಳುವದಾಗಿ  ತಿಳಿಸಿದರು.

  ಕೆಲವು ಶಾಲೆಗಳಲ್ಲಿ ನಕಲಿ ಕರಾಟೆ ಮಹಿಳಾ ಶಿಕ್ಷಕರು ಮತ್ತು ಅಪರಾಧಿ ಹಿನ್ನೆಲೆ ಉಳ್ಳ ಪುರುಷ ಕರಾಟೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ನಮಗೆ ತಿಳಿದುಬಂದಿರುತ್ತದೆ.

 ಸ್ಥಳೀಯ ಕರಾಟೆ ಶಿಕ್ಷಕರನ್ನು ಕಡೆಗಣಿಸಿ ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಕಾನೂನು ಶಿಷ್ಟಾಚಾರ ಉಲ್ಲಂಘನೆ ಮಾಡಿ ಒಬ್ಬ ಮಹಿಳಾ ಶಿಕ್ಷಕರು ಸುಮಾರು 40 ಕ್ಕಿಂತ ಹೆಚ್ಚಿನ ವಸತಿ ಶಾಲೆಗಳಿಗೆ ಅರ್ಜಿ ಹಾಕಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಸತಿ ಶಾಲೆಯ ಶಿಕ್ಷಕರು ಈ ಹಿಂದೆ ತರಬೇತಿ ನೀಡಿದ ಅನುಭವಿ ಹಿನ್ನಲೆಉಳ್ಳ ಕರಾಟೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದೆ 

 ಒಂದು ವೇಳೆ ನಿರ್ಲಕ್ಷ ವಹಿಸಿದರೆ ಈ ವಿಷಯದ ಕುರಿತು ದಾಖಲೆ ಸಮೇತ ವಿವಿಧ ಸಂಘಟನೆಗಳ ಒಕ್ಕೂಟದೊಂದಿಗೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು  ಹಿರಿಯ ಕರಾಟೆ ಶಿಕ್ಷಕರಾದ ಸೇನಸೈ ಮಹೇಂದ್ರ ಚಿರಸಾಗರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ