ಬಂಡವಾಳ ಶಾಯಿಗಳ ಪರವಾಗಿ ಕೆಲಸ ಮಾಡುತ್ತಿರುವ ಸರ್ಕಾರದ ವಿರುದ್ಧ ಹೋರಾಟಮಾಡೋದು ಅನಿವಾರ್ಯ : ಕೆ.ನೀಲಾ

ಬಂಡವಾಳ ಶಾಯಿಗಳ ಪರವಾಗಿ ಕೆಲಸ ಮಾಡುತ್ತಿರುವ ಸರ್ಕಾರದ ವಿರುದ್ಧ  ಹೋರಾಟಮಾಡೋದು ಅನಿವಾರ್ಯ : ಕೆ.ನೀಲಾ

ಬಂಡವಾಳ ಶಾಯಿಗಳ ಪರವಾಗಿ ಕೆಲಸ ಮಾಡುತ್ತಿರುವ ಸರ್ಕಾರದ ವಿರುದ್ಧ ಹೋರಾಟಮಾಡೋದು ಅನಿವಾರ್ಯ : ಕೆ.ನೀಲಾ

ಶಹಾಬಾದ್: ಬಡ ಕೊಲಿ ಕಾರ್ಮಿಕರನ್ನು ಜಾತಿ ಧರ್ಮದ ಅಂಧಕಾರದಲ್ಲಿ ಇಟ್ಟು, ರಾಜಕೀಯ ಮಾಡುತ್ತಿರುವ ಬಿಜೆಪಿ ಕಾಂಗ್ರೆಸ್ ಪಕ್ಷದ ನಿಜರೂಪವನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಒಗ್ಗಟ್ಟಿನಿಂದ ಹೋರಾಟ ಬೆಳೆಸಬೇಕು ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ, ಕೆ.ನೀಲಾ ಹೇಳಿದರು.

ಅವರು ಶಹಬಾದ ಚಿತ್ತಾಪುರ ಕಾಳಗಿ ಮತ್ತು ಸೇಡಂ ಸಮಗ್ರ ಅಭಿವೃದ್ಧಿಗಾಗಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ವತಿಯಿಂದ ಶನಿವಾರ ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ 4ನೇ ಸಮ್ಮೇಳನದ ಭಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ದೇಶದ ಶ್ರೀಮಂತರಾದ ಬಂಡವಾಳ ಶಾಹಿಗಳ ಸೇವೆ ಮಾಡುತ್ತಿದ್ದಾರೆ, ಅವರು ಬಡವರ ಪರವಾಗಿ ಇಲ್ಲ, ನಮ್ಮ ಜೀವನ ಮತ್ತು ದೇಶದ ಭವಿಷ್ಯವನ್ನು ರೂಪಿಸುವರು ನಾವೆಲ್ಲರು ಸತ್ಯದ ಹಾದಿಯಲ್ಲಿ ಹೋರಾಟ ಬೆಳೆಸೋಣ ಎಂದು ಕರೆ ನೀಡಿದರು.

ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯೆಚೂರಿ ವೇದಿಕೆ ನಿರ್ಮಿಸಿ ಬಹಿರಂಗ ಜರುಗಿತು. ವೇದಿಕೆ ಮೇಲೆ ಶರಣಬಸಪ್ಪ ಮಮಶೆಟ್ಟಿ, ಎಂ.ಬಿ. ಜಜ್ಜನ್, ರಾಯಪ್ಪ ಹುರಮುಂಜಿ, ಶೇಕಮ್ಮ ಕುರಿ, ಕಾಶಿನಾಥ ಭಂಡೆ, ಅಯ್ಯಪ್ಪ ಸೇಡಂ, ವೀರಯ್ಯ ಸ್ವಾಮಿ, ನಾಗಪ್ಪ ರೈಚೂರಕರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಬಣ್ಣ ಗುಡುಬಾ, ರೇವಯ್ಯ ಸ್ವಾಮಿ, ಸಿದ್ದಮ್ಮ ಮುತಗಿ, ಕ್ಷೇಮಲಿಂಗ ಭಂಕೂರ ಸೇರಿದಂತೆ ಕಾರ್ಮಿಕ ಸಂಘಗಳು ಅಂಗನವಾಡಿ, ಆಶಾ, ಬಿಸಿಊಟ ಮತ್ತು ನರೇಗಾ ಕಾರ್ಮಿಕರು ನೂರಾರು ಸ್ಥಿತಿಯಲ್ಲಿ ಭಾಗವಹಿಸಿದ್ದರು.

ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ