ಸಂವಿಧಾನದ ಸಮರ್ಪಣೆ ದಿನಾಚರಣೆ ಪ್ರಯುಕ್ತ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ
ಸಂವಿಧಾನದ ಸಮರ್ಪಣೆ ದಿನಾಚರಣೆ ಪ್ರಯುಕ್ತ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ
ಕಲಬುರಗಿ: ಡಾ. ಬಿ ಆರ್ ಅಂಬೇಡ್ಕರ್ ಇಂಟಿಗ್ರೇಟೆಡ್ ರಿಸಚ್೯ ಇನಸ್ಟಿಟ್ಯೂಟ್ ಆಫ್ ಕಲಬುರಗಿ ಹಾಗೂ ಹೈದರಾಬಾದ್ ಕರ್ನಾಟಕ ಸಿದ್ಧಾರ್ಥ ಸೇವಾ ಸಂಸ್ಥೆಯಗಳ ಸಂಯುಕ್ರಾಶ್ರಯದಲ್ಲಿ ನಗರದ ಕನ್ಯ ಸರ್ಕಾರಿ ಫೌಡ ಶಾಲೆಯಲ್ಲಿ ಕಲಬುರಗಿ ದಕ್ಷಿಣ ಹಾಗೂ ಉತ್ತರ ವಲಯ ವ್ಯಾಪ್ತಿಯ ಸರ್ಕಾರಿ ಫೌಡ ಶಾಲೆಯ ವಿದ್ಯಾರ್ಥಿಗಳಿಗಾಗಿ ನಮ್ಮ ಸಂವಿಧಾನದ ರಚನೆಯಲ್ಲಿ ಬಿ ಆರ್ ಅಂಬೇಡ್ಕರ್ ಪಾತ್ರ ಹಾಗೂ ಭಾರತೀಯ ಸಂವಿಧಾನದ ಲಕ್ಷಣಗಳ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ಶಾಲೆಯ ಮುಖ್ಯ ಗುರುಗಳಾದ ಡಾ. ವಿಜಯಕುಮಾರ ಬೇಳಮಗಿ ರವರು ಮಾತನಾಡುತ್ತ ಮಕ್ಕಳಿಗೆ ನಮ್ಮ ಸಂವಿಧಾನ ತಿಳಿಸಿಕೊಡುವದು ಮಕ್ಕಳಲ್ಲಿ ಸಂವಿದಾನ ಓದುವ ಬರೆವುದರಿಂದ ಕಾನೂ ನು ತಿಳಿದುಕೊಳ್ಳುವಲ್ಲಿ ಮಕ್ಕಳಿಗೆ ಆಸಕ್ತಿ ಹೆಚ್ಚಾಗುತ್ತದೆ ಈ ಕಾರ್ಯ ಕೈ ಕೊಂಡ ಸಂಸ್ಥೆ ಗಳಿಗೆ ಧನ್ಯವಾದಗಳು ಹೇಳಿದರು.
ಸಂಸ್ಥೆ ಅಧ್ಯಕ್ಷರಾದ ಡಾ. ಸುನೀಲಕುಮಾರ ಎಚ್ ವಂಟಿ ಮಾತನಾಡುತ್ತಾ ನಮ್ಮಾ ಸಂವಿಧಾನ ವಿಶ್ವವೆ ಮೆಚ್ಚುವಂತಹದು ಮತ್ತು ಸರವರಿಗೆ ಸಮಾನತೆಯ ಸಾರಿದೆ ಇದರಿಂದ ಬಡವ ಬಲ್ಲಿದ ಮೇಲು ಕೀಳು ಎಂಬ ಬಿನ್ನಾತೆ ಇಲ್ಲದೆ ಯಲ್ಲರಿಗೆ ಸಮಾನತೆ ಹಕ್ಕುಗಳು ವದಗಿಸಿ ಕೊಟ್ಟಿದೆ ಸಂವಿದಾನ ಇಲ್ಲದೆ ಹೋದರೆ ನಾವು ನೀವು ಯಾರು ನೆಮ್ಮದಿಯಿಂದ ಬದಕಲು ಆಗುತ್ತಿರಲಿಲ್ಲ ಅದಕ್ಕಾಗಿ ನಾವೆಲ್ಲಾ ಸಂವಿಧಾನಕ್ಕೆ ಗೌರವ ದಿಂದಕಾಣುವದು ನಮ್ಮನಿಮ್ಮ ಕರ್ತವ್ಯ ವಾಗಿದೆ ಎಂದು ನುಡಿದರು.
ಈ ಸಂಧರ್ಭದಲ್ಲಿ ಕ ಜಾ ಪ ಜಿಲ್ಲಾಧ್ಯಕ್ಷ ಎಂ ಬಿ ನಿಂಗಪ್ಪ, ಕರಬಸಯ್ಯ ಮಠ, ರಾಜಕುಮಾರ ಕೋರಿ, ನಂದಕುಮಾರ್ ತೆಳಗೇರಿ, ಅಶೋಕ ಕಾಳೆ, ಉಮೇಶ್ ಪಾಳಾ, ಮಹಾಂತೇಶ ಕೋಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು
.