ಪಾರ್ವತಿ ಶಿವಶಂಕರಪ್ಪ ನಿಗ್ಗುಡಗಿ ನಿಧನ
ಪಾರ್ವತಿ ಶಿವಶಂಕರಪ್ಪ ನಿಗ್ಗುಡಗಿ ನಿಧನ
ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿಗಳಾದ ಶಿವರಾಜ್ ನಿಗ್ಗುಡಗಿ ಅವರ ಮಾತೋಶ್ರೀ ಪಾರ್ವತಿ ಶಿವಶಂಕರಪ್ಪ ನಿಗ್ಗುಡಗಿ ಅವರು ಇಂದು ಬೆಳುಗಿನಜಾವ 4.00 ಗಂಟೆಗೆ ನಿಧನ ಹೊಂದಿದರು.
ಮೃತರ ಲಿಂಗ ಶರೀರವನ್ನು ಕಲಬುರ್ಗಿ ನಗರದ ಮಾನಸ ರೆಸಿಡೆನ್ಸಿಯಲ್ಲಿ ಇರಿಸಲಾಗಿದ್ದು, ಇಂದು ದಿನಾಂಕ 6-1-2026ರಂದು ಸಂಜೆ 4.00 ಗಂಟೆಗೆ ಗಂಜ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ನಿಧನಕ್ಕೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಶಶೀಲ್ ಜಿ. ನಮೋಶಿ, ಉಪಾಧ್ಯಕ್ಷರಾದ ರಾಜಾ ಬಿ. ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ. ಕೈಲಾಸ ಪಾಟೀಲ್ ಹಾಗೂ ಸಂಸ್ಥೆಯ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಮೃತರ ಆತ್ಮಕ್ಕೆ ಶಾಂತಿ ಕೋರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
