ವಸತಿರಹಿತರ ಸಮೀಕ್ಷೆಗೆ ಏಪ್ರಿಲ್ 30ರವರೆಗೆ ಅವಕಾಶ

ವಸತಿರಹಿತರ ಸಮೀಕ್ಷೆಗೆ ಏಪ್ರಿಲ್ 30ರವರೆಗೆ ಅವಕಾಶ
ವಸತಿರಹಿತರ ಸಮೀಕ್ಷೆ ಕಾಲಾವಕಾಶ.
ಶಹಾಪುರ : ರಾಜೀವ್ ಗಾಂಧಿ ವಸತಿ ನಿಗಮದಿಂದ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗದ ಅರ್ಹ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಸಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ದೇವರಾಜ್ ಗೋನಾಲ ತಿಳಿಸಿದ್ದಾರೆ.
ಈ ಸಮೀಕ್ಷೆಗೆ ಮಾರ್ಚ್ 31ರವರೆಗೆ ಗಡವು ನೀಡಿತ್ತು, ಮತ್ತೆ ಇದನ್ನು ಏಪ್ರಿಲ್ 30 ರವರೆಗೆ ಕಾಲಾವಕಾಶ ಮುಂದೂಡಲಾಗಿದೆ ಎಂದು ಹೇಳಿದರು,ಸಗರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ವಸತಿ ರಹಿತ ಹಾಗೂ ನಿವೇಶನ ರಹಿತರ ಸಮೀಕ್ಷೆ ಕೈಗೊಂಡು ಅರ್ಹತೆ ಹೊಂದಿರುವ ಕುಟುಂಬವನ್ನು ಗುರುತಿಸಲಾಗುವುದು ಎಂದು ತಿಳಿಸಿದರು..
ನಿವೇಶನ ರಹಿತ ಹಾಗೂ ವಸತಿ ರಹಿತ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸೂಕ್ತ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಅಜ್ಜಿಯ ಒಂದು ಜೆರಾಕ್ಸ್ ಪ್ರತಿ ಸಲ್ಲಿಸಬೇಕೆಂದು ಹೇಳಿದ್ದಾರೆ.