ಹಾರಕೂಡ ಮಠ ಜಾತ್ಯಾತೀತ ಮಠವಾಗಿದೆ: ಶಾಸಕ ಮತ್ತಿಮಡು ಅಭಿಮತ

ಹಾರಕೂಡ ಮಠ ಜಾತ್ಯಾತೀತ ಮಠವಾಗಿದೆ: ಶಾಸಕ ಮತ್ತಿಮಡು ಅಭಿಮತ

ಕಲಗುರ್ತಿಯಲ್ಲಿ ಹಾರಕೂಡದ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಪೂಜ್ಯ ಶ್ರೀ

ಡಾ. ಚನ್ನವೀರ ಶಿವಾಚಾರ್ಯರ  ೬೨ ನೇ ಜನ್ಮ ದಿನದ ನಿಮಿತ್ಯ ಬೆಳ್ಳಿ ಕಿರೀಟ್ ಧಾರಣೆ, ತುಲಾಭಾರ

ಹಾರಕೂಡ ಮಠ ಜಾತ್ಯಾತೀತ ಮಠವಾಗಿದೆ: ಶಾಸಕ ಮತ್ತಿಮಡು ಅಭಿಮತ

ಚಿತ್ತಾಪುರ:ಕಲ್ಯಾಣ ಕರ್ನಾಟಕ ನಾಡಿನಲ್ಲಿ ಹಾರಕೂಡ ಸಂಸ್ಥಾನ ಮಠವು ಸಮಾನತೆ ಸಾರುವಜಾತ್ಯಾತೀತ ಮಠವಾಗಿದೆ ಎಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

ಮತಕ್ಷೇತ್ರದ ಕಲಗುರ್ತಿಯಲ್ಲಿ ಬುಧವಾರ ಹಮ್ಮಿಕೊಂಡಿರುವ ಹಾರಕೂಡದ ಪೂಜ್ಯ ಶ್ರೀ ಡಾ. ಚನವೀರ ಶಿವಾಚಾರ್ಯರ ೬೨ ನೇ ಜನ್ಮ ದಿನದ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಪಿಎಂಸಿ ಮಾಜಿ ಸದಸ್ಯ,ಶಿವರಾಜ ಪಾಟೀಲ್ ಕಲಗುರ್ತಿ ಅವರ ತಂದೆ ದಿ. ಅಣ್ಣರಾವ್ ಪಾಟೀಲ್ ತಾಯಿ ದಿ. ಶಾಂತಾಬಾಯಿ

ಸಂಕಲ್ಪದಂತೆ ಈ ಬಾರಿ ಹಾರಕೂಡ ಶ್ರೀಗಳ ೬೨ ನೇ ಜನ್ಮ ದಿನ ಚಿತ್ತಾಪುರಮತಕ್ಷೇತ್ರದ ಕಲಗುರ್ತಿಯಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆಎಂದರು.

ಈ ಮಠವು ಸಾಹಿತ್ಯ, ಸಂಗೀತ, ಕಲಾವಿದರಿಗೆ ಪ್ರೇರಣೆ ನೀಡುವ ಮಠವಾಗಿದೆ.ಭಕ್ತರ ಬೇಡಿಕೆಗಳನ್ನು ಈಡೇರಿಸುವ ಶ್ರೀಗಳು ಯಾವುದೇ ಬಡ ಬಲ್ಲಿದತಾರಾತಮ್ಯ ಮಾಡದೇ ಸರ್ವರನ್ನು ಸಮಾನತೆಯಿಂದ ಭಕ್ತರನ್ನು ಕಾಣುತ್ತಾರೆ. ನಾನು ಜಿಪಂ ಸದಸ್ಯ, ಶಾಸಕನಾಗುವ ಕನಸು ಕಂಡಿದ್ದಿಲ್ಲ. ಆದರೆಪೂಜ್ಯ ಹಾರಕೂಡದ ಶ್ರೀಗಳ ಆರ್ಶೀವಾದ ಮಾಡಿರುವುದರಿಂದ ಜಿಪಂ ಸದಸ್ಯಹಾಗೂ ಶಾಸಕನಾಗಲು ಕಾರಣವಾಗಿದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ, ನವಲಿಂಗ ಪಾಟೀಲ್ ಮಾತನಾಡಿದರು.

ಹಾರಕೂಡ ಶ್ರೀಗಳಿಗೆ ಎಪಿಎಂಸಿ ಮಾಜಿ ಸದಸ್ಯ ಶಿವರಾಜ ಪಾಟೀಲ್ ಕಲಗುರ್ತಿಕುಟುಂದವರು ಬೆಳ್ಳಿ ಕಿರೀಟ್ ವಿಟ್ಟು ನಾಣ್ಯಗಳ ತುಲಾಬಾರ ನೇರವೇರಿಸಿದರು.

ಹಾರಕೂಡ ಶ್ರೀಗಳ ಕ್ಯಾಲೆಂಡರ್‌ನ್ನೂ ಬಿಡುಗಡೆಗೊಳಿಸಲಾಯಿತು. ದಿ. ಅಣ್ಣರಾವ್,ಪಾಟೀಲ್ ತಾಯಿ ದಿ.  ಶಾಂತಾಬಾಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಬೆಳಗುಂಪಿಯ ಶ್ರೀ ಪರ್ವತೇಶ್ವರ ಶಿವಾಚಾರ್ಯರು, ಹೊನ್ನಕಿರಣಗಿಯ ಶ್ರೀಚಂದ್ರಗುಂಡ ಶಿವಾಚಾರ್ಯರು, ಯಲಕಪಳ್ಳಿ ಶ್ರೀ ಸೋಮನಾಥ ಶಿವಾಚಾರ್ಯರು,ಸಿದ್ಧರಾಮೇಶ್ವರ, ಭರತನೂರಿನ ಚಿಕ್ಕ ಗುರುನಂಜೇಶ್ವರ ಶಿವಾಚಾರ್ಯರು,ತೋನಸನಳ್ಳಿಯ ಮಲ್ಲಣ್ಣಪ್ಪ ಮಹಾಸ್ವಾಮಿ, ಕೋರವಾರದ ಪ್ರಶಾಂತ್,ದೇವರು, ಮಳಖೇಡದ ಶ್ರೀ ಹಜರತ್ ಸೈಯದ್ ಖಾದ್ರಿ, ಕಲಗುರ್ತಿಯಹಜರತ್ ಸೈಯದ್ ಮೊಹಮ್ಮದ್ ಖಾದ್ರಿ, ಸೈಯದ್ ವಾಹಬ ಖಾದ್ರಿ,

ಸಿದ್ಧಯ್ಯಸ್ವಾಮಿ ಕಲಗುರ್ತಿ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್,ಎಪಿಎಂಸಿ ಮಾಜಿ ಸದಸ್ಯ ಶಿವರಾಜ ಪಾಟೀಲ್ ಕಲಗುರ್ತಿ, ಪ್ರಮುಖರಾದ ಬಸವಂತರಾವಪಾಟೀಲ್, ಚನ್ನಬಸಪ್ಪ ಪಾಟೀಲ್, ಸಿದ್ದಣ್ಣಗೌಡ ಪಾಟೀಲ್, ಕಲ್ಯಾಣರಾವ ಪಾಟೀಲ್,ಡಿವೈಎಸ್ಪಿ ಶಂಕರಗೌಡ ಪಾಟೀಲ್,  ಬಾಬು ಹೊನ್ನಾನಾಯಕ, ಶಿವಾನಂದ ಪಾಟೀಲ್ ಮರತೂರ, ಶಿವಯೋಗಿ ಸಾಹು ಗುಂಡಗುರ್ತಿ, ಶಾಂತಗೌಡ ಪಾಟೀಲ್ ಬೆಣ್ಣೂರ್,ಮನ್ಸೂರ್ ಪಟೇಲ್ ತೊಂಚಿ, ಜಯಪ್ರಕಾಶ ಕಮಕನೂರ, ಸುನಿಲ್ ದೊಡ್ಢಮನಿ,ಶರಣಪ್ಪ ಪೆದ್ದಿ, ಸಿದ್ದಣ್ಣಗೌಡ ತೋನಸನಳ್ಳಿ, ಶರಣಗೌಡ ಪಾಟೀಲ್ ತೋನಸನಳ್ಳಿ,ಶಿವಶರಣಪ್ಪ ಕಮಲಾಪುರ, ಸಂತೋಷ ಪತಂಗೆ, ಡಾ. ಶಿವಶರಣಪ್ಪಮೋತಕಪಳ್ಳಿ, ಚಂದ್ರಕಾಂತ ಪಾಟೀಲ್, ನೀಲಕಂಠ ಗುತ್ತೇದಾರ, ಶಿವಾನಂದಪಾಟೀಲ್ ಅಷ್ಟಗಿ, ವಿಶ್ವನಾಥ ವನಮಾಲಿ, ಸುರೇಶ ಸಜ್ಜನ್, ರವೀಂದ್ರ ಪಾಟೀಲ್ಸೇರದಂತೆ ಇತರರಿದ್ದರು.

ಕಲಾವಿದ ಅಣ್ಣಾರಾವ ಶೆಳ್ಳಗಿ ಪ್ರಾರ್ಥನೆ ಗೀತೆ ಹಾಡಿದರು. ಪ್ರತಿಕಾ ಗಾರಂಪಳ್ಳಿ ಅವರನೃತ್ಯ, ಶಿವಾನಿ ಭಕ್ತಿಯ ಹಾಡು ಜನಮನ ಸೆಳೆಯಿತು.ಶಶಿಕಲಾ ಜಡೆ ನಿರೂಪಣೆ ಮಾಡಿದರು.

ಶ್ರೀಗಳ ಅದ್ದೂರಿಯ ಮೆರವಣಿಗೆ: ಸಾರೋಟದಲ್ಲಿ ಹಾರಕೂಡ ಶ್ರೀಗಳಮೆರವಣಿಗೆಯು ಕಲಗುರ್ತಿ ಗ್ರಾಮದ ಹೊರವಲಯದ ಬಸವೇಶ್ವರವೃತ್ತದಿಂದ ಬೃಹತ ಮೆರವಣಿಗೆಯು ಸುಮಾರು ಒಂದು ತಾಸಿಗೂ ಹೆಚ್ಚುನಡೆದು ವೇದಿಕೆ ಕರೆತರಲಾಯಿತು. ಮೆರವಣಿಗೆಯಲ್ಲಿ ಸುಮಂಗಲೆಯರಿಂದ ಕುಂಭ, ಆರತಿ, ಡೊಳ್ಳು ಕುಣಿತ, ಹಲಗೆ, ಬಾಜಿ, ಭಜಂತ್ರಿ ಹಾಗೂ ಶ್ರೀಗಳ ಪರ

ಜಯಘೋಷ ಮೊಳಗಿದವು. ದೂರದ ಹಾಗೂ ಸುತ್ತಮುತ್ತಲಿನ ಭಕ್ತರುಅಪಾರ ಜನಸಂಖ್ಯೆ ಸೇರಿದ್ದರು. ಅಚ್ಚುಕಟ್ಟಾಗಿ ಪ್ರಸಾದ ವ್ಯವಸ್ಥೆಮಾಡಲಾಗಿತ್ತು.

ಹಾರಕೂಡ ಶ್ರೀಗಳ ಮುಂದಿನ ವರ್ಷದ ೬೩ನೇ ಜನ್ಮ ದಿನಾಚಾರಣೆ ಕಾರ್ಯಕ್ರಮನ. ೨ ರಂದು ಬಸವಕಲ್ಯಾಣ ತಾಲೂಕಿನ ಹಾರಕೂಡ ಬಳಿಯ ಸಿರಗಾಪುರದಲ್ಲಿನಡೆಯಲಿದೆ ಎಂದು ಆಯೋಜಕರು ತಿಳಿಸಿದರು.