ರೈತರ ಕಬ್ಬು ಸಾಗಿಸುವುದು ನಮಗೆ ಬೇಕಾಗಿಲ್ಲ. ಸಿದ್ದಸಿರಿ ಕಾರ್ಖಾನೆ ಬೇಕು
ರೈತರ ಕಬ್ಬು ಸಾಗಿಸುವುದು ನಮಗೆ ಬೇಕಾಗಿಲ್ಲ. ಸಿದ್ದಸಿರಿ ಕಾರ್ಖಾನೆ ಬೇಕು
ಸರಕಾರದ ಆದೇಶ ತಿರಸ್ಕರಿಸಿದ ಪ್ರತಿಭಟನೆಕಾರರು
ಆದೇಶ ಪ್ರತಿಯೊಂದಿಗೆ ವಾಪಸ್ ಆದ ಜಿಲ್ಲಾಧಿಕಾರಿಗಳು
ಚಿಂಚೋಳಿ : ಸಿದ್ಧಸಿರಿ ಎಥಿನಾಲ್ ಪವರ ಕಾರ್ಖಾನೆಗೆ ನಂಬಿಕೊಂಡು ಬೆಳೆದ ರೈತರ ಕಬ್ಬನು ಸಾಗಿಸಬೇಕೆಂದು ರೈತಪರ ಸಂಘಟನೆಗಳು ಸರಕಾರಕ್ಕೆ ಸಲ್ಲಿಸಿದ್ಧ ಮನವಿಗೆ ಸ್ಪಂದಿಸಿ ರೈತರ ಪರವಾಗಿ ಆದೇಶ ಪ್ರತಿ ಹೊತ್ತಿಕೊಂಡು ಕಲಬುರಗಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಚಿಂಚೋಳಿಯಲ್ಲಿ ನಡೆಸುತ್ತಿದ್ದ ಪ್ರತಿಭಟನೇಕಾರರ ಸ್ಥಳಕ್ಕೆ ಆಗಮಿಸಿದರು.
ಆದರೆ ಕಬ್ಬು ಸಾಗಿಸುವ ಆದೇಶದ ಪ್ರತಿಯೊಂದಿಗೆ ಬಂದ ಅಪರ ಜಿಲ್ಲಾಧಿಕಾರಿಗಳ ಮನವಿಯನ್ನು ಸ್ವೀಕರಿಸದೆ ತಿರಸ್ಕರಿಸಿ, ಅಧಿಕಾರಿಗಳನ್ನು ವಾಪಸ್ ಕಲಬುರಗಿಗೆ ಕಳುಹಿಸಿದರು.
ಕಳೆದ ಒಂದು ವಾರದಿಂದ ನಿರಂತರ ಧರಣಿ ನಡೆಸುತ್ತಿದ್ದು, ಕಬ್ಬು ಸಾಗಿಸುವುದು ನಮ್ಮ ಉದ್ದೇಶದ ಬೇಡಿಕೆಯಲ್ಲ. ಸರಕಾರ ವಾಯು ಮಾಲಿನ್ಯ ಕಾರಣ ಒಡ್ಡಿ ಬಂದ್ ಮಾಡಿರುವ ಸಿದ್ದಸಿರಿ ಎಥೆನಾಲ್ ಪವರ ಕಾರ್ಖಾನೆ ಪ್ರಾರಂಭಕ್ಕೆ ಹೊರತು ರೈತರ ಕಬ್ಬು ಸಾಗಿಸುವುದು ನಮ್ಮ ಉದ್ದೇಶದ ಬೇಡಿಕೆಲ್ಲ ಎಂದು ಪ್ರತಿಭಟನೆಕಾರರು ಸರಕಾರ ಕೊಟ್ಟ ಆದೇಶದ ಮನವಿ ಸ್ವೀಕರಿಸದೇ ತಿರಸ್ಕರಿಸಿ ಕಳುಹಿಸಿದರು.
ಸರಕಾರ ರೈತರ ಪರವಾಗಿರಲಿದೆ ಆದೇಶ ಪಡೆದು ಪ್ರತಿಭಟನೆ ಕೈ ಬಿಡಬೇಕೆಂದು ಅಧಿಕಾರಿಗಳ ಮನವಿಗೆ ಒಪ್ಪದೇ ತಿರಸ್ಕರಿಸಿ, ನಮ್ಮ ಉದ್ದೇಶ ಈಡೇರುವವರೆಗೆ ಪ್ರತಿಭಟನೆನಿಲುವುದಿಲ್ಲ. ಹೀಗೆ ಮುಂದುವರೆಯಲಿದೆ ಎಂದು ಶಿವಶರಣಪ್ಪ ಜಾಪಟ್ಟಿ, ನಂದಿಕುಮಾರ ಪಾಟೀಲ್, ವೀರಣ್ಣ ಗುಂಗಣಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಹಾರ ಇಲಾಖೆ ಅಧಿಕಾರಿ ಭೀಮರಾಯ ಮಸಾಲಿ, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ವೆಂಕಟೇಶ ದುಗ್ಗನ್, ರವಿ ಚಿಟ್ಟಾ, ಪಿ ಎಸ್ ಐ ಗಂಗಮ್ಮ, ಶರಣು ಪಾಟೀಲ್ ಮೋತಕಪಲ್ಲಿ, ಅಬ್ದುಲ್ ಬಾಶೀದ್, ಜಗನ್ನಾಥ ಗುತ್ತೇದಾರ, ನಾಗೇಶ ಗುಣಾಜಿ, ಶಬೀರ್, ಖಲಿಲ್ ಪಟೇಲ್ ಸೇರಿ ಇತರರು ಇದ್ದರು.