ಬೀದರ| ಕನ್ನಡವು ಉದ್ಯೋಗದ ಭಾಷೆ ಆಗಲಿ- ಬಿ. ಹೆಚ್. ನಿರಗುಡಿ

ಬೀದರ| ಕನ್ನಡವು ಉದ್ಯೋಗದ ಭಾಷೆ ಆಗಲಿ- ಬಿ. ಹೆಚ್. ನಿರಗುಡಿ

ಬೀದರ| ಕನ್ನಡವು ಉದ್ಯೋಗದ ಭಾಷೆ ಆಗಲಿ- ಬಿ. ಹೆಚ್. ನಿರಗುಡಿ

 ಕನ್ನಡವು ಉದ್ಯೋಗದ ಭಾಷೆಯಾಗಲಿ, ಕನ್ನಡ ಕಲಿತವರಿಗೆ ಮಾತ್ರ ಕರ್ನಾಟಕದಲ್ಲಿ ಉದ್ಯೋಗ ದೊರಕುವಂತೆ ಕಠಿಣ ಕಾನೂನು ತರುವಂತಾಗಬೇಕು. ಕನ್ನಡ ಉಳಿಸಿ ಬೆಳೆಸುವಲ್ಲಿ ಸರ್ಕಾರದ ಮೇಲೆ ಅವಲಂಬಿತರಾಗದೆ ಕನ್ನಡಿಗರಾದ ನಾವೆಲ್ಲರು ಕಡ್ಡಾಯವಾಗಿ ಕನ್ನಡವನ್ನು ಬಳಸುತ್ತಾ, ನಮ್ಮ ಮಕ್ಕಳನ್ನು ಕನ್ನಡದಲ್ಲಿಯೆ ಓದಿಸಿ ಕನ್ನಡ ಭಾಷೆಯನ್ನು ಉಳಿಸುವಲ್ಲಿ, ಬೆಳಸುವಲ್ಲಿ ನಮ್ಮ ಪಾಲಿನ ಪಾತ್ರ ನಿರ್ವಹಿಸಬೇಕು. ಕನ್ನಡಕ್ಕೆ ತನ್ನದೆ ಆದ ಪರಂಪರೆ ಹಾಗೂ ವೈಶಿಷ್ಟತೆ ಇದೆ. ಸಾಮಾಜಿಕ ಜಾಲತಾಣದ ಬೆಳವಣಿಗೆಯಿಂದಾಗಿ ಕನ್ನಡಕ್ಕೆ ಜಾಗತೀಕತೆಯ ಮನ್ನಣೆ ದೊರತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ. ಹೆಚ್. ನಿರಗುಡಿ ತಿಳಿಸಿದರು.

 ಅವರು ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ದಿನಾಂಕ : 10.11.2024 ರಂದು ಮಧ್ಯಾಹ್ನ 3:00 ಗಂಟೆಗೆ ಪೂಜ್ಯಶ್ರೀ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ನಿಮಿತ್ಯ ಉಪನ್ಯಾಸ – ಸಾಂಸ್ಕೃತಿಕ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

 ಯುವ ಚಿಂತಕರು ಹಾಗೂ ಶಿಕ್ಷಕರಾದ ಪ್ರಕಾಶ್ ದೇಶಮುಖ ವಿಶೇಷ ಉಪನ್ಯಾಸ ನೀಡುತ್ತಾ, ಸಾಹಿತಿಗಳು ತಮ್ಮ ಬದುಕು ಬರಹವನ್ನು ಒಂದಾಗಿಸದ ಹೊರತು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ದೊರೆಯದೆ ಹೋಗಬಹುದು ಹಾಗಾಗಿ ಸಮಾಜಕ್ಕೆ ತಿದ್ದುವ ಶಕ್ತಿಯುಳ್ಳ ಬರಹಗಾರರು, ಸಾಹಿತಿಗಳು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಾಹಿತ್ಯ ರಚಿಸಲು ಮುಂದಾಗಬೇಕು. ಭಾವನೆಗಳನ್ನು ಮಾರಿಕೊಳ್ಳದೆ ಸತ್ವಯುತ ಬರಹದ ಮೂಲಕ ಮುಂದಿನ ಜನಾಂಗಕ್ಕೆ ಹೊಸ ಬೆಳಕನ್ನು ನೀಡಬೇಕಾದ ಅವಶ್ಯಕತೆ ಇದೆ ಎಂದು ವಿವರಿಸಿದರು.

 ಅಧ್ಯಕ್ಷತೆಯನ್ನು ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜೀವಕುಮಾರ ಅತಿವಾಳೆ ವಹಿಸಿಕೊಂಡು ಮಾತನಾಡಿ, ಗಡಿಜಿಲ್ಲೆ ಬೀದರನಲ್ಲಿ ಪ್ರತಿಭೆಗಳ ಕೊರತೆ ಇಲ್ಲ. ಸರಿಯಾದ ಮಾರ್ಗದರ್ಶನ ಹಾಗೂ ಸೂಕ್ತ ವೇದಿಕೆ ಸಿಗದೆ ಇರುವ ಕಾರಣಕ್ಕೆ ನಿಜವಾದ ಪ್ರತಿಭೆಗಳು ಬೆಳಕಿಗೆ ಬರದೆ ಇರಲು ಕಾರಣವಾಗಿದೆ. ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ನಿರಂತರವಾಗಿ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ, ಎಲೆಮರೆ ಕಾಯಿಯಂತಿರುವ ಪ್ರತಿಭೆಗಳಿಗೆ ಬೆಳಕಿಗೆ ತರುವ ಕೆಲಸಮಾಡಲಾಗುತ್ತಿದೆ ಎಂದು ಹೇಳಿದರು.

 ದಿವ್ಯ ಸಾನಿಧ್ಯ ವಹಿಸಿಕೊಂಡಿದ ಹಿರೇಮಠ ಸಂಸ್ಥಾನ ಬೇಮಳಖೇಡ- ಗೋರಟಾ - ಬೀದರ್‌ನ ಪೂಜ್ಯರಾದ ಡಾ. ರಾಜಶೇಖರ ಶಿವಾಚಾರ್ಯರು ಆಶಿರ್ವಚನ ನೀಡುತ್ತಾ, ಸಂಜೀವಕುಮಾರ ಅತಿವಾಳೆ ಪ್ರತಿಭಾವಂತ ಸಾಹಿತಿ ಹಾಗೂ ಅಪ್ರತಿಮ ಸಂಘಟಕರಾಗಿ ಗಡಿಜಿಲ್ಲೆಯಲ್ಲಿ ನಿರಂತರವಾಗಿ ಕನ್ನಡ ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ, ಅವರಿಗೆ ಎಲ್ಲರು ಸಹಕಾರ ನೀಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ ಮಾತನಾಡಿ, ಕನ್ನಡ ನಮ್ಮ ಅಸ್ಮಿತೆಯಾಗಿದೆ, ಸಾವಿರಾರೂ ವರ್ಷಗಳ ಇತಿಹಾಸವರುವ ಕನ್ನಡ ಭಾಷೆಯು ಮುಂದೆಯು ಕೂಡ ಇನ್ನು ಸಮೃದ್ಧವಾಗಿ ಬೆಳೆದು ಉಳಿಯುತ್ತದೆ. ಅತಿವಾಳೆಯವರು ಮಾಡುತ್ತಿರುವ ಕಾರ್ಯ ಮಾದರಿಯಾಗಿದೆ ಎಂದು ತಿಳಿಸಿದರು.

 ನಿವೃತ್ತ ಅಧಿಕಾರಿ ಪುಂಡಲೀಕರಾವ್ ಇಟಕಂಪಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಭಾರತಿ ವಸ್ತ್ರದ್, ನಿವೃತ್ತ ಪ್ರಾಚಾರ್ಯ ಡಿ. ನಿಜಾಮುದ್ದೀನ್, ಜೆಸ್ಕಾಂ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಎಸ್. ಮನೋಹರ, ಕನ್ನಡ ಪ್ರಗತಿ ಸಂಘದ ಅಧ್ಯಕ್ಷ ಉಮಾಕಾಂತ ಮೀಸೆ, ಯುವ ನಾಯಕ ಸಂತೋಷಕುಮಾರ ಜೋಳದಾಪಗೆ, ಡಯಟ್ ಉಪನ್ಯಾಸಕರಾದ ಗೀತಾ ಎಸ್. ಗಡ್ಡಿ, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರ ಲಂಜವಾಡಕರ, ಕರುನಾಡು ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ. ಶಾಮರಾವ ನೆಲವಾಡೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸುನೀಲ ಭಾವಿಕಟ್ಟಿ, ವೈಷ್ಣೋದೇವಿ ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷ ಸಂಗಮೇಶ ಬಿರಾದಾರ ಮುಖ್ಯ ಅತಿಥಿಗಳಾಗಿ ಆಗಮಿಸಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

 ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಶ್ರೀಕಾಂತ ಬಿರಾದರ, ವೆಂಕಟರಾವ ಮಹಿಂದೆ, ಜಿ. ಬಾಬುರಾವ, ಸುಜಾತಾ ಪೂಜಾರಿ, ಡಾ. ರಾಜಕುಮಾರ ಅಲ್ಲೂರೆ, ಕಾಶಪ್ಪಾ ಚಕಾರೆ, ಜಗದೀಶ್ವರ ಬಿರಾದಾರ, ಚಂದ್ರಕಾಂತ ನಿರಾಟೆ, ಅನೀಲಕುಮಾರ ದೇಶಮುಖ, ರಘುನಾಥ ಭೂರೆ, ಪ್ರಭಾಕರ ಸೋನಿ, ವಕೀಲ ಅಹ್ಮದ್ ಪಟೇಲ್, ಸುಧಾ ಜಿ, ರಾಯಿಸ್ ಫಾತಿಮಾ, ಸಂಜೀವರೆಡ್ಡಿ ಜಂಪಾ, ಪಂಡಿತ ಕಲ್ಯಾಣಿ, ಘಾಳೆಪ್ಪಾ ನಾಗೊರೆ, ಅಶೋಕ ಕೊಡ್ಲಿ, ತುಕಾರಾಮ ರೊಡ್ಡೆ, ಗೋವಿಂದ ಶಿಂಧೆ, ಜಗನ್ನಾಥ ಪಾಟೀಲ, ಸಂಜುಕುಮಾರ ಮೇತ್ರೆ, ಅನೀಲಕುಮಾರ ಕಮಠಾಣೆ, ಎಂ. ಡಿ. ಸಾಜೀದ್, ಉಮಾಕಾಂತ ಜೋಜನಾ, ಮಹೆಬೂಬ ಉಸ್ತಾದ, ಶಶಿಕಲಾ ಮೇತ್ರೆ, ಬಾಲಾಜಿ ಭೈರಾಗಿ, ಶ್ರೀನಿವಾಸರೆಡ್ಡಿ ಮುದ್ನಾಳ, ಸಂತೋಷ ಎಣಕುರೆ, ಕ್ಷೇಮಲಿಂಗ ಬೆಳಮಗಿ, ಬಸೀರ್ ಧೂಪತಮಹಾಗಾಂವ, ಸೋಮಶೇಖರ ಸ್ವಾಮಿ, ರಾಜಪ್ಪ ಸೋನಿ, ತ್ರಿಂಬಕ ಸ್ವಾಮಿ, ಪ್ರಶಾಂತ ವಿಶ್ವಕರ್ಮ, ವಿಜಯಕುಮಾರ ಭಂಡೆ, ಮಹೇಶ ಮಂಗಾ, ಶಕೀಲ್ ಐ. ಎಸ್., ಡಾ. ಸುಚಿತಾನಂದ ಮಲ್ಕಾಪೂರೆ, ಮಾಣಿಕ ಭೂರೆ, ಶಂಕರ ಬಾಪೂರೆ, ದೇವಪ್ಪ ಚಾಂಬಾಳೆ, ಭೀಮಶಾ ನಾಟೇಕರ್, ಕಾಶಿನಾಥ ಮಲ್ಲಿಗೆ, ವಿಠಲರಾವ ಹೊಕ್ರಾಣೆ, ಬೊಮ್ಮಶೆಟ್ಟಿ ಬಿರಾದಾರ, ಮಾಣಿಕಪ್ಪ ಖಂಡ್ರೆ, ಶಿವಕುಮಾರ ಪಾಟೀಲ ತೇಗಂಪುರ, ಚನ್ನವೀರ ಜಮಾದಾರ, ಗೋವಿಂದರೆಡ್ಡಿ ನಾರಾಯಣಪೂರೆ, ಧನರಾಜ ರಾಜೋಳೆ, ರಘುಪತಿ ಖಾಜಾಪೂರೆ, ಶಫಿಯುದ್ದೀನ್ ನಾಗೊರೆವಾಲೆ, ಸೋಮನಾಥ ಬಿರಾದಾರ ಹಕ್ಯಾಳ, ಸಂತೋಷ ಹಂದಿಕೇರೆ, ಬಾಲಾಜಿ ಪವಾರ, ಮಲ್ಲಿಕಾರ್ಜುನ ಮುರ್ಕೆ, ಸಂತೋಷ ಬೊರೆ, ರಮೇಶ ಮಮದಾಪೂರೆ, ಮೋಹನ ಟೊಳ್ಳೆ, ಶ್ರೀಪತಿ ಮೇತ್ರೆ, ಭೀಮರಾವ ನೆಲವಾಡಕರ್, ಪ್ರಬಣ್ಣಾ ಸುತಾರ, ಅರವಿಂದ ಹುಡಗಿಕರ್, ಮನೋಹರ್ ಶಿರನೂರೆ, ನಾಗರಾಜ ಉಪ್ಪಿನ, ಚಂದ್ರಕಾಂತ ಹಳ್ಳಿಖೇಡಕರ್, ಮಚೇಂದ್ರನಾತ ಕಾಂಬಳೆ, ಅಶ್ವಜೀತ ದಂಡಿನ್, ಪ್ರಿಯಾಂಕ ಹೆಚ್. ಬಿ., ಅವಿನಾಶ ಸೋನಿ ಇವರೆಲ್ಲರಿಗೆ ಸನ್ಮಾನಿಸಿ ಗೌರವಿಸಲಾಯಿತು.

 ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕರಾದ ರಾಣಿ ಸತ್ಯಮೂರ್ತಿ ನಿರ್ದೇಶನದಲ್ಲಿ ಕನ್ನಡ ಗೀತೆಗಳ ನೃತ್ಯೋತ್ಸವ, ಸವಿಗಾನ ಸಂಗೀತ ಅಕಾಡಮಿ ನಿರ್ದೇಶಕರಾದ ಭಾನುಪ್ರಿಯ ಅರಳಿ ಹಾಗೂ ಅವರ ತಂಡದಿAದ ಕನ್ನಡ ಗೀತೆಗಳ ಗಾಯನೋತ್ಸವ ಹಾಗೂ ಅಶ್ವಿನಿ ರಾಜಕುಮಾರ ಬಂಪಳ್ಳಿ ಅವರಿಂಗ ಸುಗಮ ಸಂಗೀತ, ಕಲ್ಯಾಣರಾವ ಮದರಗಾಂವಕರ, ಚನ್ನಮ್ಮ ಡೊಣಗಾಪೂರೆ ಅವರಿಂದ ವಚನ ಗಾಯನ, ವೈಜಿನಾಥ ಬಾಬಶೆಟ್ಟಿ, ಮಲ್ಲಿಕಾರ್ಜುನ ಪಾಟೀಲ ಸುಲ್ತಾನಪುರ ಅವರಿಂದ ತತ್ವಪದ ಗಾಯನ, ಬಸವರಾಜ ಕಟ್ಟಿಮನಿ, ಸೃಜನ್ಯ ಅತಿವಾಳೆ, ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘ, ಡಾ. ಬಿ. ಆರ್. ಅಂಬೇಡ್ಕರ ಸಾಂಸ್ಕೃತಿಕ ಪ್ರಚಾರ ಕಾರ್ಯ ಸಮಿತಿ, ಮಳಚಾಪೂರ, ಅಕ್ಕಮಹಾದೇವಿ ಭಜನಾ ತಂಡ ಚಿಟ್ಟಾವಾಡಿ ಅವರಿಂದ ಜಾನಪದ ಗಾಯನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಮಿಲಾಪೂರ ಮಕ್ಕಳಿಂದ, ಕೊಳಾರ (ಕೆ), ರಾಮಸ್ವಾಮಿ ಪೇರಿಯಾರ ಪ್ರೌಢ ಶಾಲೆ ಮಕ್ಕಳಿಂದ ಜಾನಪದ ನೃತ್ಯ ಸೇರಿದಂತೆ ಅನೇಕ ಕಲಾ ತಂಡಗಳಿಂದ ಹಾಗೂ ಕಲಾವಿದರಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಲಬುರಗಿಯ ಅಂಬಾರಾಯ ಕೋಣೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಂಗೀತ ಸಾಹಿತ್ಯ ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 ಬಸವರಾಜ ಮುಲಗೆ ಸ್ವಾಗತಿಸಿದರೆ, ದಿಲೀಪಕುಮಾರ ಮೋಘ ನಿರೂಪಿಸಿದರು, ಅಜಿತ್ ಎನ್ ವಂದಿಸಿದರು.