ಸಾಮರಸ್ಯದ ಸಂತ ಹಜರತ್ ಸೈಯದ್ ಜಹೀರ್ ಪಾಷಾ ಪಾಷಾ

ಸಾಮರಸ್ಯದ ಸಂತ        ಹಜರತ್ ಸೈಯದ್ ಜಹೀರ್ ಪಾಷಾ  ಪಾಷಾ

ಸಾಮರಸ್ಯದ ಸಂತ ಹಜರತ್ ಸೈಯದ್ ಜಹೀರ್ ಪಾಷಾ ಪಾಷಾ

       ಭಾರತ ದೇಶ ಹಲವು ಧರ್ಮ,ಸಂಸ್ಕೃತಿ ಭಾವಗಳಸಂಗಮ.ಜಾತ್ಯತೀತ ನೆಲ.ಸೌಹಾರ್ದ ಸಮನ್ವಯತೆ ಹೊಂದಿದ ನಾಡಾದಂತೆ ಪರಧರ್ಮ ಸಹಿಷ್ಣುತೆಯನ್ನುನಮ್ಮ ಹಿಂದಿನ ರಾಜಹಾರಾಜರು ಕಾಪಾಡಿಕೊಂಡು ಬಂದಂತೆ ಇಂದಿಗೂ‌ತಮ್ಮದೇ ಮೌಲ್ಯ ಉಳಿಸಿಕೊಂಡು ಬಂದವರು. ಭಾರತ ದೇಶಕ್ಕೆ ಕ್ರೈಸ್ತರು,ಮುಸ್ಲಿಮರು ಬಂದಂತೆ ಅವರು ನಮ್ಮವರಾಗಿ ಭಾರತೀಯರಾಗಿ ನೆಲೆ ನಿಂತವರು. ಅವರು ಎಲ್ಲರೊಂದಿಗೆ ಬೆರೆತುಕೊಂ ಡು ಬಂದವರಲ್ಲಿ ಮುಸ್ಲಿಮ್ ಧರ್ಮವೂ ಒಂದು. ನಾಮಗಳು‌ ಹಲವಾದರೂ ದೇವನೊಬ್ಬನೇ ಆತನ ವಿಚಾರ ಸಂದೇಶ ಮನುಕುಲದ ಉದ್ಧಾರ,ಸಮಾನತೆ ಬೆಸೆಯುವುದಾಗಿದೆ.ಅವುಗಳಲ್ಲಿ ಹೈದ್ರಾಬಾದ ಕರ್ನಾ ಟಕ ಪ್ರದೇಶವನ್ನು ಬಹಮನಿ,ಬರೀದ್ ಶಾಹಿ,ಆದಿಲ್ ಶಾಹಿಗಳಂತೆ ನಿಜಾಮರು ಸಹಿತ ೧೭೨೪ ರಿಂದ ೧೯೪ ೮ ರವರೆಗೆ ಏಳು ಸಂತತಿ ಆಡಳಿತ ನಿರ್ವಹಿಸಿದರು. ಅವರೆಲ್ಲ ಪ್ರೀತಿ,ಪ್ರೇಮ,ಬಂಧುತ್ವಕ್ಕೆ‌ಹೆಸರಾಗಿದೆ.ಹಾಗೇ

ಮಹ್ಮದ ಪೈಗಂಬರ್ ಅವರು ಮಕ್ಕಾ- ಮದೀನ್ ದ ಮೂಲಕ ಅರಬ್ಬದಿಂದ ಭಾರತ ಪ್ರವೇಶಿಸಿ ಬಹು ದೊಡ್ಡ ಸಂದೇಶ ನೀಡಿದರು.ಖಾಜಾ ಬಂದೇನವಾಜ್, ಸೂಫಿ ಸಂತರ ಮೂಲಕ ಅನುಭಾವ ಪರಂಪರೆ ಬೆಳೆಸಿ ಕನ್ನಡ ನೆಲದಲ್ಲಿ ಮತ್ತು ಇಂದಿನ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಭಾವೈಕ್ಯತೆ ಕೋಮು ಸಾಮರಸ್ಯವನ್ನು ಬೆಸೆದವರು.

     ಅದರಲ್ಲೂ ರಾಯಚೂರು ಜಿಲ್ಲೆ ಸೌಹಾರ್ದ ಕೇಂದ್ರ.

ಮುದಗಲ್ಲ ಮೊಹರಮ್,ಕುದರಿಮೋತಿ,ಘೋಟವಾಡಿ

ಹಲವು ಕೇಂದ್ರಗಳು ಬಹು ಸಾಮರಸ್ಯ ಹೊಂದಿವೆ. ಅದರಂತೆ ದೇವದುರ್ಗದ ಹಜರತ್ ಸೈಯ್ಯದ ಜೈಜೀರ್ ಪಾಷಾ ಒಬ್ಬರು.ಇವರು ಸರ್ವಧರ್ಮ ಸಮನ್ವಯ ಸಂತರು.ಎಲ್ಲಾ ಜಾತಿ- ಮತ- ಧರ್ಮದ ಚಿಂತಕರು. ಜೊತೆಗೆ ಸಾಮರಸ್ಯ ಮೂಲಕ ಜನಮನದಲ್ಲಿ "ತಾತನವರು " ಎಂದು ಪ್ರಸಿದ್ದರಾಗಿ ಈ ನಾಡಿನ ಭಕ್ತರ ನಾಡಿಮಿಡಿತ ಮಿಡಿದ ಭಾವೈಕ್ಯತೆಯ ಸಂತರಾಗಿದ್ದಾರೆ.

    ‌ ದೇವದುರ್ಗದ ಮುತ್ತು ಭೂಮಿಗೆ ಬಿದ್ದಾಗ ಈ ಮನೆತನದ ಬಾಗಿಲು ಅಷ್ಟೇ ತರೆಯಲಿಲ್ಲ.ಧರ್ಮದ ಬಾಗಿಲು ತೆರೆದಿತ್ತು.ಸೈಯದ್ ಮಹಿಬೂಬ ಸಾಬ ಮತ್ತು ಬೇಗಂ ಅವರ ಮಗನಾಗಿ ಸೈಯದ್ ಜಹೀರ್ ಪಾಷಾ ಅವರು ೦೧-೦೬-೧೯೮೯ರಂದು ದೇವದುರ್ಗ ದಲ್ಲಿ ಜನಿಸಿದರು.ಪ್ರಾಥಮಿಕ,ಪ್ರೌಢ ಶಿಕ್ಷಣ ಪಡೆದರು.

ಆಗಲೇ ಎಸ್.ಎಸ್.ಎಲ್.ಸಿ ಪಡೆದು ನಂತರ ಶಿಕ್ಷಣಕ್ಕೆ

ಶರಣು ಹೊಡೆದರು. ಆಧ್ಯಾತ್ಮದ ಶಿಖರಕ್ಕೆ ಹೋದರು.

ಪೈಗಂಬರ್, ಶರಣರು,ದಾಸರು,ಸಂತರು,ಅನುಭಾವಿ‌ಗ ಳ ಮೊರೆ ಹೋದರು.ದರ್ಗಾ,ಗುಡಿ,ಗುಂಡಾರ ಸುತ್ತಿ; ತಿರುಪತಿ, ಬಾಂಬೆ ಮೊದಲಾದ ಕಡೆ ಸುತ್ತಿ,ಗ್ಯಾರೇಜ್ ದಲ್ಲಿ ಎಲೆಕ್ಟ್ರಿಕ್ ಕೆಲಸ ನಿರ್ವಹಿಸಿ ವಾಪಾಸಾದರು.

ಅಲ್ಲಿಂದಲೇ ವ್ಯಕ್ತಿತ್ವದ ವಿಸ್ತೃತವಾಗಿ ಬೆಳೆಯ ಹತ್ತಿದರು

          ಇವರ ಮನೆತನವು ಬಹು ಸಮೃದ್ಧವಾಗಿ ಬೆಳೆ ದು ಬಂತು.ಅದರಲ್ಲಿ ಸೈಯ್ಯದ ಅಬ್ದುಲ್ ಖಾದ್ರಿ,ಸೈಯ್ಯದ್ ಕರೀಂಸಾಬ,ಸೈಯ್ಯದ ಪೀರಸಾಬ, ಸೈಯದ್ ಪೀರಸಾಬ,ಸೈಯದ್ ಬಂದಗಿ ಸಾಬ, ಮತ್ತು ಬಂದಗಿ ಮಹಮ್ಮದ ಐದು ಜನ ಮಕ್ಕಳು.ಇವರ ಕೊ ನೆಯ ಸೈಯದ್ ಮಹಿಬೂಬ ಸಾಬರ ಮಗನೇ ಈಗಿನ

ಹಜರತ್ ಸೈಯದ್ ಜಹೀರ್ ಪಾಷಾರವರು.

     ಕೇವಲ ಹದಿನಾರು ವರ್ಷದವರೆಗೆ ಓದಿ- ಓದಿಗೆ ಶರ ಣು‌ ಎಂದು ಧಾರ್ಮಿಕ ಸೇವಾ ಮನೋಭಾವನೆ ಹುಟ್ಟಿ ಗೆ ಅವರು ಬೆಲಕೆವ ಸಿರಿ ಮೊಳಕೆಯಲ್ಲಿ ಕಾಣು‌‌ ಎಂಬಂ

ತೆ ಆಗಲೇ ಆಟವಾಡಿಕೊಂಡು,ಹದಿ ಹರೆಯದ ಕನಸು ಕಾಣುವ ಹೊತ್ತಿಗಾಗಲೇ ಆಧ್ಯಾತ್ಮದ ಬೆನ್ನು ಹತ್ತಿದ್ದು ಅವರ ಯೋಗದಲ್ಲಿ ಕೂಡಿ ಬಂದಿರಬೇಕು ಹಾಗಾಗಿ ಅವರೊಬ್ಬ ಬಹು ದೊಡ್ಡ ಮಹಾ ಶರಣ ಸಂತರಾಗುವ ಲಕ್ಷಣ ಆಗಲೇ ಮೂಡಿದ್ದು ಅವರ ಮುಂದಿನ ಧ್ಯೋತ ಕವಾಗಿ ಬೆಳೆದವರು. ಇವರು ಮುಂದೆ ಇಲಕಲ್ಲದ ಸೈಯದ್ ಅಬ್ದುಲ್ ಖಾದರ್ ಹ್ಯಾರಿಪ್ ಅವರ ಹತ್ತಿರ ಇದ್ದು ಸಾಧನೆಯನ್ನು ಕಂಡು ಅವರ ಹತ್ತಿರ ದೀಕ್ಷೆ ( ಕೆಲಾಫ್),ಪಡೆದು ಕೊಂಡರು.

          ಯಾತ್ರೆ ಕೈಗೊಂಡರು. ದೇವರ ಸ್ಮರಣೆಯನ್ನು ಮಾಡುತ್ತಲೇ, ತಪ್ಪಸ್ಸುಗಳ ಮೂಲಕ ಜ್ಞಾನೋದಯ ವಾದಾಗಲೇ ಬಾಲ ತಪಸ್ವಿಯಾದರು.ಬೆಟ್ಟದ ಮೇಲೆ ನಲವತ್ತೊಂದು ದಿವಸ ಅನುಷ್ಠಾನ ಮಾಡಿದರು. ಇಪ್ಪತ್ತು ನಾಲ್ಕು ವರ್ಷದಲ್ಲಿ ಆಗಲೇ ಸಂತರಾದರು.ಈ ಭಾಗದ ತಾತನವರಾದರು ಜನಮನದ ತುಂಬ ಭಯ, ಭಕ್ತಿಯಿಂದ ಸರ್ವ ಜನಾಂಗದ ಶಾಂತಿಯ ತೋಟವಾ ಗಿ ಅರಳಿ ನಿಂತರು.ಜಾತ್ಯತೀತ ಪವಾಡ ಪುರುಷರಾಗಿ ಈ ಭಾಗದ ಅಧಿದೈವವಾಗಿ ಹೊರಹೊಮ್ಮಿದರು. ೨೦೦೯ ಮತ್ತು ೨೦೧೦ರಲ್ಲಿ ಮತ್ತೆಎರಡು ಬಾರಿ ಒಟ್ಟು

ಮೂರು ಬಾರಿ ಅನುಷ್ಠಾನ ಮಾಡಿದವರು.ಆ ಜ್ಞಾನ ಹಿಡಿತದ ಮೂಲಕ‌ ತಮ್ಮಲ್ಲಿ ಇಂದ್ರಿಯಗಳ ನಿಗ್ರಹಿಸಿ ಕೇವಲ ಕುಟುಂಬ,ಸಮುದಾಯ,ಸಮಾಜದ ವ್ಯಕ್ತಿ ಆ ಗದೇ ಸಮಾಜದ ಎಲ್ಲ ವರ್ಗಸಮುದಾಯಗಳ ಶಕ್ತಿ ಯಾಗಿ ಮಾನವೀಯ ಮೌಲ್ಯದ ಹರಿಕಾರರಾಗಿ ಮೊದ ಲು ಮಾನವರಾದವರು.ಕುಲಂ ಕುಲಂಅಲ್ತು ಚಲಂ ಕುಲಂ ಮಾನವ ಕುಲಂ ತಾನೊಂದೇ ವಲಂ ಎಂಬ ಪಂಪನ ಆಶಯದಂತೆ ಬಾಳಿದವರು; ಬಾಳುತ್ತಿರುವವ ರು.

         ಅಜ್ಮೀರದ ಪವಾಡ ಜರುಗಿತು.ಅಂತಹ ಜನ ಜಂ ಗುಳಿ ಇದ್ದ ಹೊತ್ತಿನಲ್ಲಿ ಇವರಿಗೆ ನೇರ ದರ್ಶನವಾಗುತ್ತ ದೆ.ಮಳೆ ಬಂದರು ಇವರಿಗೆ ಅದಾವುದು ತೋಚದೆ ಬಂದವರು. ದರ್ಗಾದ ಪರಂಪರೆ ಮುಂದುವರಿಸಿ ಅದ ಕ್ಕೆ ತಕ್ಕಂತೆ ತಮ್ಮ ಜೀವನ ರೂಪಿಸಿದರು.ಜಪ,ತಪಗಳ ಲ್ಲಿ ಮಗ್ನರಾದರು.ಅಂಜಳ ಗ್ರಾಮದಲ್ಲಿ ರಾಮದಾಸ ಬಡೇಸಾಬ(ಪಿಂಜಾರ) ಅವರು ದಾಸ ಸಾಹಿತ್ಯಕ್ಕೆ ಮೊರೆ ಹೋದರು.ಪಿಂಜಾರ ಬಡೇಸಾಬ ರಾಮದಾ ಸರಾಗಿ ದಾಸ ಸಾಹಿತ್ಯಲ್ಲಿ ಮುಸ್ಲಿಂ ದಾಸರಾದದ್ದು ಇವ ರೇ ಮೊದಲಿಗರು.ಸಾಮಾಜಿಕ,ಭಕ್ತಿಯ ಕೀರ್ತನೆ ರಚಿಸಿ ಬಹು ದೊಡ್ಡ ದಾಸರಾದರು.ಮುಂದೆ ಇವರ ಕುರಿತು ಡಾ.ಸ್ವಾಮಿರಾವ್‌ ಕುಲಕರ್ಣಿ ಅವರು ಪಿಎಚ್.ಡಿ ಸಂಶೋಧನೆ ಮಾಡಿ ಡಾಕ್ಟರೇಟ್ ಪದವಿ ಪಡೆದರು. ಅವರ ಸಮಗ್ರ ದಾಸ ಸಂಪುಟ ಹೊರ ಬಂದಿವೆ.ಅವರ ಪ್ರಭಾವ,ಶರಣರು, ದಾಸರು,ತತ್ವ ಪದಕಾರರ ಪ್ರಭಾವ ಇವರ ಮೇಲಾಗಿ ಒಬ್ನ ಸಮರ್ಥ ಅನುಭಾವಿ‌ ಸಂತರಾ ದ ಬಗೆ ಅನನ್ಯವಾದುದು.

        ಲಿಂಗಾತೀತವಾಗಿ ಗಂಡು ಹೆಣ್ಣು ಬೇಧ ಭಾವ‌ ಅಳಿಸಿ ಮನುಷ್ಯ ಜಾತಿ ಹೊಂದೇ ಎಂದು ಮೊಲೆ ಮುಡಿ ಬಂದರೆ ಹೆಣ್ಣೆಂಬರು,ಗಡ್ಡ ಮೀಸೆ ಬಂದರೆ ಗಂಡೆಂಬರು ನಡುವೆ ಸುಳಿವ ಆತ್ಮ ಹೆಣ್ಣು ಅಲ್ಲ‌ಗಂಡು

ಅಲ್ಲ ಕಾಣಾ ರಾಮನಾಥರಂತೆ ಲಿಂಗ ಅಸಮಾನತೆ ದೂರ ಮಾಡಿದರು.ಸಾಮರಸ್ಯ, ಸಾಮಾಜಿಕ ಕಳಕಳಿ, ಲೋಕ ಕಲ್ಯಾಣ ಸುಖ,ಸಂತೋಷ, ನೆಮ್ಮದಿ, ಶಾಂತಿ, ಸೌಹಾರ್ದ, ಸಮಾಜ,ಸಮಾನತೆ,ಸಂವಿಧಾನದ ಆಶಯದಲ್ಲಿ ನಂಬಿಕೆ ಇಟ್ಡುಕೊಂಡು ಜಾತ್ಯತೀತ, ಸೌ‌ಹಾರ್ದ, ಸಮಾನತೆ,ಸ್ವಾತಂತ್ರ್ಯ, ಕರುಣೆ,ಪ್ರೀತಿ, ಪ್ರಜ್ಞೆ, ಶೀಲದ ತತ್ತ್ವ ಆಚರೆಯೊಂದಿಗೆ ಸಕಲ ಜೀವಾತ್ಮ ರಿಗೆ ಲೇಸ ಬಯಸಿದವರು ಜೈಹೀರ ಪಾಷಾ ತಾತನ ವರು.

      ‌ದರ್ಗಾವು ನೂರಾ ನಲವತ್ತು ವರ್ಷಗಳ ಕಾಲ ಸರ್ವರ ಉದಯಕ್ಕಾಗಿ ಬೆಳೆದು ಬಂದಿದೆ. ದಶಕಗಳಿಂ ದ ಇನ್ನೂ ಎತ್ತರಕ್ಕೆ ಬಂದಿದ್ದು ತಾತನವರಿಂದ. ಅವರು ಸರ್ವ ಮತ ವಿಶ್ವ ಮತವಾಗಿಸಿ ಮೊಹರಂ,ಅಲಾಯಿ, ದೇವರು- ಧರ್ಮ ಒಂದೇ ಎಂದು ಸಮತಾ ಭಾವದಿಂದ ಬಂದಿರುವುದರಿಂದ ಪ್ರಖ್ಯಾತಿ ಹೊಂದಿದರು.ದೇವದು ರ್ಗದಲ್ಲಿ ಸಾಕಷ್ಟು ಆಧ್ಯಾತ್ಮದ ಜೊತೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಮೂಹಿಕ ವಿವಾಹ,ಸರ್ವಧ ರ್ಮ ಸಮಾವೇಶ ಮಾಡುತ್ತ ಬಂದವರು.ದೇವರ ಅಜ್ಮೀರ ಪಾದ ಯಾತ್ರೆಯಲ್ಲಿನ ಪವಾಡ, ಬಳಿ ಚಕ್ರದ

೪೨ ವಯಸ್ಸಿನ ವ್ಯಕ್ತಿ ೨೪ ವರ್ಷದ ಹೆಣ್ಣನ್ನು ಮದುವೆ ಯಾಗಿದ್ದಾಗ ಮಕ್ಕಳಾಗದಿದ್ದಾಗ ಗಂಡು ಸಂತಾನ ಪ್ರಾಪ್ತಿಯಾದದ್ದು,ಸಮಸ್ಯೆಗಳನ್ನು ಹೊತ್ತುಕೊಂಡು ಬಂದಾಗ ಅವರಿವರೆನ್ನದೇ ಅವರ ಮನಸ್ಥಿತಿ ಅರಿತು ಒಳ್ಳೆಯ ದಾರಿ ತೋರಿದವರು.ವೈವಾಹಿಕ ಜೀವನ ತೊಂದರೆ ಬಗೆ ಹರಿಸಿದರು.ಸಾಮಾಜಿಕ ವ್ಯವಸ್ಥೆ ಯ ಭಿನ್ನಾಭಿಪ್ರಾಯ ದೂರ ಸರಿಸಿದವರು.ಜಾತಿ,ಮತ, ಧರ್ಮ,ಉಪ ಪಂಗಡಗಳ ಸಮಸ್ಯೆ ತಾರಕಕ್ಕೇರಿದಾಗ ಅವರ ಸಂದೇಶ ದಿಂದ ಬಗೆ ಹರಿದಿವೆ.ಒಂದಲ್ಲಾ ಎರಡ ಲ್ಲ ನೂರಾರು ಪವಾಡಗಳು ನಡೆದು ಹೋಗಿವೆ.ಇದಕ್ಕೆ ಅವರ ವಾಕ್ ಶುದ್ಧಿ ವಾಣಿ ಮತ್ತು ಪೈಗಂಬರ್ ಅವರ ಹಾಗೂ ಅನೆರಕ ಅನುಭಾವಿಗಳ ವಾಣಿಯಿಂದ ಅವರ ಲ್ಲಿ ಸಾಧನೆ ಸಿದ್ದಿಸಿಮೊಂಡು ಅವರ ಮಾತುಗಳೇ ಮಂತ್ರವಾಗಿವೆ.ನುಡಿದರೆ ಮುತ್ತಿನ ಹಾರದಂತೆ ನುಡಿ ಯುವ‌ ಅವರ ವಾಣಿ ವರ್ಣನಾತೀತವಾದುದು.

     ‌ಶೈಕ್ಷಣಿಕವಾಗಿ ದರ್ಗಾ ಬೆಳೆಯ ಬೇಕು ಈ ಭಾಗದ ಗ್ರಾಮೀಣ ಮಕ್ಕಳಿಗೆ ಬೇಕಾಗುವ ಶಿಕ್ಷಣ ನೀಡ ಬೇಕು‌.ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ವೆಂದು ಅರಿತವರು.೨೦೧೬ರಲ್ಲಿ ಶೈಕ್ಷಣಿಕ ಕೇಂದ್ರ ಸ್ಥಾಪಿಸಿದರು

 ಪ್ರಾಥಮಿಕ ಶಾಲೆಯಲ್ಲಿ ಇಂದು ನೂರಾ ನಲವತ್ತುಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.ಕಲಿತ ಅನೇಕ ರಿಗೆ ಉದ್ಯೋಗ ನೀಡಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ

        ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಾಮನೂರ ಗ್ರಾಮದಲ್ಲಿ ಸಾಮೂಹಿಕ ವಿವಾಹ ಮಾಡಿ ಅಲ್ಲಿಯೂ ಧಾರ್ಮಿಕ ತತ್ವ ಬೋಧನೆ ಮಾಡುತ್ತಿದ್ದಾರೆ. ಕೋಮು ಸೌಹಾರ್ದತೆ,ಸಾಮಾಜಿಕ ಸಾಮರಸ್ಯ, ಜಾತ್ಯತೀತ ನಿಲುವು‌,ಸರ್ವಧರ್ಮ ಸಮನ್ವಯತೆ, ಶೈಕ್ಷಣಿಕ ಕಾರ್ಯ,ಸಾಮೂಹಿಕ ವಿವಾಹ, ಜಾತ್ರೆ,ಹಬ್ಬ ಹರಿದಿನ,ಉರುಸು,ರಥೋತ್ಸವ ಎಲ್ಲಾ ಕಡೆ ಭಾಗವಹಿ ಸಿ ಮನುಷ್ಯಕುಲ ಏಳ್ಗೆಗಾಗಿ,ಕನ್ನಡ ಪ್ರೀತಿಯ ಅಭಿಮಾ ನದಿಂದ ಜಿಲ್ಲೆ, ಕಲ್ಯಾಣ ಕರ್ನಾಟಕ, ರಾಜ್ಯ,ದೇಶದಲ್ಲಿ

ಸಾಮಾರಸ್ಯ ತಂದುಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಕಾರ್ಯ ಮಾಡುತ್ತಿರುವ ಹಜರತ್ ಸೈಯದ್ ಜಹೀರ್ ಪಾಷಾ ಅವರ ಕಾರ್ಯ ಸಮಾಜಮುಖಿ,ಚಿಂತನಪರ, ಪ್ರಗತಿಪರ,ಸಂವಿಧಾನದ ಆಶಯಗಳಿಂದ ಕೂಡಿದ ಕೆಲ ಸವಾಗಿದೆ‌ ಅವರ ಸೇವೆಗೆ ಡಾ.ಬಿ.ಆರ್.ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಅರ್ವಾಡ್ ಲಭಿಸುವ ಮೂಲಕ ಅವರಿಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಲಭಿಸಿ ಬುದ್ಧ- ಬಸವ- ಅಂಬೇಡ್ಕರ್ ತತ್ವ ಸಿದ್ದಾಂತದ ಆಶಯ ಮೂಲಕ ಸರ್ವ ಸಮಾನತೆಯ ಸಂತರಾದ ಹಜರತ್ ಸೈಯದ್ ಜಹೀರ್ ಪಾಷಾ ರವರ ಜೊತೆಗೆ ನಾವು ನೀವು ಅವರು ಸೇರಿ ಈ ನಾಡನ್ನು ಕಲ್ಯಾಣ ವಾಗಿಸೋಣ!.

-ಡಾ.ಗವಿಸಿದ್ಧಪ್ಪ ಎಚ್.ಪಾಟೀಲ

   ಲೇಖಕ- ಸಾಹಿತಿ,ಕಲಬುರಗಿ