ಸೇಡಂ | ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಡಾ. ಶರಣಪ್ರಕಾಶ ಪಾಟೀಲ

ಸೇಡಂ | ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಡಾ. ಶರಣಪ್ರಕಾಶ ಪಾಟೀಲ

ಸೇಡಂ | ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಡಾ. ಶರಣಪ್ರಕಾಶ ಪಾಟೀಲ  

ಸೇಡಂ. ನ. 11. ತಾಲ್ಲೂಕಿನಲ್ಲಿ 2023-24 ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸೇಡಂ ತಾಲೂಕಿನ ರಾಜ್ಯ ಹೆದ್ದಾರಿ-10 ರಿಂದ ಮುಧೋಳ-ಯಲಗೇರಾ (ರಾಷ್ಟ್ರೀಯ ಹೆದ್ದಾರಿ-127) ಕಿ.ಮಿ.9 ರಿಂದ 24.53 ರವರೆಗೆ ಹಾಗೂ ಮದನಾ ಗ್ರಾಮದ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆ ಕಾಮಗಾರಿ ಅಂದಾಜು ಮೊತ್ತ 25 ಕೋಟಿಗಳ ಸುಧಾರಣೆ ಕಾಮಗಾರಿಗಳನ್ನು 

ಡಾ. ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಹಾಗು ಕೌಶಲ್ಯಅಭಿವೃದ್ಧಿ ಉಧ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಉದ್ಘಾಟಿಸಿದರು. ಹಾಗು ಕಲಬುರ್ಗಿ ಜಿಲ್ಲೆಯ ಸಂಸಾದರಾದ ರಾಧಾಕೃಷ್ಣ ದೊಡ್ಡಮನಿ ಉಪಸ್ಥಿತರಿದ್ದರು ರಸ್ತೆ ಕಾಮಗಾರಿ ಸುಗಮವಾಗಿ ಸಾಗಲು ಭೂಮಿ ಪೂಜೆ ಮಾಡಲಾಯಿತು. ರಸ್ತೆ ಅಭಿವೃದ್ಧಿ ದೃಷ್ಟಿಯಿಂದ ಪೂಜೆಯಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಲಾಯಿತು 

ಈ ಸಂದರ್ಭದಲ್ಲಿ ಡಾ. ಶರಣಪ್ರಕಾಶ ಪಾಟೀಲರು ಮಾತನಾಡಿ ಸೇಡಂ ತಾಲೂಕಿನ ಗ್ರಾಮೀಣ ಭಾಗದ ರಸ್ತೆ ಸುಧಾರಣೆ ಹಾಗೂ ರಾಜ್ಯ-ರಾಷ್ಟ್ರೀಯ ಹೆದ್ದಾರಿ ಕಲ್ಪಿಸುವ ಸೇಡಂ ತಾಲೂಕಿನ‌ ವಿವಿಧ ಗ್ರಾಮಗಳ ರಸ್ತೆ ಬಗ್ಗೆ ಹೆಚ್ಚಿನ ಒತ್ತು ನೀಡಿ ವಿಶೇಷ ಅನುದಾನ‌ ಮುಖಾಂತರ ಸುಧಾರಣೆಗೊಳಿಸಲಾಗುತ್ತಿದೆ ಎಂದರು 

ಈ‌ ಸಂದರ್ಭದಲ್ಲಿ ತೋಟಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷರಾದ ಬಸವರಾಜ ಪಾಟೀಲ ಊಡಗಿ. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ ಮಾಲಿಪಾಟೀಲ ಸಹಾಯಕ ಆಯುಕ್ತರಾದ ಪ್ರಭು ರೆಡ್ಡಿ. ತಹಸೀಲ್ದಾರರಾದ ಶ್ರೀಯಾಂಕ ಧನಶ್ರೀ. ತಾಪ ಇಓ ಚನ್ನಪ್ಪ ರಾಯಣ್ಣನವರ. ಲೋಕೋಪಯೋಗಿ ಇಲಾಖೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಶರಣ ಜೀವರ್ಗಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ನoದಿಗಾಂವ. ನಾಗೇಶ ಕಾಳಾ. ನಾಗೇಂದ್ರಪ್ಪ ಸೌಕಾರ. ಮೊಹಮ್ಮದ ಮದನಾ. ಶಂಕರ ಪಾಟೀಲ. ಹಾಗು ಪಕ್ಷದ ಹಿರಿಯ 

ಮುಖಂಡರು, ಚುನಾಯಿತ ಪ್ರತಿನಿದಿಗಳು. ಹಿರಿಯ ನಾಯಕರು ಹಾಗೂ ಯುವ ಕಾರ್ಯಕರ್ತರು ಸ್ಥಳೀಯರು ಉಪಸ್ಥಿತರಿದ್ದರು.