ದಾವಣಗೆರೆ ರಂಗಾಯಣದಲ್ಲಿ ಗೌರವ ಸಂಭಾವನೆ ಆಧಾರದ ಮೇಲೆ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ

ದಾವಣಗೆರೆ ರಂಗಾಯಣದಲ್ಲಿ ಗೌರವ ಸಂಭಾವನೆ ಆಧಾರದ ಮೇಲೆ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ

ದಾವಣಗೆರೆ ರಂಗಾಯಣದಲ್ಲಿ ಗೌರವ ಸಂಭಾವನೆ ಆಧಾರದ ಮೇಲೆ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ 

ದಾವಣಗೆರೆ: ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ಅಧಿಕೃತ ರಂಗಸಂಸ್ಥೆಯಾದ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣವು 12 ಜನ ಕಲಾವಿದರನ್ನು ಗೌರವ ಸಂಭಾವನೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುತ್ತಿದೆ. ಕಲಾವಿದರ ಆಯ್ಕೆಯ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಆಯ್ಕೆಯಾದ ಕಲಾವಿದರಿಗೆ ತಿಂಗಳಿಗೆ ರೂ. 15,000 ಸಂಭಾವನೆ ನೀಡಲಾಗುತ್ತದೆ.

ರಂಗ ಪರಿಣತಿ ಮುಖ್ಯ ಅರ್ಹತೆಯಾಗಿದ್ದು, ರಂಗಪ್ರಯೋಗಗಳಲ್ಲಿ ಭಾಗವಹಿಸಿದವರು, ಪಾರಂಪರಿಕ ಕಲಾವಿದರ ಕುಟುಂಬದವರು ಹಾಗೂ ರಂಗಶಿಕ್ಷಣ ಪಡೆದವರಿಗೆ ಆದ್ಯತೆ ನೀಡಲಾಗುವುದು. 20 ರಿಂದ 35 ವರ್ಷದೊಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ತಮ್ಮ ಮನವಿ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಸೆಪ್ಟೆಂಬರ್ 19, 2025ರ ಸಂಜೆ 5:30ರೊಳಗೆ ವೃತ್ತಿ ರಂಗಭೂಮಿ ರಂಗಾಯಣ, ಕೊಠಡಿ ಸಂಖ್ಯೆ: 38ಎ, ಜಿಲ್ಲಾಡಳಿತ ಭವನ, ದಾವಣಗೆರೆ-577006 ಈ ವಿಳಾಸಕ್ಕೆ

 ಅಥವಾ ಇ-ಮೇಲ್ [dvgrangayana@gmail.com](mailto:dvgrangayana@gmail.com) ಗೆ ಸಲ್ಲಿಸಬೇಕು. ಸಂದರ್ಶನವು ಸೆಪ್ಟೆಂಬರ್ 20, 2025ರಂದು ಬೆಳಗ್ಗೆ 10:30ಕ್ಕೆ ಜಿಲ್ಲಾಡಳಿತ ಭವನದಲ್ಲಿರುವ ರಂಗಾಯಣ ಕಚೇರಿಯಲ್ಲಿ ನಡೆಯಲಿದೆ.

ಅರ್ಜಿ ಸಲ್ಲಿಸುವವರು ಸಂದರ್ಶನಕ್ಕೆ ಹಾಜರಾಗುವಾಗ ಜನ್ಮದಿನಾಂಕ ದೃಢೀಕರಣ ಪತ್ರ, ಎನ್‌ಎಸ್‌ಡಿ/ಡಿಪ್ಲೋಮಾ ಪ್ರಮಾಣಪತ್ರ (ತರಬೇತಿ ಹೊಂದಿದರೆ), ರಂಗಶಿಕ್ಷಣ ಅನುಭವ ಪ್ರಮಾಣಪತ್ರ, ರಂಗಭೂಮಿ ಅನುಭವದ ಸ್ವವಿವರ ಪತ್ರ ಹಾಗೂ ಆಧಾರ್ ಕಾರ್ಡ್ ಮೂಲ ದಾಖಲೆಗಳನ್ನು ತರಬೇಕಾಗಿದೆ.

ಈ ಕುರಿತು ದಾವಣಗೆರೆ ರಂಗಾಯಣದ ನಿರ್ದೇಶಕರಾದ ಮಲ್ಲಿಕಾರ್ಜುನ ಕಡಕೋಳ ಹಾಗೂ ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 93410 10712