ನಾಗಶೆಟ್ಟಿ ಧರ್ಮಪೂರ್
ನಾಗಶೆಟ್ಟಿ ಧರ್ಮಪೂರ್
ನಾಗಶೆಟ್ಟಿ ಧರ್ಮಪುರವರ ತಾಯಿ ಶ್ರಿಮತಿ ಶರಣಮ್ಮ ತಂದೆ ವೀರಶೆಟ್ಟಿ ಧರಮಪೂರ 23/5/1969 ಜನಸಿದರು. ನಾಗಶೆಟ್ಟಿ ಧರಮಪೂರ ಅವರು ಪ್ರಾಥಮಿಕ ಶಿಕ್ಷಣ ಚಾಂಬೊಳ ,ಪ್ರೌಢ ಶಿಕ್ಷಣ ಬೀದರ, ಪಿ.ಯು.ಸಿ.ಇಂಟ್ರನ್ ಶಿಪ್.ಬಿ.ಎ. (ಶಿಕ್ಷಣ ವಿಷಯ) ಎಜ್ಯುಕೇಷನ್ ಓದು ಪೂರ್ಣ ಗೊಳಿಸಿ, ಗುಲ್ಬರ್ಗ ವಿಶ್ವವಿದ್ಯಾಲಯದಿಂದ (ಕಲಬುರಗಿ) ಪದವಿ ಪಡೆದಿರುವರು.
ಧರಮಪೂರ ಅವರು
ಮಕ್ಕಳಿಗೆ ಮನೆಪಾಠ (ಟ್ಯೂಶನ್)ಹೇಳುವದು,
ಲೇವಾದೇವಿ ಸಂಸ್ಥೆಯಲ್ಲಿ ಮ್ಯಾನೇಜರ್ ,
ಕೃಷ್ಣ ದಾಲಮಿಲ್ ನಲ್ಲಿ, ವ್ಯವಸ್ಥಾಪಕರಾಗಿ ಹಲೋ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡವರು.
ಯುವಗರ್ಜನೆ ಪತ್ರಿಕೆಯಲ್ಲಿ ಮುಖ್ಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜನೆ.
ಕನ್ನಡದ ಹೊಸ ತಲೆಮಾರಿನ ಹಾಗು ಹಳೆಯ ಬರಹಗಾರರಿಗೆ ನಿರಂತರ ಕವಿಗೋಷ್ಠಿ , ಸಾಹಿತ್ಯದ ವೇದಿಕೆ ಕಲ್ಪಿಸಿ ಕೊಟ್ಟಿದ್ದಾರೆ.
ಬೀದರ ಜಿಲ್ಲಾ ಕನಾ೯ಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ,
ಬೀದರ ಜಿಲ್ಲಾ ಬರಹಗಾರರ ಮತ್ತು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ,ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಶ್ರೀ ಮಹಾಸಿದ್ದ ಮಡಿವಾಳೇಶ್ವರ ಮಂದಿರದ ಅಧ್ಯಕ್ಷರಾಗಿ, ಸೇವೆಯೇ ಮಾಡಿದ್ದಾರೆ.
ಪ್ರಸ್ತುತ ಕ್ರಾಂತಿ ಭೂಮಿ ಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕವಾಗಿ ನಾಗಶೆಟ್ಟಿ ಧರಮಪೂರ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟೀಯ ಪ್ರಶಸ್ತಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ,ಮತ್ತು ಹಲವು ಸಂಘ ಸಂಸ್ಥೆ ಗಳಿಂದ ಗೌರವಕ್ಕೆ ಭಾಜನರಾಗಿದ್ದಾರೆ.
-ಓಂಕಾರ ಪಾಟೀಲ
(ಕಾರ್ಯದರ್ಶಿ :---ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ)