ಗೊಬ್ಬುರ್(ಬಿ) ಗ್ರಾಮದಲ್ಲಿ ಗಾಂಜಾ ಬೆಳೆದ ಗಿಡಗಳು ಪತ್ತೆ
ಗೊಬ್ಬುರ್(ಬಿ) ಗ್ರಾಮದಲ್ಲಿ ಗಾಂಜಾ ಬೆಳೆದ ಗಿಡಗಳು ಪತ್ತೆ
ಕಲಬುರಗಿ: ದಿನಾಂಕ 31/10/2024 ರಂದು ಸಮಯ ಬೆಳಿಗ್ಗೆ 10:30 ಗಂಟೆಗೆ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಗೊಬ್ಬುರ್ (ಬಿ) ಗ್ರಾಮ ಸರ್ವೆ ನಂಬರ್ 484/2 ಜಮೀನಿನ ಮೇಲೆ ದಾಳಿ ಮಾಡಿ ಅಕ್ರಮವಾಗಿ ಕಬ್ಬಿನ ಬೆಳೆ ಮಧ್ಯದಲ್ಲಿ ಗಾಂಜಾ ಗಿಡಗಳು ಬೆಳೆದಿರುವುದು ಕಂಡುಬಂದಿರುತ್ತದೆ.
ಅವುಗಳನ್ನು ಏಣಿಕೆ ಮಾಡಿ ನೋಡಿದಾಗ ಹೂ, ತೆನೆಭರಿತ ಎಲೆಗಳಿಂದ ಕೂಡಿದ 15 ಹಸಿ ಗಾಂಜಾದ ಗಿಡಗಳು ಇರುತ್ತವೆ. ಹಸಿ ಗಾಂಜಾ ಗಿಡಗಳನ್ನು ತೂಕ ಮಾಡಿ ನೋಡಿದಾಗ ಒಟ್ಟು 57.7 ag. ತೂಕ ಇರುತ್ತದೆ. ಜಮೀನಿನ ಮಾಲೀಕರ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ-1985 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ದಾಳಿಯಲ್ಲಿ ಆಳಂದ ವಲಯ ಕಛೇರಿಯ ಅಬಕಾರಿ ನಿರೀಕ್ಷಕರಾದ ಶ್ರೀ ಶ್ರೀಧರ ನಿರೋಣಿ, ಅಬಕಾರಿ ಉಪ ನಿರೀಕ್ಷಕರಾದ ಬಸವರಾಜ ಮಾಲಗತ್ತಿ ಹಾಗೂ ಅಬಕಾರಿ ಜಂಟಿ ಆಯುಕ್ತರ ಕಛೇರಿ(ಜಾ&ತ), ಕಲಬುರಗಿ ವಿಭಾಗ ಕಛೇರಿಯ ಅಬಕಾರಿ ನಿರೀಕ್ಷಕರಾದ ಶ್ರೀ ನರೇಂದ್ರಕುಮಾರ ಹೊಸಮನಿ, ಅಬಕಾರಿ ಉಪ ನಿರೀಕ್ಷಕರಾದ ಶರಣಪ್ಪ ಮೇದ ಹಾಗೂ ಆಳಂದ ವಲಯ ಕಛೇರಿಯ ಅಬಕಾರಿ ಮುಖ್ಯ ಪೇದೆಗಳಾದ ರಾಘವೇಂದ್ರ, ಭೋಗಪ್ಪ ಹಾಜರಿದ್ದರು.