ಆಟೋದಲ್ಲಿ ಮರೆತಿದ್ದ 4 ಲಕ್ಷ ಮೌಲ್ಯದ ಬಂಗಾರದ ಆಭರಣ ಪತ್ತೆ – ಪೊಲೀಸ್ ಇಲಾಖೆ ಶ್ಲಾಘನೆಗೆ ಪಾತ್ರ

ಕಲಬುರಗಿ:ಶನಿವಾರ ಬೆಳಿಗ್ಗೆ (16-08-2025) ಬೆಳಿಗ್ಗೆ 8.30ಕ್ಕೆ ಜವಳಿ ಕಾಂಪ್ಲೆಕ್ಸ್ ಹತ್ತಿರದ ಹರಿದಾಸ್ ಹಾರ್ಟ್ ಸ್ಪೆಷಲಿಸ್ಟ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ 70 ವರ್ಷದ ಶ್ರೀಮತಿ ರತ್ನಾಬಾಯಿ ರವರು ಎಕ್ಸ್-ರೆಗಾಗಿ ತಮ್ಮ ಮೈಮೇಲಿನ ಬಂಗಾರದ ಆಭರಣಗಳನ್ನು ತೆಗೆದು ಬ್ಯಾಗ್‌ನಲ್ಲಿ ಇಟ್ಟು ಆಟೋದಲ್ಲಿ ಬಿಟ್ಟಿದ್ದರು. ಬಳಿಕ ಅವರ ಮಗಳು ಡಾ. ಶಾರದಾ ರವರು ತಂದೆಯನ್ನು ಕರೆತರಲು ಅದೇ ಆಟೋದಲ್ಲಿ ಮನೆಗೆ ತೆರಳುವಾಗ ಆ ಬ್ಯಾಗ್ ಮರೆತು ಹೋಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಆಭರಣದ ಬ್ಯಾಗ್ ಕಾಣೆಯಾದ್ದನ್ನು ಗಮನಿಸಿದ ರತ್ನಾಬಾಯಿ ರವರು ತಕ್ಷಣವೇ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್‌.ಡಿ., ಐ.ಪಿ.ಎಸ್. ರವರಿಗೆ ದೂರು ನೀಡಿದರು. ವಿಷಯ ಗಂಭೀರವಾಗಿ ಪರಿಗಣಿಸಿದ ಮಾನ್ಯ ಪೊಲೀಸ್ ಆಯುಕ್ತರು ಅಶೋಕ ನಗರ ಪೊಲೀಸ್ ಠಾಣೆಯ ಪಿ.ಐ ಅರುಣಕುಮಾರ ಹಾಗೂ ಸಂಚಾರಿ ಪೊಲೀಸ್ ಠಾಣೆ–01ರ ಪಿ.ಐ ಮಾಹಾಂತೇಶ ಪಾಟೀಲ್ ಅವರ ನೇತೃತ್ವದಲ್ಲಿ, ಸಿಬ್ಬಂದಿ ಆಸಿಫ್ ಹೆಚ್‌.ಸಿ. ಅವರನ್ನೊಳಗೊಂಡ ಎರಡು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದರು.

ಸಿ.ಸಿ.ಟಿ.ವಿ ದೃಶ್ಯಾವಳಿ ಪರಿಶೀಲನೆ ಮೂಲಕ ಆಟೋ ಮಾರ್ಗವನ್ನು ಪತ್ತೆಹಚ್ಚಿದ ಪೊಲೀಸರು, ಆಟೋ ಚಾಲಕನನ್ನು ಗುರುತಿಸಿ ಆತನ ಬಳಿ ಸುಮಾರು ₹4 ಲಕ್ಷ ಮೌಲ್ಯದ 40 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡರು. ನಂತರ ಆಭರಣಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್‌.ಡಿ., ಐ.ಪಿ.ಎಸ್. ರವರು ಹಸ್ತಾಂತರಿಸಿದರು.

ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಇಲಾಖೆಯ ಈ ಕಾರ್ಯ ಶ್ಲಾಘನೀಯವೆಂದು ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.