ಸರ್ಕಾರಿ ನೌಕರ ಸಂಘದ ನಿರ್ದೇಶಕರಾಗಿ ಮಲ್ಲಿಕಾರ್ಜುನ್ ಸಜ್ಜನ ಅವಿರೋಧ ಆಯ್ಕೆ

ಸರ್ಕಾರಿ ನೌಕರ ಸಂಘದ ನಿರ್ದೇಶಕರಾಗಿ ಮಲ್ಲಿಕಾರ್ಜುನ್ ಸಜ್ಜನ ಅವಿರೋಧ ಆಯ್ಕೆ

 ಸರ್ಕಾರಿ ನೌಕರ ಸಂಘದ ನಿರ್ದೇಶಕರಾಗಿ ಮಲ್ಲಿಕಾರ್ಜುನ್ ಸಜ್ಜನ ಅವಿರೋಧ ಆಯ್ಕೆ

ಶಹಾಪುರ : 2024 ರಿಂದ 29ರ 5 ವರ್ಷದ ಅವಧಿಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಶಹಾಪುರ ತಾಲೂಕು ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಸಜ್ಜನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಹಾಪುರ ಪಟ್ಟಣದ ಯಾದಗಿರಿ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಶಹಾಪೂರ ತಾಲೂಕು ಘಟಕದ ನೂತನ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಯಾರು ಸ್ಪರ್ಧಿಸದ ಕಾರಣ,ಶಿಕ್ಷಕ ಮಲ್ಲಿಕಾರ್ಜುನ್ ಸಜ್ಜನ್ ಅವರು ಅವಿರೋಧವಾಗಿ ಆಯ್ಕೆಯಾದರು.

ಇವರು ಪ್ರಾಥಮಿಕ ಶಾಲಾ ವಿಭಾಗದಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಕನ್ಯಕೂಳೂರಿ ಗ್ರಾಮದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ತೋರುವ

ಶಿಕ್ಷಕ ಮಲ್ಲಿಕಾರ್ಜುನ್ ಸಜ್ಜನ್ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ ವ್ಯಕ್ತಿಯಾಗಿದ್ದು ಇವರನ್ನು ಇಂದು ಜರುಗಿದ ನಿರ್ದೇಶಕರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ವಿನೋದಗೌಡ ಮಾಲಿ ಪಾಟೀಲ್,ಅಶ್ವಿನಗೌಡ ಸುಬೇದಾರ,ಪತ್ರಕರ್ತ ಬಸವರಾಜ ಸಿನ್ನೂರ,ಸೂಗೂರಯ್ಯ ವೀರಭದ್ರಯ್ಯ ಸೇರಿದಂತೆ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ