ಡಾ.ಜಯಶ್ರೀ ದಂಡೆ ಅವರಿಗೆ ಮಾತೃ ವಿಯೋಗ (ಸುಮಿತ್ರಾದೇವಿ ಅಂಗಡಿ ) ನಿಧನ

ಡಾ.ಜಯಶ್ರೀ ದಂಡೆ ಅವರಿಗೆ ಮಾತೃ  ವಿಯೋಗ (ಸುಮಿತ್ರಾದೇವಿ ಅಂಗಡಿ ) ನಿಧನ

ಡಾ.ಜಯಶ್ರೀ ದಂಡೆ ಅವರಿಗೆ ಮಾತೃ ವಿಯೋಗ (ಸುಮಿತ್ರಾದೇವಿ ಅಂಗಡಿ ) ನಿಧನ

ನಿಧನ ವಾರ್ತೆ

ಇಲಕಲ್ಲ: ಶಿಕ್ಷಣ ಸೇವೆಗೆ ತನ್ನೆಲ್ಲಾ ಬದುಕನ್ನೇ ಅರ್ಪಿಸಿದ ಮಹಾಮಾತೆ ಸುಮಿತ್ರಾದೇವಿ ಅಂಗಡಿ (90) ಅವರು ಇಂದು (14-09-2025) ಸಂಜೆ 4 ಗಂಟೆಗೆ ವಯೋಸಹಜವಾಗಿ ಲಿಂಗೈಕ್ಯರಾದರು .

ಇವರು ಇಳಕಲ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ 34 ಗ್ರೂಪ್ ಶಾಲೆಗಳಲ್ಲಿ ಮುಖ್ಯ ಗುರು ಮಾತೆಯಾಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಒಟ್ಟಾರೆ 40 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ , ಅನೇಕ ದೀನ ಬಡ ಮಕ್ಕಳ ಬದುಕಿಗೆ ಬೆಳಕಾಗಿದ್ದರು. ಇವರ ಸೇವೆಯನ್ನು "ವಿಶ್ವವಿದ್ಯಾಲಯಕ್ಕಿಂತ ಹೆಚ್ಚಾದ ಶಿಕ್ಷಣ ಸೇವೆ" ಎಂದು ಗ್ರಾಮಸ್ಥರು ಕೊಂಡಾಡುತ್ತಾರೆ.

ಶರಣರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು, ಶರಣರ ತತ್ವ ಸಿದ್ಧಾಂತಗಳಂತೆ ಬದುಕಿದ ಇವರು, ಸಮಾಜ ಸೇವೆ ಮತ್ತು ಶಿಕ್ಷಣ ಸೇವೆಯ ಮೂಲಕ ಶಾಶ್ವತ ಗುರುತು ಮೂಡಿಸಿದರು.

ಇವರಿಗೆ ನಾಲ್ಕು ಗಂಡು ಮಕ್ಕಳು ಒಬ್ಬ ಹೆಣ್ಣುಮಗಳು (ಅವರಲ್ಲಿ ಡಾ ಜಯಶ್ರೀ ದಂಡೆ), ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಇಳಕಲ್ಲ ಗ್ರಾಮದಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ನಾಳೆ (15-09-2025) ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.