ಕೊಳಚೆ ಪ್ರದೇಶಗಳಲ್ಲಿ ಕಳಪೆ ಮಟ್ಟದ ಗೃಹ ನಿರ್ಮಾಣ

ಕೊಳಚೆ ಪ್ರದೇಶಗಳಲ್ಲಿ ಕಳಪೆ ಮಟ್ಟದ ಗೃಹ ನಿರ್ಮಾಣ
ಬಸವಕಲ್ಯಾಣ : ಬೀದರ ಜಿಲ್ಲೆಯ ಬಸವಕಲ್ಯಾಣ ನಗರದ. ಧರ್ಮಪ್ರಕಾಶ ಗಲ್ಲಿ ವಾರ್ಡ್ ನಂಬರ್ 11 ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ. ವಿವಿಧ ಕೊಳಚೆ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಅವಾಜ್ ,ಸೂರು ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಂದ ಗೃಹ ನಿರ್ಮಾಣದ ಕಳಪೆ ಮಟ್ಟದ ಕಾಮಗಾರಿ ಮಾಡಿರುತ್ತಾರೆ ಎಂದು ಜೆಡಿಎಸ್ ಪಕ್ಷದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಧನರಾಜ ಡಿ ರಾಜೋಳೆ ಅವರು ಹೇಳಿದರು.
ಪ್ರಧಾನ ಮಂತ್ರಿ ಅವಾಜ್ ,ಸೂರು ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಂದ ಗೃಹ ನಿರ್ಮಾಣದ ಸಾಲವನ್ನು ಪ್ರತಿ ಮನೆಗೆ ತಗಲುವ ವೆಚ್ಚ 6,77,506 ಲಕ್ಷ ,ಮನೆಗಳು ಪರಿಶಿಷ್ಟ ಜಾತಿ ಪಂಗಡದವರಿಗೆ ಡಿ.ಡಿ 6,7, 756 00 ಹಣವನ್ನು ಫಲಾನುಭವಿಗಳು ಕಟ್ಟಿರುತ್ತಾರೆ .
ಮನೆಗಳು ಕಳಪೆಮಟ್ಟದ ಕಾಮಗಾರಿ ಮಾಡಿದ್ದರಿಂದ ಅಲ್ಲಲ್ಲಿ ಮನೆಗಳು ಬಿರುಕುಗೊಂಡಿವೆ. ನೆಲ ಹಾಸಿಗೆಗಳು ಕಿಡಕಿ ಮತ್ತು ಬಾಗಿಲಗಳು ಹಾಳಾದ ವ್ಯವಸ್ಥೆಯಲ್ಲಿ ಕಾಣಿಸುತ್ತಿವೆ .
ಕಲಬುರಗಿ ಸಹಾಯಕ ಕಾರ್ಯಪಾಲಕ ಅಭ್ಯಂತರರು ಪರಿಶೀಲನೆ ಮಾಡಿರುವುದಿಲ್ಲ ಎಂದು ನಮಗೆ ತಿಳಿದುಬಂದಿರುತ್ತದೆ
.ಸಂಬಂಧಪಟ್ಟ ನಗರ ಸಭೆ ಪೌರ ಆಯುಕ್ತರು ಪರಿಶೀಲನೆ ಮಾಡಬೇಕೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕರ್ಮ ಕ್ರಮ , ಗುತ್ತಿಗೆದಾರರ ಪರವಾನಿಗೆಯನ್ನು ರದ್ದುಪಡಿಸಬೇಕೆಂದು ಜೆಡಿಎಸ್ ಪಕ್ಷದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಧನರಾಜ ಡಿ ರಾಜೋಳೆ ಅವರು ಇಲಾಖೆಯವರಿಗೆ ಅರ್ಜಿ ಸಲ್ಲಿಸಿ ಮನವಿ ಸಲ್ಲಿಸಿದ್ದಾರೆ.