ರಮೇಶ್ ಸಂಗಾ ಸೇರಿ 6 ಜನ ಸಾಧಕರಿಗೆ ಪ್ರತಿಷ್ಠಿತ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕಾರ

ರಮೇಶ್ ಸಂಗಾ ಸೇರಿ 6 ಜನ ಸಾಧಕರಿಗೆ ಪ್ರತಿಷ್ಠಿತ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕಾರ
ಬೆಂಗಳೂರು : ವಿಶ್ವ ಒಕ್ಕಲಿಗರ ಮಹಾ ವೇದಿಕೆಯು ಯುನೈಟೆಡ್ ಕಿಂಗ್ಡಮ್, ಲಂಡನ್ ನಲ್ಲಿ ಆಯೋಜಿಸಿರುವ
ನಾಡಪ್ರಭು ಕೆಂಪೇಗೌಡರ 3 ನೇ ಅಂತಾರಾಷ್ಟ್ರೀಯ ಜಯಂತ್ಯೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನವು ದಿನಾಂಕ: 28.09.2024 ರಂದು ಜರುಗಲಿದ್ದು, ಈ ಕಾರ್ಯಕ್ರಮಕ್ಕೆ ಕರ್ನಾಟಕ ಒಕ್ಕಲಿಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಚಿವಾಲಯ ನೌಕರರ ಸಂಘದ ಅಧ್ಯಕ್ಷರಾದ ರಮೇಶ್ ಸಂಗಾ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದು, ಅಲ್ಲಿಯೇ ಅವರನ್ನು ಅಂತಾರಾಷ್ಟ್ರೀಯ
"ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ" ನೀಡಿ ಗೌರವಿಸಲಾಗುವುದು ಎಂದು ವಿಶ್ವ ಒಕ್ಕಲಿಗರ ಮಹಾ ವೇದಿಕೆ ಅಧ್ಯಕ್ಷರಾದ ವೈ ಡಿ ರವಿಶಂಕರ್ ತಿಳಿಸಿದ್ದಾರೆ.
ಅಲ್ಲದೇ, ವಿಶ್ವದ ರಾಜಕೀಯ ಇತಿಹಾಸದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಕೊಟ್ಟು ಅನುಭವ ಮಂಟಪ ರಚಿಸಿದ ವಿಶ್ವಗುರು ಬಸವೇಶ್ವರರ ಲ್ಯಾಂಬೆತ್ ಫೌಂಡೇಶನ್ ಲಂಡನ್ ವತಿಯಿಂದ ದಿನಾಂಕ 29.09.2024 ರಂದು ಲ್ಯಾಂಬೆತ್ ನಗರದ ಮಾಜಿ ಮಹಾಪೌರರಾದ ಡಾ.ನೀರಜ್ ಪಾಟೀಲ್' ಕಮಲಾಪುರ ರವರು ರಮೇಶ್ ಸಂಗಾ ಅವರನ್ನು ವಿಶೇಷವಾಗಿ ಸನ್ಮಾನಿಸಲಿದ್ದಾರೆ.
.