ಎಸ್.ಟಿ ಹಾಗೂ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಧರಣಿ ನಾಲ್ಕನೇ ದಿನ ರಾಷ್ಟ್ರೀಯ ಸಮಾಜ ಪಕ್ಷ ಬೆಂಬಲ

ಎಸ್.ಟಿ ಹಾಗೂ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಧರಣಿ ನಾಲ್ಕನೇ ದಿನ ರಾಷ್ಟ್ರೀಯ ಸಮಾಜ ಪಕ್ಷ ಬೆಂಬಲ
ಕಲಬುರಗಿ: ಗೊಂಡ" ಸಮುದಾಯಕ್ಕೆ ಸಿಂಧತ್ವ ಪ್ರಮಾಣ ಪತ್ರ ನೀಡದೆ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ತೊಂದರೆ ನೀಡುತ್ತಿರುವುದನ್ನ ವಿರೋಧಿಸಿ ಆದಿವಾಸಿ ಅಲೆಮಾರಿ ಬುಡಕಟ್ಟು ಮೂಲ ನಿವಾಸಿ ಸಂಘಟನೆ ಜಿಲ್ಲಾ ಘಟಕ ಇವರ ನೇತೃತ್ವದಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಈ ಧರಣಿ ಸತ್ಯಾಗ್ರಹವನ್ನು ರಾಷ್ಟ್ರೀಯ ಸಮಾಜ ಪಕ್ಷದ ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಿದರು. ರಾಷ್ಟ್ರೀಯ ಸಮಾಜ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷರಾದ ದೇವೇಂದ್ರ ಚಿಗರಳ್ಳಿ ಮಾತನಾಡುತ್ತಾ ಪರಿಶಿಷ್ಟ ಪಂಗಡದಲ್ಲಿ ಸೇರಿರುವ ಗೊಂಡ, ಕಾಡು ಕುರುಬ, ಜೇನುಕುರುಬ, ಬೆಟ್ಟ ಕುರುಬ, ಗೊಂಡ ಕುರುಬ ಹಾಗೂ ತಳವಾರ ಸಮುದಾಯದವರಿಗೆ Sಖಿಪ್ರಮಾಣ ಪತ್ರ ಹಾಗೂ ಸಿಂಧತ್ವ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ಅನಗತ್ಯ ವಿಳಂಬ ಮಾಡಿ ಜನರನ್ನು ಸತಾಯಿಸುತ್ತಿದ್ದಾರೆ. ಇದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ಸತ್ಯಾಗ್ರ ನಡೆಸಲಾಗುತ್ತಿದೆ.
ಈ ಧರಣಿ ಸತ್ಯಾಗ್ರಹಕ್ಕೆ ರಾಷ್ಟ್ರೀಯ ಸಮಾಜ ಪಕ್ಷ ಸಂಪೂರ್ಣ ಬೆಂಬಲ ಇರುತ್ತೆ ಮುಂದಿನ ದಿನಗಳಲ್ಲಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದರೆ ನಮ್ಮ ಪಕ್ಷದಿಂದ ಉಗ್ರವಾದ ಹೋರಾಟ ಮಾಡಲಾಗುವದು ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾದ ರೇಣುಕಾ ಹೋರಕೇರಿ ಮಾತನಾಡುತ್ತಾ "ಸಂವಿಧಾನ ಬದ್ಧ ಹಕ್ಕುಗಳನ್ನು ಕಿತ್ತುಕೊಳ್ಳುವ ಕ್ರಮ ನಿಲ್ಲಿಸಿ, ಗೊಂಡ ಹಾಗೂ ಕುರುಬ ಸಮುದಾಯಗಳಿಗೆ ತಕ್ಷಣ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕು" ಎಂದರು. ಈ ಧರಣಿ ಸತ್ಯಾಗ್ರದಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಶರಣಬಸಪ್ಪ ದೊಡ್ಮನಿ, ಜಿಲ್ಲಾಧ್ಯಕ್ಷರಾದ ಶ್ರೀಮಂತ ಮಾವನೂರ ಸಂಘಟನಾ ಕಾರ್ಯದರ್ಶಿ ವಿಜಯ ಕುಮಾರ ಬೋರಗಿ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಡಾ. ಶರಣು ಬಿ ಹೊನ್ನಗೆಜ್ಜಿ, ಆದಿವಾಸಿ ಅಲೆಮಾರಿ ಬುಡಕಟ್ಟು ಮೂಲ ನಿವಾಸಿ ಸಂಘಟನೆಯ ಜಿಲ್ಲಾಧ್ಯಕ್ಷ ಗೋಪಾಲ್ ಎಂ. ಪಿ, ಡಾ. ಚಂದ್ರಕಾಂತ ಗಂವ್ಹಾರ್, ಗೀತಾ ಬಿದನೂರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.