ಕಲಬುರಗಿ ಪೊಲೀಸರ ಕಾರ್ಯಾಚರಣೆ 200 ಮೊಬೈಲ್‌ಗಳು ಪತ್ತೆ
ಕಲಬುರಗಿ ಪೊಲೀಸರ ಕಾರ್ಯಾಚರಣೆ 200 ಮೊಬೈಲ್‌ಗಳು ಪತ್ತೆ
ಕಲಬುರಗಿ : ನಗರ ಪೊಲೀಸ್ ಆಯುಕ್ತಾಲಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲಗಳು ಕಾರ್ಯಚರಣೆ ಮಾಡಿ ಪತ್ತೆ ಹಚ್ಚಲಾಗಿದೆ 38 ಲಕ್ಷ ರೂ. ಮೌಲ್ಯದ 200 ಮೊಬೈಲ್‌ಗಳು ಸಿಕ್ಕಿವೆ.
ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ಸಭಾ ಭವನದಲ್ಲಿ ಮೊಬೈಲ್ ವಾರಸುದಾರರಿಗೆ ಕರೇಸಿ ಅವರ ಮೊಬೈಲ್ ಗಳನ್ನು ಹಿಂತಿರುಗಿಸಿ ಕೊಟ್ಟಿದ್ದಾರೆ. ಒಂದು ವರ್ಷದಲ್ಲಿ ಕಳೆದುಕೊಂಡ ಮೊಬೈಲ್ ವಾರಸ್ದಾರರಿಗೆ 58 ಮೊಬೈಲ್ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಒಂದೇ ವರ್ಷದಲ್ಲಿ 672 ಮೊಬೈಲ್ ಗಳು ಪತ್ತೆ ಹಚ್ಚಿದ್ದು ಅದರಲ್ಲಿ 472 ಮೊಬೈಲ್‌ಗಳನ್ನು ವಾರಸುದಾರರಿಗೆ ಹಿಂತಿರುಗಿಸಿ ಕೊಟ್ಟಿದ್ದಾರೆ. ಇಂದು ಪತ್ತೆಯಾದ ಎರಡು ನೂರು ಮೊಬೈಲ್ ಗಳು ಕೂಡ ಕೊಡಲಾಗಿದೆ ಎಂದರು.
ಸಾರ್ವಜನಿಕರು ksp app ಆಪ್ ಡೌನ್ಲೋಡ್ ಮಾಡಿಕೊಳ್ಳಿ
ಲ್ಯಾಪ್ಟಾಪ್ ಮೊಬೈಲ್ ಗಳನ್ನು ಹಲವು ಕಾರಣಗಳಿಂದ ಕಳೆದುಕೊಂಡಲ್ಲಿ "ksp' "app" ಯ್ಯಾಪ್ ಅನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ , ಈ ಆಪ್ ನಲ್ಲಿ ತಮಗೆ ಬೇಕಾದ ಮಾಹಿತಿಗಳು ಲಭ್ಯವಾಗುತ್ತವೆ.
"E-lost' ಯಾಪ್ ನಲ್ಲಿ ಸಾರ್ವಜನಿಕರು ದೂರು ನೀಡಬಹುದು.
ಹೀಗೆ ಮಾಡುವುದರಿಂದ ನಿಮ್ಮ ಮೊಬೈಲ್ ಬಂದ್ ಆಗುತ್ತದೆ ಮತ್ತೆ ಯಾರು ಉಪಯೋಗಿಸುತ್ತಾರೆ ಅದನ್ನು ಎಲ್ಲಿ ಇದೆ ಎಂಬುದು ಪತ್ತೆ ಹಚ್ಚಬಹುದು. ಈ ಪ್ರಯೋಜನನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಸುದ್ದಿಗೋಷ್ಠಿಯಲ್ಲಿ
ಡಿಸಿಪಿ ಕನೀಕಾ ಸಿಕ್ರೆವಾಲ್, ಪ್ರವೀಣ ನಾಯಕ, ಎಸಿಪಿ ಡಿ.ಜಿ ರಾಜಣ್ಣ, ಸಂತೋಷ ಬನ್ನಹಟ್ಟಿ, ಸುದಾ ಆದಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳಿದ್ದರು ಉಪಸ್ಥಿತರಿದ್ದರು.