ಭರತನಾಟ್ಯದಲ್ಲಿ ವಿಶ್ವದಾಖಲೆ ಮೆರೆದ ಕಲಬುರಗಿ ಕುವರಿ ವರ್ಷಿಣ ಆರ್.ಪತ್ತಾರಗೆ ಅಭಿನಂದನೆ

ಭರತನಾಟ್ಯದಲ್ಲಿ ವಿಶ್ವದಾಖಲೆ ಮೆರೆದ ಕಲಬುರಗಿ ಕುವರಿ ವರ್ಷಿಣ  ಆರ್.ಪತ್ತಾರಗೆ ಅಭಿನಂದನೆ

ಭರತನಾಟ್ಯದಲ್ಲಿ ವಿಶ್ವದಾಖಲೆ ಮೆರೆದ ಕಲಬುರಗಿ ಕುವರಿ ವರ್ಷಿಣ ಆರ್.ಪತ್ತಾರಗೆ ಅಭಿನಂದನೆ 

ಕಲ್ಯಾಣ ಕರ್ನಾಟಕ ಭಾಗದ ಸಾಧಕರಿಗೆ ಪ್ರೋತ್ಸಾಹ ಅಗತ್ಯ

ಕಲಬುರಗಿ: ಕಲ್ಯಾಣ ಕರ್ನಾಟಕ ಹಲವು ಮೊದಲುಗಳ ಮೂಲಕ ಖ್ಯಾತಿ ಪಡೆದಿದೆ. ನಮ್ಮ ಭಾಗ ಅಭಿವೃದ್ಧಿ ದೃಷ್ಟಿಯಿಂದ ಬೇರೆ ಭಾಗಗಳಿಗೆ ಹೋಲಿಸಿದಾಗ ಹಿಂದುಳಿದಿದೆ. ಆದರೆ ನಮ್ಮ ಭಾಗದಲ್ಲಿ ಅನೇಕ ಜನ ಪ್ರತಿಭಾವಂತರು, ಸಾಧಕರಿದ್ದು ಅವರನ್ನು ಗುರುತಿಸಿ, ಪ್ರೋತ್ಸಾಹ ನೀಡಿ, ಅವರ ಸಾಧನೆ, ಕೊಡುಗೆಯನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜರುಗಬೇಕಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಮಾರ್ಮಿಕವಾಗಿ ಹೇಳಿದರು.          

        ಭರತನಾಟ್ಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿರುವ ನಗರದ ಮಾಣ ಕೇಶ್ವರಿ ಕಾಲನಿಯ ವರ್ಷಿಣ ಆರ್.ಪತ್ತಾರ ಅವರು ಹೈದ್ರಾಬಾದ್‌ನ ‘ಸ್ಪೂರ್ತಿ ಇಂಟರನ್ಯಾಶನಲ್ ಬುಕ್ ಆಫ್ ರೆಕಾರ್ಡ್’ ಸಂಸ್ಥೆಯ ವತಿಯಿಂದ ವಿಶ್ವದಾಖಲೆಯ ಪ್ರಮಾಣ ಪತ್ರ ಪಡೆದಿರುವ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

       ವರ್ಷಿಣ ಅವರು ಬಡ ಹಾಗೂ ಕಷ್ಟದ ಪರಿಸ್ಥಿತಿ ಕುಟುಂಬದ ಹಿನ್ನಲೆಯಲ್ಲಿಯೂ ನಿರಂತರವಾದ ಪ್ರಯತ್ನ, ಶೃದ್ಧೆಯ ಮೂಲಕ ಭರತನಾಟ್ಯ ಕ್ಷೇತ್ರದಲ್ಲಿ ಅಮೋಘವಾದ ಸಾಧನೆಯನ್ನು ಮಾಡಿದ್ದಾರೆ. ಕೇವಲ 18 ವರ್ಷದ ಬಾಲಕಿ ರಾಜ್ಯ ಮತ್ತು ರಾಷ್ಟಿçÃಯ ಮಟ್ಟದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡುವ ಮೂಲಕ ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರವಾಗಿದ್ದಾಳೆ. ಭರತನಾಟ್ಯ ಕ್ಷೇತ್ರದ ಇಲ್ಲಿಯವರೆಗಿನ ಒಟ್ಟಾರೆ ಸಾಧನೆಯನ್ನು ಕಂಡು ಈಗ ವಿಶ್ವದಾಖಲೆಯ ಪ್ರಮಾಣ ಪತ್ರ ನೀಡಿರುವುದು ನಮ್ಮ ಕಲ್ಯಾಣ ಕರ್ನಾಟಕ ಮತ್ತು ವಿಶೇಷವಾಗಿ ಕಲಬುರಗಿ ಜಿಲ್ಲೆಗೆ ಸಂದ ಗೌರವ ಎಂದು ನುಡಿದರು.

      ಸತ್ಕಾರ ಸ್ವೀಕರಿಸಿ ಮಾತನಾಡಿದ ವಿಶ್ವದಾಖಲೆಯ ಭರತನಾಟ್ಯ ಕಲಾವಿದೆ ವರ್ಷಿಣ ಆರ್.ಪತ್ತಾರ, ನನ್ನ ಸಾಧನೆ ತಾಯಿ ಮತ್ತು ಕುಟುಂಬ ಪ್ರೇರಣೆ, ಆಸಕ್ತಿ ಪ್ರಮುಖ ಕಾರಣವಾಗಿದೆ. ಶೃದ್ಧೆ, ಆಸಕ್ತಿ, ಪ್ರಯತ್ನದಿಂದ ಉನ್ನತ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಸಾಧಿಸುವ ಮನಸ್ಸು, ಛಲಗಾರಿಕೆ ನಮ್ಮಲ್ಲಿರಬೇಕು ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

      ಕಾರ್ಯಕ್ರಮದಲ್ಲಿ ಬಳಗದ ಸದಸ್ಯರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಮಹಾದೇವ ಬಿರಾದಾರ, ಬಡಾವಣೆಯ ಯುವ ಮುಖಂಡ ಶಿವಾನಂದ ಹೊನಗುಂಟಿ, ಪ್ರಮುಖರಾದ ದೇವಿಂದ್ರಪ್ಪ ಎಚ್.ವಿಶ್ವಕರ್ಮ, ಸಿದ್ದಲಿಂಗ ಡಿ.ವಿ., ಜಯಶ್ರೀ ಆರ್.ವಿ., ಜ್ಯೋತಿ ಆರ್.ವಿ., ಈರಮ್ಮ ಡಿ.ವಿ. ತೇಜಶ್ವಿನಿ ಆರ್.ವಿ., ಸಮರ್ಥ ಆರ್.ಪತ್ತಾರ, ಸುಮಾಲತಾ, ರಾಜೇಂದ್ರ ಆರ್.ದೊಡ್ಡಮನಿ, ಕನ್ಯಾ ಮರಾಠಾ, ಶೃದ್ಧಾ ಆರ್., ಸೇರಿದಂತೆ ಬಡಾವಣೆಯ ನಾಗರಿಕರು, ಮತ್ತಿತರರು ಪಾಲ್ಗೊಂಡಿದ್ದರು.