ಸುಪ್ರೀಂ ಕೋರ್ಟ ನೀಡಿರುವ ತೀರ್ಪನ್ನು ಕೆಲವು ರಾಜಕೀಯ ನಾಯಕರು ವಿರೋಧ ವ್ಯಕ್ತ ಪಡಿಸುತ್ತಿರುವುದನ್ನು ರಾಜು ಎಸ್.ಕಟ್ಟಿಮನಿ ಖಂಡಿಸಿದ್ದಾರೆ.

ಸುಪ್ರೀಂ ಕೋರ್ಟ ನೀಡಿರುವ ತೀರ್ಪನ್ನು ಕೆಲವು ರಾಜಕೀಯ ನಾಯಕರು ವಿರೋಧ ವ್ಯಕ್ತ ಪಡಿಸುತ್ತಿರುವುದನ್ನು ರಾಜು ಎಸ್.ಕಟ್ಟಿಮನಿ ಖಂಡಿಸಿದ್ದಾರೆ.

 ಸುಪ್ರೀಂ ಕೋರ್ಟ ನೀಡಿರುವ ತೀರ್ಪನ್ನು ಕೆಲವು ರಾಜಕೀಯ ನಾಯಕರು ವಿರೋಧ ವ್ಯಕ್ತ ಪಡಿಸುತ್ತಿರುವುದನ್ನು ರಾಜು ಎಸ್.ಕಟ್ಟಿಮನಿ ಖಂಡಿಸಿದ್ದಾರೆ.

ಕಲಬುರಗಿ: ಪರಿಶಿಷ್ಟ ಜಾತಿ ಜನಾಂಗದ ಒಳಮೀಸಲಾತಿ ದೇಶಾದ್ಯಂತ ಜಾರಿ ಮಾಡಬಹುದೆಂದ ಸುಪ್ರೀಂ ಕೋರ್ಟ ನೀಡಿರುವ ತೀರ್ಪನ್ನು ಕೆಲವು ರಾಜಕೀಯ ರಾಷ್ಟ್ರ ಮಟ್ಟದ ನಾಯಕರು, ರಾಜ್ಯ ಮಟ್ಟದ ನಾಯಕರು ವಿರೋಧ ವ್ಯಕ್ತ ಪಡಿಸುತ್ತಿರುವುದನ್ನು ಮಾದಿಗ ಸಮಾಜದ ಯುವ ಹೋರಾಟಗಾರರಾದ ರಾಜು ಎಸ್.ಕಟ್ಟಿಮನಿ ಅವರು ಖಂಡಿಸಿದ್ದಾರೆ. 

ಸುಮಾರು 30 ವರ್ಷಗಳಿಂದ ಸತತವಾಗಿ ಮಾದಿಗ ಸಮುದಾಯದವರು ಹಾಗೂ ಮಾದಿಗ ಪರ ಹಲವಾರು ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುತ್ತಾರೆ. ಮಿಸಲಾತಿಯಲ್ಲ ಒಳ ಮೀಸಲಾತಿಯನ್ನು ಪರಿಶಿಷ್ಠ ಜಾತಿಯಲ್ಲಿರುವ ಬಹು ಸಂಖ್ಯಾತ ಜನಾಂಗಕ್ಕೆ ಯಾವುದೇ ಸರ್ಕಾರಿ ಸೌಲಭ್ಯಗಳಲ್ಲಾಗಲಿ, ಶಿಕ್ಷಣದಲ್ಲಾಗಲಿ, ರಾಜಕೀಯದಲ್ಲಾಗಲಿ ವಿಶೇಷವಾಗಿ ಮಾದಿಗ ಸಮುದಾಯಕ್ಕೆ ಮೀಸಲಾತಿಯಲ್ಲಿ ಬರುವಂತಹ ಯವುದೇ ಸೌಲಭ್ಯ ಇಲ್ಲಿಯವರೆಗು ಮಾದಿಗ ಸಮುದಾಯಕ್ಕೆ ದೊರಕಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟನಲ್ಲಿ 7 ಜನ ನ್ಯಾಯಾದೀಶರ ಪೀಠ ತೀರ್ಪು ಪರಿಶಿಷ್ಟ ಜಾತಿ ಜನಾಂಗದವರಿಗೆ ಸಂವಿಧಾನಿಕ ಬದ್ಧವಾಗಿ ಮತ್ತು ಸಮಾನವಾಗಿ ತೀರ್ಪನ್ನು ನೀಡಿರುವುದು ನಾವು ಸ್ವಾಗತಿಸುತ್ತೇವೆ. ಹಾಗೂ ಅಭಿನಂದನೆ ಸಲ್ಲಿಸುತ್ತೇವೆ. 

ಇದನ್ನು ಕೆಲವು ಜನ, ಕೆಲವು ರಾಜಕೀಯ ನ್ಯಾಯಕರು ಏನು ವಿರೋಧ ಮಾಡುತ್ತಿದ್ದೀರೊ ನ್ಯಾಯಲಯದ ಬಗ್ಗೆ ಮತ್ತು ನ್ಯಾಯಾಧೀಶರ ಬಗ್ಗೆ ಗೌರವ ಇದ್ದಿದ್ದೆ ಆದರೆ, ವಿರೋಧ ಮಾಡುವವರು ಕೂಡ ನ್ಯಾಯಲಯಕ್ಕೆ ತಲೆಬಾಗಿಸಿ, ನ್ಯಾಯಾಧೀಶರಿಗೆ ತಲೆಬಾಗಿ ಈ ತೀರ್ಪನ್ನು ತಾವು ಸ್ವಾಗತಿಸಬೇಕು. ನ್ಯಾಯಲಯಕ್ಕಿಂತ ಮತ್ತು ನ್ಯಾಯಾಧೀಶರಿಗಿಂತ ದೊಡ್ಡವರು ನಿವ್ಯಾರೂ ಇಲ್ಲವೆಂದು ತಿಳಿಸುತ್ತೇನೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಆದಷ್ಟು ಬೇಗನೆ ಜಾರಿ ಮಾಡಬೇಕು. ಎಂದು ಕಟ್ಟಿಮನಿ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ

.