ಬಾಕಿ ಉಳಿಸಿಕೊಂಡ 6 ತಿಂಗಳ ವೇತನ ಬಿಡುಗಡೆಗೆ ಮನರೇಗಾ ನೌಕರರ ಆಗ್ರಹ

ಬಾಕಿ ಉಳಿಸಿಕೊಂಡ 6 ತಿಂಗಳ ವೇತನ ಬಿಡುಗಡೆಗೆ ಮನರೇಗಾ ನೌಕರರ ಆಗ್ರಹ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಹೊರ ಸಂಪನ್ಮೂಲದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಂದ ತಾ.ಪಂ ಇಓಗೆ ಮನವಿ ಸಲ್ಲಿಕೆ

ಬಾಕಿ ಉಳಿಸಿಕೊಂಡ 6 ತಿಂಗಳ ವೇತನ ಬಿಡುಗಡೆಗೆ ಮನರೇಗಾ ನೌಕರರ ಆಗ್ರಹ

ಚಿಂಚೋಳಿ :ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಹೊರ ಸಂಪನ್ಮೂಲದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕಳೆದ 6 ತಿಂಗಳುಗಳಿಂದ ವೇತನ ಪಾವತಿ ಮಾಡದೇ ಇರುವುದರಿಂದ ಕುಟುಂಬದ ನಿರ್ವಹಣೆ ಮಾಡುವುದು ಕಷ್ಟಕರವಾಗಿದ್ದು, ಕೂಡಲೇ ಅಧಿಕಾರಿಗಳು ಬಾಕಿ ಉಳಸಿಕೊಂಡಿರುವ ವೇತನ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮಹಾತ್ಮಾಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಅವರು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಹೊರ ಸಂಪನ್ಮೂಲ ಆಧಾರದ ಮೇಲೆ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಅಧಿಕಾರಿಗಳು ಕಳೆದ ಜನವರಿ 2025 ರಿಂದ ವೇತನ ಪಾವತಿ ಮಾಡುತ್ತಿಲ್ಲ.

ತಾಲೂಕ ಪಂಚಾಯಿತಿ ಹಂತದಲ್ಲಿ ತಾಂತ್ರಿಕ ಸಂಯೋಜಕ, ಎಂಐಎಸ್ ಸಂಯೋಜಕ, ಐಇಸಿ ಸಂಯೋಜಕ, ತಾಂತ್ರಿಕ ಸಹಾಯಕ, ಆಡಳಿತ ಸಹಾಯಕ, ಡಿಇಓಅನುಷ್ಠಾನ ಇಲಾಖೆಯಡಿ ಡಿಇಓ ಕಂ. ಕೋಆರ್ಡಿನೇಟರ್ ಮತ್ತು ಜಿಲ್ಲಾ ಪಂಚಾಯತ್ ಹಂತದಲ್ಲಿ ಎಡಿಪಿಸಿ, ಡಿಎಂಐಎಸ್, ಡಿಐಇಸಿ, ಜಿಲ್ಲಾ ಅಕೌಂಟ್ ಮ್ಯಾನೇಜರ್ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ 6 ತಿಂಗಳುಗಳಿಂದ ವೇತನ ಪಾವತಿವಿಲ್ಲದೇ ಕುಟುಂಬ ನಿರ್ವಹಣೆಗೆ ಕಷ್ಟಕರವಾಗುತ್ತಿದೆ. ಅಧಿಕಾರಿಗಳು ಕೇಂದ್ರ ಸರಕಾರದಿಂದ ಅನುದಾನ ಬಂದಿಲ್ಲವೆಂದು ಉತ್ತರಿಸುತ್ತಿದ್ದಾರೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಗೊಂಡಿದ್ದು, ಜಿಲ್ಲಾ ಕೇಂದ್ರಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂಬ ಮಾಹಿತಿ ಇದ್ದರೂ ಅಧಿಕಾರಿಗಳು ವೇತನ ಬಿಡುಗಡೆಗೊಳಿಸುತ್ತಿಲ್ಲ. ವೇತನವಿಲ್ಲದೇ ಕುಟುಂಬದ ನಿರ್ವಹಣೆ ನಡೆಸುವುದು, ಇಎಂಐ, ಮಕ್ಕಳ ಶಾಲೆ ಶುಲ್ಕಗಳನ್ನು ಕಟ್ಟಲು ಕೈ ಸಾಲ ಮಾಡಲಾಗಿದ್ದು, ಸಾಲಗಾರರ ಬೆನ್ನಟ್ಟುತ್ತಿದ್ದಾರೆ. ಕೂಡಲೆ ಬಾಕಿ ಉಳಿಸಿಕೊಂಡಿರುವ ವೇತನ ಬಿಡುಗಡೆಗೊಳಿಸಿ ಸಾಲಗಾರರಿಂದ ಮುಕ್ತಿ ನೀಡಬೇಕು. ಇಲ್ಲದ ಹೊರತು ವೇತನ ಪಾವತಿ ಆಗುವವರೆಗೂ ಇಲಾಖೆಯ ಕೆಲಸ ಕಾರ್ಯಗಳು ಸ್ಥಗಿತಗೊಳಿಸಿ, ರಾಜ್ಯ ಸಂಘ ನಿರ್ಣಯಿಸಿದಂತೆ ಅಸಹಕಾರ ಚಳುವಳಿಗೆ ದುಮಕಬೇಕಾಗುತ್ತದೆ ಎಂದು ಜೈಭೀಮ ರಾಠೋಡ, ಅನೀಲ ರಾಠೋಡ, ಭೀಮಾಶಂಕರ, ಶ್ರೀಕಾಂತ, ಅಜೇಯಸಿಂಗ್, ಶಂಕರ, ಶ್ರೀಧರ, ಬಾಬುರಾವ್, ಯಾಸ್ಮೀನ್, ಯಶೋಧ, ಸಂಗೀತಾ, ಆಕಾಶ, ಸಂಜೀವಕುಮಾರ, ಶ್ರೀದೇವಿ ಅವರ ಸಹಿಯೋಂದಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.