ಸಾವಿತ್ರಿಬಾಯಿ ಫುಲೆ ಅವರಿಗೆ ಭಾರತ ರತ್ನ ಗೌರವ ಪುರಸ್ಕಾರ ನೀಡಬೇಕೆಂದು ಶಿವಲಿಂಗಪ್ಪ ಕಿನ್ನೂರ ಆಗ್ರಹ
ಸಾವಿತ್ರಿಬಾಯಿ ಫುಲೆ ಅವರಿಗೆ ಭಾರತ ರತ್ನ ಗೌರವ ಪುರಸ್ಕಾರ ನೀಡಬೇಕೆಂದು ಶಿವಲಿಂಗಪ್ಪ ಕಿನ್ನೂರ ಆಗ್ರಹ
ಕಲಬುರಗಿ: ಸಾಕ್ಷರಾದೀಪ ಆದರ್ಶವಾದಿ, ಸಾವಿತ್ರಿಬಾಯಿ ಜ್ಯೋತಿಭಾ ಫುಲೆ, ಶೈಕ್ಷಣಿಕ ಸಮಾಜಿಕ ಕ್ರಾಂತಿಗೆ ತ್ಯಾಗ ಜೀವನ ತತ್ವ ಸಿದ್ಧಾಂತಗಳು ಅಳವಡಿಸಿಕೊಳ್ಳವುದು ಅನುಷ್ಠಾನಕ್ಕೆ ತರುವುದು ಸಾಮೂಹಿಕ ಜವಾಬ್ದಾರಿ ಕರ್ತವ್ಯದ ಹೋಣೆಗಾರಿಕೆಯಾಗಿದೆ ಎಂದು ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ ಹೇಳಿದರು.
ಕಲಬುರಗಿ ನಗರದಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ಖSP ಕಛೇರಿಯಲ್ಲಿ ಸಾವಿತ್ರಿಬಾಯಿ ಜ್ಯೋತಿಭಾ ಫುಲೆರವರ 194ನೇ ಜಯಂತಿ ಆಚರಣೆ ಸಂದರ್ಭದಲ್ಲಿ ಶಿವಲಿಂಗಪ್ಪ ಕಿನ್ನೂರ ಅವರು ಮಾತನಾಡಿ ಧೀರೊದತ್ತ ಮಹಿಳೆ, ಭಾರತಿಯ ಸಮಾಜದಲ್ಲಿ ಮಹಿಳೆಯರಿಗೆ ಸ್ಪೂರ್ತಿನೀಡಿ, ಶೈಕ್ಷಣಿಕ-ಸಮಾಜಿಕ ಕ್ರಾಂತಿ ಮೂಡಿಸಿದ, ಈಗಾಗಲೇ ಇಂಡಿಯನ್ ಫಸ್ಟ್ ಲೇಡಿ ಟೀಚರ್ ಪುರಸ್ಕಾರ, 2015ರಲ್ಲಿ ಪುಣೆ ವಿಶ್ವವಿದ್ಯಾಲಯಕ್ಕೆ ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಿದ್ದು ಜೀವನ ತ್ಯಾಗಕ್ಕೆ ಭಾರತ ರತ್ನ ಗೌರವ ಪುರಸ್ಕಾರ ನೀಡಬೇಕೆಂದು ಶಿವಲಿಂಗಪ್ಪ ಕಿನ್ನೂರ ಅವರು ಆಶಾ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ, ಸಾವಿತ್ರಿಬಾಯಿ ಜ್ಯೋತಿಭಾ ಫುಲೆ ಜೀವನ ತ್ಯಾಗಕ್ಕೆ, ಬದಕು ಸಾಧನೆಯ ಇಂದಿಗು ಪ್ರಸ್ತುತತೆಗಾಗಿ ಭಾರತ ರತ್ನ ಗೌರವ ಮರಣಕ್ಕೋರ ಪುರಸ್ಕಾರ ನೀಡಬೇಕೆಂದು ಈ ಮೂಲಕ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಭೋಧನಾ ಕ್ಷೇತ್ರದ ವೃತಿ ಪರರರಿಗೆ ಸಾವಿತ್ರಿಬಾಯಿ ಜ್ಯೋತಿಭಾ ಫುಲೆ ಜೀವನ ಸಾಧನೆ ಪ್ರಾಯೋಗಿಕ ಮಾದರಿ ಗ್ರಾಮೀಣ ಶಾಲೆಗಳಲ್ಲಿ ಅಳವಡಿಸಿಕೊಳ್ಳಲು ಕಾರ್ಯಗತ ಮಾಡಬೇಕೆಂದು ಅವರು ಹೇಳಿದರು ಶಿವಲಿಂಗಪ್ಪ ಕಿನ್ನೂರ ಹೇಳಿದರು.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ಖSP ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ದೊಡ್ಡನಿ, ಜಿಲ್ಲಾಧ್ಯಕ್ಷ ದೇವಿದ್ರಪ್ಪ ಕ್ಯಾಶಪಳಿ, ಕಾರ್ಯದರ್ಶಿ ಶ್ರೀಮಂತ ಮಾವನೂರ, ಮಾಹತೇಶ ಅವರಾದಿ, ರಮೇಶ ಶಹಬಾದಕರ್, ದುರ್ಗಪ್ಪ ತಾರಫೈಲ್, ಆನಂದ ಸಿನ್ನೂರ, ಆರ್.ಶಾಮರಾವ, ರಾಚಣ್ಣ ಯಡ್ರಾಮಿ ಹಿರಿಯ ಮುಖಂಡ ಅಣಪ್ಪ ಜಮಾದಾರ, ಸಂತೋಷ ತಳವಾರ, ವಿಜಯಕುಮಾರ ಹಾಗೂ ಇತರರು ಉಪಸ್ಥಿತರಿದರು .