ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿಗೆ ಸನ್ಮಾನ

ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿಗೆ ಸನ್ಮಾನ

ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿಗೆ ಸನ್ಮಾನ

ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನೂತನ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ಪ್ರತಿಭಾ ಕುಳಾಯಿ ಅವರಿಗೆ ಬೆಂಗಳೂರಿನಲ್ಲಿ ಕಡೆಚೂರ್ ಗ್ರೂಪ್ ಹೋಟೆಲ್ ವತಿಯಿಂದ ವಿಶೇಷ ಸನ್ಮಾನ ನೆರವೇರಿಸಲಾಯಿತು. 

    ಬೆಂಗಳೂರು ಗಾಂಧಿನಗರದ ವಿಂಟೇಜ್ ಪಾರ್ಕ್ ಹೋಟೆಲಿನಲ್ಲಿ ಕಡೇ ಚೂರ್ ಗ್ರೂಪ್ ನ ನಿರ್ದೇಶಕರಾದ ಡಾ. ರಾಜೇಶ್ ಕಡೇಚೂರ್ ಮೈಸೂರ್ ಪೇಟ ,ಶಾಲು ಹಾಗೂ ಹಾರದೊಂದಿಗೆ ಸನ್ಮಾನಿಸಿ ತಮ್ಮ ಅವಧಿಯಲ್ಲಿ ಹಿಂದುಳಿದ ವರ್ಗಗಳ ಸಮಗ್ರ ಕಲ್ಯಾಣಕ್ಕಾಗಿ ವಿಶೇಷ ನೆರವು ಸಿಗುವಂತಾಗಲಿ ಎಂದು ಶುಭಾಶಯ ಕೋರಿದರು. ಸನ್ಮಾನ ಸ್ವೀಕರಿಸಿದ ಪ್ರತಿಭಾ ಕುಳಾಯಿ ಮಾತನಾಡಿ ಅಭಿಮಾನದ ಸನ್ಮಾನಕ್ಕೆ ಕೃತಜ್ಞನಾಗಿದ್ದೇನೆ ಮತ್ತು ಹಿಂದುಳಿದ ವರ್ಗದ ಆಯೋಗದ ಸದಸ್ಯರಾಗಿ ಕಲ್ಯಾಣಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡೋದಾಗಿ ಹೇಳಿದರು.

  ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ನಮಿತಾ ಕೆ ಪೂಜಾರಿ ಉಜಿರೆ, ಗೆಜ್ಜೆ ಗಿರಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ಪತ್ರಕರ್ತರಾದ ರಮೇಶ್ ಪೆರ್ಲ, ವಿಂಟೇಜ್ ಪಾರ್ಕ್ ಹೋಟೆಲ್ ನ ವ್ಯವಸ್ಥಾಪಕರಾದ ಯೋಗೀಶ್ ರಾಥೋಡ್, ವಸಂತ ಕುಮಾರ್ ಹಾಗೂ ಇಂತೇಜಾಮ್ ಅಲಿ ಕಲಬುರಗಿ ಉಪಸ್ಥಿತರಿದ್ದರು.