ಅ.21 ಕ್ಕೆ ಮುಂದೂಡಿದ ರೆಡ್‌ಕ್ರಾಸ್ ಸರ್ವ ಸದಸ್ಯರ ಸಭೆ

ಅ.21 ಕ್ಕೆ ಮುಂದೂಡಿದ ರೆಡ್‌ಕ್ರಾಸ್ ಸರ್ವ ಸದಸ್ಯರ ಸಭೆ

ಅ.21 ಕ್ಕೆ ಮುಂದೂಡಿದ ರೆಡ್‌ಕ್ರಾಸ್ ಸರ್ವ ಸದಸ್ಯರ ಸಭೆ  

 ಕಲಬುರಗಿ: ಕಲಬುರಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ 

ಜಿಲ್ಲಾ ಶಾಖೆಯ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಅಕ್ಟೋಬರ್ 18 ರಂದು ನಿಗದಿಪಡಿಸಲಾಗಿತ್ತು.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಕ್ಟೋಬರ್ 21ಕ್ಕೆ ಮುಂದೂಡಲಾಗಿದೆ ಎಂದು ಕಲಬುರಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ಅವರು ತಿಳಿಸಿದ್ದಾರೆ. 

ಸರ್ವ ಸದಸ್ಯರ ಸಭೆಯು ಅಕ್ಟೋಬರ್ 21 ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ 

ಸಭಾಂಗಣದಲ್ಲಿ ಕಲಬುರಗಿ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷರು ಆದ ಜಿಲ್ಲಾಧಿಕಾರಿಗಳು ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. 

ರೆಡ್‌ಕ್ರಾಸ್ ಸಂಸ್ಥೆಯ ಎಲ್ಲಾ ಸದಸ್ಯರು ಇದೇ ನೋಟೀಸ್ ಎಂದು ಭಾವಿಸಿ, ಸದರಿ ದಿನಂದು ನಡೆಯುವ ಸಭೆಗೆ 

ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.