ಪಾಲಿಕೆ ಮಾಜಿ ಸದಸ್ಯ ರಾಜಕುಮಾರ ಕಪನೂರ ಜನ್ಮ ದಿನ ಬಡ ವಿಧ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ
ಪಾಲಿಕೆ ಮಾಜಿ ಸದಸ್ಯ ರಾಜಕುಮಾರ ಕಪನೂರ ಜನ್ಮ ದಿನ
ಬಡ ವಿಧ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜಕುಮಾರ ಕಪನೂರ ರವರ ೪೭ನೇ ಹುಟ್ಟು ಹಬ್ಬವನ್ನು ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆ ಆವರಣದಲ್ಲಿ ಅವರ ಅಭಿಮಾನಿಗಳು ಸಡಗರ ಸಂಭ್ರಮದಿಂದ ಹುಟ್ಟು ಹಬ್ಬವನ್ನು ಆಚರಿಸಿದರು.
ಯುವ ಮುಖಂಡ ಪ್ರಕಾಶ ತಳಕೇರಿ ಮಾತನಾಡಿ, ಜನ್ಮದಿನವನ್ನು ಅದ್ಧೂರಿ, ಆಡಂಬರದಿಂದ ಮಾಡದೆ ಬಡ ಜನರಿಗೆ, ಶೋಷಿತರಿಗೆ, ಸಂಕಷ್ಟದಲ್ಲಿರುವ ಜನರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತಿರಬೇಕು ಎಂಬ ರಾಜು ಅಣ್ಣ ಕಪನೂರ ಅವರ ಸೂಚನೆಯಂತೆ ವಿಧ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದರು.
ರವಿ ಕಪನೂರ ಮಾತನಾಡಿ, ಸರ್ಕಾರ ನೀಡುವ ಸೌಲಭ್ಯಗಳ ಜತೆಗೆ ದಾನಿಗಳು ನೀಡುವ ಎಲ್ಲಾ ಸೌಲಭ್ಯಗಳನ್ನು ಪಡೆದು ಶೈಕ್ಷಣಿಕ ಪ್ರಗತಿಯನ್ನು ಹೊಂದಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಮುಂದಿನ ಸತ್ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಬಸವರಾಜ ಅಷ್ಠಗಿ ಮಾತನಾಡಿ, ಸಮಾಜ ಸೇವಕ, ಯುವ ಜನರಿಗೆ ಸ್ಪೂರ್ತಿ ಆದ ರಾಜು ಅಣ್ಣ ಕಪನೂರ ಅವರು ಸಮಾಜಿಕ ಚಿಂತನೆ ಮಾಡುವ, ಬಡವರ ಬಂಧುಗಳಾಗಿ ಜನಸೇವೆ ಮಾಡುತ್ತಿದ್ದಾರೆ, ಹಾಗೆ ಕೊಡಗೈ ದಾನಿಯಾಗಿ ಕಾಮಧನು ಕಲ್ಪವೃಕ್ಷ ದಂತಿದ್ದಾರೆ, ಅವರ ಆಯಸ್ಸು, ಆರೋಗ್ಯ ಮತ್ತು ರಾಜಕೀಯದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಬೆಳಿಯಲಿ ಎಂದು ಹಾರೈಸಿ ಅವರ ಹುಟ್ಟು ಹಬ್ಬವನ್ನು ಆಚರಿಸಿತ್ತಿದ್ದೇವೆ ಎಂದು ಹೇಳಿದರು.
ಯುವ ಮುಖಂಡ ಕಿರಣ ಚವ್ಹಾಣ ಯವರು ಕಪನೂರ ರವರ ಸಾಮಾಜಿಕ ಸೇವೆ ಮತ್ತು ಹೋರಾಟದ ಜೀವನ ಬಗ್ಗೆ ಮಾತನಾಡಿದರು.
ಡಾ. ಬಿಆರ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಶಾಲೆಯ ಮಕ್ಕಳಿಗೆ ರಾಜಕುಮಾರ ಕಪನೂರ ಯವರ ಅಭಿಮಾನಿಗಳು ಸಿಹಿ ಹಂಚಿ, ಜೊತೆಗೆ ನೂರಾರು ಪರೀಕ್ಷಾ ಪ್ಯಾಡ ಹಾಗೂ ಪುಸ್ತಕ, ಪೇನ್, ಪೆನ್ಸಿಲ್ ಗಳನ್ನು ವಿತರಿಸುವ ಮೂಲಕ ಶೈಕ್ಷಣಿಕವಾಗಿ ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು
ರಾಜು ಕಪನೂರ ಅಭಿಮಾನಿಗಳಿಂದ ಮಾಲಾರ್ಪಣೆ ಮಾಡಿ ಸನ್ಮಾನಿಸಲಾಯಿತು, ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ದೊಡ್ಡದಾದ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅಭಿಮಾನ ಬಳಗದ ರವಿ ಕಪನೂರ, ಸದಾನಂದ ಅಷ್ಠಗಿ, ಬಸವರಾಜ ಅಷ್ಠಗಿ, ವಸಂತ, ವಿಕ್ರಮ, ಪರಶುರಾಮ ಚಲುವಾದಿ, ಅಶೋಕ ಮೂಸಲಗಿ, ಉದಯ, ಶರಣು ನಾಟೇಕರ, ಶಿವರಾಂ, ರಾಜು ನಾಟೇಕರ, ಬಸವರಾಜ ಮಯೂರ, ರಾಜೇಶ ಯಂಗುಂಟಿಕರ ಸೇರಿದಂತೆ ನೂರಾರು ಯುವಕರು ಉಪಸ್ಥಿತರಿದರು.
