ಶ್ವಾನಗಳ ನಿಯಂತ್ರಣ ಮಾಡುವಲ್ಲಿ ನಗರಸಭೆ ವಿಫಲ: ಬಿಜೆಪಿ ಆರೋಪ

ಶ್ವಾನಗಳ ನಿಯಂತ್ರಣ ಮಾಡುವಲ್ಲಿ ನಗರಸಭೆ ವಿಫಲ: ಬಿಜೆಪಿ ಆರೋಪ

ಶ್ವಾನಗಳ ನಿಯಂತ್ರಣ ಮಾಡುವಲ್ಲಿ ನಗರಸಭೆ ವಿಫಲ: ಬಿಜೆಪಿ ಆರೋಪ

ಶಹಾಬಾದ: ನಗರದಲ್ಲಿ ಕೆಲದಿನಗ ಹಿಂದೆ ಬೀದಿ ನಾಯಿ ಒಂದು ಹೆಣ್ಣು ಮಗು ಮೇಲೆ ದಾಳಿಮಾಡಿ ಕಣ್ಣು ಕಳೆದುಕೊಳ್ಳುವಂತಾಯಿತು. ಈಗ ಮತ್ತೊಂದು ಮಗು ಗಂಭೀರ ಗಾಯಗೊಂಡಿದೆ, ಮತ್ತು 12 ಜನ ಮಕ್ಕಳಮೇಲೆ ದಾಳಿ ಮಾಡಿರುವುದು ನಗರಸಭೆಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಬಿಜೆಪಿ ಹಿರಿಯ ಮುಖಂಡ ಅರುಣಕುಮಾರ ಪಟ್ಟಣಕರ ಆರೋಪಿಸಿದರು.

ಶರಣ ನಗರ ಮತ್ತು ಅಶೋಕ ನಗರ ಬಡಾವಣೆಯ ಮಕ್ಕಳ ಮೇಲೆ ನಾಯಿ ದಾಳಿಮಾಡಿ ಗಂಭೀರ ಗಾಯಗೊಳಿಸಿರುವುದನ್ನು ವಿರೋಧಿಸಿ ಬಿಜೆಪಿ ಶಹಬಾದ ಮಂಡಲ ವತಿಯಿಂದ ನಗರಸಭೆ ಎದುರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಬೇಕಾಬಿಟ್ಟಿ ಮಾಂಸದ ಅಂಗಡಿಗಳು ತೆರೆಯಲು ಅನುಮತಿ ಕೊಟ್ಟು, ಅವೈಜ್ಞಾನಿಕ ನಿರ್ವಹಣೆ ಮಾಡುತ್ತಿರುವುದರಿಂದ ನಾಯಿಗಳು ಮಾಂಸದ ತ್ಯಾಜ್ಯ ಮತ್ತು ತುಣುಕುಗಳು ಸಿಗದಿದ್ದಾಗ ಮಕ್ಕಳಮೇಲೆ ದಾಳಿ ಮಾಡುತ್ತಿವೆ, ನಗರಸಭೆ ಮಾಂಸದ ಅಂಗಡಿಗ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು. ಹಾಗೂ ಸೆರೆ ಹಿಡಿದ ನಾಯಿಗಳಿಗೆ ದೂರದ ಕಂಚಾವರಂ ಕಾಡಿನಲ್ಲಿ ಬಿಡಬೇಕು, ಇಲ್ಲವಾದರೆ ನಗರ ಸಭೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಂಡಲ ಅಧ್ಯಕ್ಷ ಅಧ್ಯಕ್ಷರಾದ ನಿಂಗಣ್ಣ ಹುಳಗೊಳಕರ ಮಾತನಾಡಿ ನಾಯಿಗಳ ನಿಯಂತ್ರಣ ಮಾಡಿ ಎಂದು ಹೋರಾಟ ಮಾಡುವಂತಹ ಪರಿಸ್ಥಿತಿ ಬಂದಿದೆ, ಇದು ನಗರಸಭೆಗೆ ನಾಚಿಕೆ ತರುವಂತಹ ವಿಷಯ ಎಂದು ಹೇಳಿದರು. ನಂತರ ಮನವಿ ಪತ್ರ ಓದಿ ಸ್ಥಳಕ್ಕೆ ಆಗಮಿಸಿದ ಗ್ರೇಡ್ 2 ತಹಶೀಲ್ದಾರ್ ಗುರುರಾಜ ಸಂಗಾವಿ ಹಾಗೂ ಪೌರಾಯುಕ್ತ ಕೆ ಗುರುಲಿಂಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ ಇಂತಹ ಘಟನೆ ಮರುಘಟಿಸಿದಂತೆ ಕ್ರಮವಹಿಸಲು ತಿಳಿಸಿದರು. ಹಾಗೂ ಬಿಜೆಪಿ ಮುಖಂಡರಾದ ಚಂದ್ರಕಾಂತ ಗೊಬ್ಬರಕರ ಭೀಮರಾವ ಸಾಳುಂಕೆ ಮಾತನಾಡಿದರು.

ಈ ಸಂದರ್ಭದಲ್ಲಿ ಅಣವೀರಪ್ಪ ಇಂಗಿನಶೆಟ್ಟಿ, ಶಿವಕುಮಾರ ಇಂಗಿನಶೆಟ್ಟಿ, ಕನಕಪ್ಪ ದಂಡಗುಲಕರ, ಸಿದ್ರಾಮ ಕುಸಾಳೆ,ರವಿ ರಾಠೊಡ, ಶರಣಪ್ಪ ಬುಗಶೆಟ್ಟಿ, ರಾಜು ಕುಂಬಾರ, ಶಶಿಕಲಾ ಸಜ್ಜನ, ನಂದಾ ಗುಡೂರ, ಪದ್ಮಾ ಕಟಗೆ, ಪಾರ್ವತಿ ಪವಾರ, ದೇವದಾಸ ಜಾಧವ, ದೀನೇಶ ಗೌಳಿ, ಸೂರ್ಯಕಾಂತ ವಾರದ, ಅಶೋಕ ಜಿಂಗಾಡೆ, ಬಸವರಾಜ ಬಿರಾದಾರ,ರಾಮು ಕುಸಾಳೆ, ಭೀಮಯ್ಯ ಗುತ್ತೆದಾರ, ಅಮರ ಕೋರೆ, ಶೀವಕುಮಾರ ತಳವಾರ, ಕಾಶಣ್ಣ ಚನ್ನೂರ ಸಿರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ