ಅಮಿತ್ ಶಾ ಹೇಳಿಕೆ ಖಂಡನೆ :NSUI
ಅಮಿತ್ ಶಾ ಹೇಳಿಕೆ ಖಂಡನೆ :NSUI
ಇಂದು ಬೀದರ ನಗರದ ಅಂಬೇಡ್ಕರ್ ವೃತದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆಯು
ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಶೋಕಿಯಾಗಿದೆ, ಅವರ ಹೆಸರು ಬದಲಿಗೆ ದೇವರ ಹೆಸರನ್ನು ಹೇಳಿದ್ದರೆ ಏಳು ಜನ್ಮದ ವರೆಗೂ ಸ್ವರ್ಗ ಲಭ್ಯವಾಗುತ್ತಿತ್ತು" ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಈ ಮೇಲಿನ ಹೇಳಿಕೆಯಲ್ಲಿ ಅಂಬೇಡ್ಕರ್ ವಿರೋಧಿ ಮನೋಭಾವ ಎದ್ದು ಕಾಣುತ್ತದೆ. ಇಂತಹ ಅಸೂಕ್ಷ್ಮ ಮತ್ತು ಅಭದ್ರ ಹೇಳಿಕೆ ಇಡೀ ದೇಶದ ಶೋಷಿತ ಸಮುದಾಯಗಳ ಸಂಕಷ್ಟ ಮತ್ತು ಅವಮಾನವನ್ನು ಪುನಃ ಒತ್ತಿಹೇಳುತ್ತದೆ. ಅವರ ಈ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ
ಭಾರತದ ಇತಿಹಾಸದಲ್ಲಿ ಅಸ್ಪೃಶ್ಯರು, ಮಹಿಳೆಯರು ಮತ್ತು ಶೋಷಿತ ವರ್ಗಗಳಿಗೆ ಮಾನವೀಯ ಬದುಕು ನೀಡಿದ ಶಕ್ತಿ ಬಾಬಾಸಾಹೇಬರು ಕೊಟ್ಟ ಸಂವಿಧಾನ ಮತ್ತು ಅವರ ಮಾರ್ಗದರ್ಶಕ ತತ್ವಗಳಿಂದ ಬಂದಿದೆ. ಅಸ್ಪೃಶ್ಯತೆ, ಅಸಮಾನತೆ, ಮತ್ತು ಶೋಷಣೆಯ ವಿರುದ್ಧ ಬಾಬಾಸಾಹೇಬರು ತಮ್ಮ ತ್ಯಾಗ, ಅಧ್ಯಯನ ಮತ್ತು ಬದ್ಧತೆಯ ಮೂಲಕ ಸಮಾಜವನ್ನು ಮೇಲೆತ್ತಿದ ಸತ್ಯವನ್ನು ಮರೆಯುವಂತಿಲ್ಲ.
ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆದರ್ಶಗಳು, ಶೋಷಿತ ವರ್ಗಗಳಿಗೆ ಹೊಸ ಬದುಕು ನೀಡಿದ ನಿಜವಾದ ದಾರಿ. ಬಾಬಾಸಾಹೇಬರು ಸ್ಪಷ್ಟವಾಗಿ ಹೇಳಿರುವಂತೆ, ಶಿಕ್ಷಣ, ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಮಾತ್ರವೇ ಸಮಾಜದಲ್ಲಿ ಬದಲಾವಣೆ ತರಬಲ್ಲ ಯೋಗ್ಯ ಮಾರ್ಗ.
ಅಮಿತ್ ಶಾ ಅವರಂತಹ ವ್ಯಕ್ತಿಗಳು ಇಂತಹ ಹೀನ ಹೇಳಿಕೆಗಳಿಂದ ದೇಶದ ಜನತೆ ಮುಂದೆ ಕ್ಷಮೆಯಾಚಿಸಬೇಕು ಮತ್ತು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಸಾಮೂಹಿಕ ಪ್ರತಿಭಟನೆ ಮಾಡಲಾಯಿತು ಈ ಒಂದು ಪ್ರತಿಭಟನೆಯಲ್ಲಿ NSUI ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಫೀರೋಜ ಖಾನ,NSUI ಪ್ರಚಾರ್ ಸಮಿತಿ ಜಿಲ್ಲಾ ಅಧ್ಯಕ್ಷರಾದ ಸಂತೋಷ ಕುಮಾರ್ ಚಿಮಕೋಡೆ, ಉಪಾಧ್ಯಕ್ಷರುಗಳಾದ ಮುಕೇಶ ಚಲ್ವಾ, ಭೀಮರಾವ ಮಾಲಗತ್ತಿ, ಲೊಕೇಶ ದೊಮ್ಮೆ ವಿಶಾಲ್ ಕುದ್ರೆ, ನಗರ ಅಧ್ಯಕ್ಷರಾದ ಸಿದ್ದಾರ್ಥ ಭಾವಿದೊಡ್ಡಿ NSUI ಪಶು ವೈದ್ಯಕೀಯ ಕಾಲೇಜು ಅಧ್ಯಕ್ಷರಾದ ಇಮ್ರಾನ ಖಾನ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೌತಮ್ಮ ಮುತಂಗಿಕರ, ಸಚೀನ ಶೇಟ್ಕರ,NSUI ಬೀದರ ದಕ್ಷಿಣದ ಅಧ್ಯಕ್ಷರಾದ ಆದಿತ್ಯ ದಂಡಿ NSUI ಕಾರ್ಯಕರ್ತರಾದ ಹಾಲಿದ ಪೈಲವನ, ಸತೀಶ, ರಾಜಕುಮಾರ, ವಿಶಾಲ್, ಪ್ರಮೋದ, ಪವನ ಮತ್ತಿತರಿದ್ದರು.