. ಮಲ್ಲಿಕಾರ್ಜುನ ಖರ್ಗೆಯವರ ಗಮನ ಸೆಳೆದ ಬಾಲ ಬುದ್ಧನ ಪಾತ್ರಧಾರಿ ಆರೋಹಿ ಪಾಟೀಲ್

. ಮಲ್ಲಿಕಾರ್ಜುನ ಖರ್ಗೆಯವರ ಗಮನ ಸೆಳೆದ ಬಾಲ ಬುದ್ಧನ ಪಾತ್ರಧಾರಿ ಆರೋಹಿ ಪಾಟೀಲ್

ಡಾ. ಮಲ್ಲಿಕಾರ್ಜುನ ಖರ್ಗೆಯವರ ಗಮನ ಸೆಳೆದ ಬಾಲ ಬುದ್ಧನ ಪಾತ್ರಧಾರಿ ಆರೋಹಿ ಪಾಟೀಲ್

ಕಲಬುರಗಿ: ಹೊರವಲಯದ ಬುದ್ಧ ವಿಹಾರದ ಬಯಲು ರಂಗಮಂದಿರದಲ್ಲಿ 68ನೇ ಧಮ್ಮ ಚಕ್ರ ಪ್ರ‍್ತನಾದಿನದ ನಿಮಿತ್ತ ಶನಿವಾರ ವಿಶ್ವರಂಗ ತಂಡ ಪ್ರ‍್ಶಿಸಿದ ಧಮ್ಮಚಕ್ರ ನಾಟಕ ಪ್ರೇಕ್ಷಕರಿಗೆ ಬುದ್ಧ ಸಂದೇಶ ಸಾಗಿ ಬಂದ ಕಥೆ ಸಾರಿತು.

 ಪ್ರೊ.ಇಶ್ವರ ಇಂಗನ್ ಬರೆದ ನಾಟಕವೂ ಬುದ್ಧನ ಜನ್ಮ, ಜ್ಞಾನೋದಯದ ನಂತರ ಬುದ್ಧ ಯಾರಿಗೆ ಬೋಧನೆ ಮಾಡಬೇಕು ಎಂಬ ಪ್ರಶ್ನೆಯೂ ಮೂಡಿದಾಗ ಧಮ್ಮ ಪ್ರಸಾರಕ್ಕೆ ಕೈಗೊಂಡ ಹಂತಗಳ ಕುರಿತು ನಾಟಕ ಮನೋಜ್ಞವಾಗಿ ತಿಳಿಸಿತು.

ಬುದ್ಧ ಧಮ್ಮವೂ ವಿಶ್ವಾದ್ಯಂತ ಪಸರಿಸಿದ್ದನ್ನು ತಂಡವು ಅತ್ಯಂತ ಮನೋಜ್ಞವಾಗಿ ನಟಿಸುವ ಮೂಲಕ ಗಮನ ಸೆಳೆದರು. ಡಾ.ವಿಶ್ವರಾಜ ಪಾಟೀಲ್ .

ಈ ನಾಟಕದಲ್ಲಿ ವಿಶೇಷವಾಗಿ ಗಮಸ ಸೇಳೆದದ್ದು ಬಾಲ ಬುದ್ಧನ ಪಾತ್ರವನ್ನು ವಹಿಸಿದ ಕುಮಾರಿ ಆರೋಹಿ ಪಾಟೀಲ್ 7 ವರ್ಷದ ಚಿಕ್ಕ ವಯಸ್ಸಿನ ಈ ಮುದ್ದು ಹುಡುಗಿಯ ಮುಗ್ಧ ಅಭಿನಯಕ್ಕೆ ಎಲ್ಲರೂ ಮಂತ್ರಮುಗ್ಧರಾದರು.

ನಾಟಕದ ನಂತರ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಮಗುವಿಗೆ  ಕರೆದು ಮಾತನಾಡಿಸಿದರು. ರಾಹುಲ್ ಖರ್ಗೆ ಅವರು, ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಮನಿಯವರು, ಎಂ. ಬಿ ಪಾಟೀಲರು, ಹಾಗೂ ರಂಗಾಯಣದ ನೂತನ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಅವರ ಪ್ರೀತಿಯ ಹೊಗಳಿಕೆಗೆ ಭಾಜನಳಾದಳು. ಈ ಪುಟ್ಟ ನಟಿಯೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡರು. ಪುಟ್ಟ ಬಾಲಕಿಯನ್ನು ಪ್ರೀತಿಯಿಂದ ಮಾತನಾಡಿಸಿ ಅಭಿನಂಧನೆಗಳು ತಿಳಿಸಿ. ಶುಭಹಾರೈಸಿದರು.