ಶ್ರೀ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಕಮಲನಗರ :ಪಟ್ಟಣದ ಶ್ರೀ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರೊ ಎಸ್ ಎನ್ ಶಿವಣಕರ ವಿಶ್ರಾಂತ ಪ್ರಾಂಶುಪಾಲರು ಶ್ರೀ ಸಿದ್ದರಾಮೇಶ್ವರ ಪದವಿ ಮಹಾ ವಿದ್ಯಾಲಯ ಕಮಲನಗರ ಅವರು ಆದಿ ಕವಿ ಮಹರ್ಷಿ ವಾಲ್ಮೀಕಿಯ ಜೀವನ ಮತ್ತು ಆದರ್ಶಗಳ ಬಗೆ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾಕ್ಟರ್ ವಿಶ್ವನಾಥ ಕಿವಡೆ ಅವರು ಆದಿಕವಿ ಮಹರ್ಷಿ ವಾಲ್ಮೀಕಿಯ ಜೀವನ ಚರಿತ್ರೆ ಹಾಗೂ ಮಹರ್ಷಿ ವಾಲ್ಮೀಕಿ ಆದಿತ್ಯ ಕವಿಯಾದದ್ದು ಮನ ಪರಿವರ್ತನೆಯಾದ ಸಂದರ್ಭ ಮತ್ತು ರಾಮಾಯಣ ಕೃತಿಯ ಮಹತ್ವ ಮುಂತಾದವುಗಳ ಬಗೆಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಬೋಂಡೈ ಬಾಲಾಜಿ ಡಾಕ್ಟರ್ ಶಂಕರಪ್ಪ ಶ್ರೀಮತಿ ಸಾವಿತ್ರಿಬಾಯಿ ಗುಂಗೆ ಕಮಲಾಕರ್, ಆಕಾಶ ಶಿವನಿಕಾರಭಾರಿ ಶ್ರೀ ಜ್ಞಾನೇಶ್ವರ ಶಿವಲೀಲಾ, ಬಬಿತಾ ಸಿದ್ದು ರಾಂಪುರೆ ಮುಂತಾದ ಶಾಲೆ ಸಿಬ್ಬಂದಿ ವರ್ಗದವರು ಹಾಜರಿದ್ದರು. ಪ್ರಾಂಶುಪಾಲರು ಸ್ವಾಗತಿಸಿದರು ಡಾಕ್ಟರ್ ರಮೇಶ್ ಚವ್ಹಾಣ ವಂದಿಸಿದ್ದರು ಶ್ರೀ ಅನಿಲ್ ಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು ಈ ಸಂದರ್ಭದಲ್ಲಿ ವಿದ್ಯಾರ್ಥಿ ಗೆ ವರ್ಗದವರು ಸಿಬ್ಬಂದಿಯವರು ಮುಂತಾದವರು ಉಪಸ್ಥಿತರಿದ್ದರು.