ನಶಿಸುತ್ತಿರುವ ಸಂಪ್ರದಾಯಗಳನ್ನು ಬೆಳಸುತ್ತಿರುವ ಅಬಲಾಶ್ರಮ
ನಶಿಸುತ್ತಿರುವ ಸಂಪ್ರದಾಯಗಳನ್ನು ಬೆಳಸುತ್ತಿರುವ ಅಬಲಾಶ್ರಮ
ಇತ್ತೀಚಿನ ಸಮಯದಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪ್ರತಿನಿಧಿಸುವ ಹಬ್ಬ ಹರಿದಿನಗಳ ಆಚರಣೆಯು ಕಡಿಮೆಯಾಗುತ್ತದೆ ಇಂತಹ ಸಮಯದಲ್ಲಿ 120 ವರ್ಷಗಳ ಇತಿಹಾಸವಿರುವ ಬೆಂಗಳೂರಿನ ಡಿವಿ.ಜಿ ರಸ್ತೆಯಲ್ಲಿರುವ ಅಬಲಾಶ್ರಮವು ತನ್ನ ಸಾಮಾಜಿಕ ಕಾರ್ಯಗಳಿಗೆ ಪ್ರಸಿದ್ಧವಿರುವಂತೆ ನಮ್ಮ ಸಂಸ್ಕೃತಿಯ ಸಂಪ್ರದಾಯದ ಆಚರಣೆಯನ್ನು ಉ:ಳಿಸುವ ಪ್ರಯತ್ನವನ್ನು ಮಾಡುವ ಕಾರ್ಯಗಳಲ್ಲಿ ಸಕ್ರಿಯವಾಗಿದೆ.
ಪ್ರಸ್ತುತ ಶರನ್ನವರಾತ್ರಿಯ ಪ್ರಯುಕ್ತ ಅಬಲಾಶ್ರಮದ ಆವರಣದಲ್ಲಿ" ವೆಂಕಟವರದ ಐಯ್ಯಾಂಗಾರ್ ಸಭಾಗೃಹ"ದಲ್ಲಿ ದಸರಾ ಗೊಂಬೆಯ ಪ್ರದರ್ಶನವನ್ನು ಏರ್ಪಡಿಸಿದೆ. ಹಲವು ವರ್ಷಗಳ ಕೆಳಗೆ ಒಬ್ಬ ಮಹಿಳೆಯು ದಸರಾ ಸಮಯದಲ್ಲಿ ಗೊಂಬೆ ಕೂಡಿಸುವ ಪ್ರಸ್ತಾಪವನ್ನು ಅಬಲಾಶ್ರಮದ ಕಾರ್ಯದರ್ಶಿಗಳ ಬಳಿ ತಂದಾಗ ಈ ಸಂಪ್ರದಾಯವನ್ನು ನಿಲ್ಲಿಸದೇ ಮುನ್ನಡೆಸಬೇಕೆಂದು ಅನುಮತಿಯನ್ನು ನೀಡಿದರು ಆದರೆ ದಸರಾ ಗೊಂಬೆಯನ್ನು ಕೂಡಿಸಿದ ಆ ಮಹಿಳೆ ಪುನಃ ಬಾರದೇ ಹೋದರು ಹಲವು ವರ್ಷಗಳಿಂದ ಅಬಲಾಶ್ರಮದಲ್ಲಿ ದಸರಾ ಗೊಂಬೆಯನ್ನು ಕೂಡಿಸಿ ಪೂಜೆ ಮಾಡಿ ಪ್ರದರ್ಶನವನ್ನು ಮಾಡುತ್ತಲಿದ್ದಾರೆ. 8 ಗೊಂಬೆಗಳಿಂದ ಆರಂಭವಾದ ಈ ಪ್ರದರ್ಶನವು ಪ್ರಸ್ತುತವಾಗಿ 1000 ಗೊಂಬೆಗಳನ್ನು ಒಳಗೊಂಡಿದೆ. ಈ ಬಾರಿ ಕೇವಲ ಅಬಲಾಶ್ರಮದ ಗೊಂಬೆಗಳು ಮಾತ್ರವಲ್ಲದೇ ಜೊತೆಗೆ ಶಿಲ್ಪ ಮಧುಸೂಧನ್ ರವರ ಕನ್ನಡ ಗಾದೆಗಳನ್ನು ಪ್ರದರ್ಶಿಸುವ ಗೊಂಬೆಗಳು, ಭಾರತಿ ವಿಶ್ವನಾಥರವರ ರಾಮಾಯಣ ಪ್ರದರ್ಶಿಸುವ ಗೊಂಬೆಗಳು ರಶ್ಮಿ ರಘುನಾಥ್‌ರವರ ಶ್ರೀಕೃಷ್ಣನ ಲೀಲೆ ವಸಂತಾ ಶೇಷಾದ್ರಿಯವರ ದಶಾವತಾರ ಮತ್ತು ಮದುವೆಯ ಶಾಸ್ತ್ರಗಳು ಸಂಗೀತಗಾರರ ಭಕ್ತಿಯ ಗೊಂಬೆಗಳು ಅಬಲಾಶ್ರಮದ ಶ್ರೀರಾಮಚಂದ್ರ ವೆಂಕಟ ರಮಣ , ಕೃಷ್ಣಾವತಾರ, ದಶಾವತಾರ, ವೆಂಕಟರಮಣ ಆಕರ್ಷಕ ಗೊಂಬೆಗಳ ಪ್ರದರ್ಶನವನ್ನು 3ನೇ ತಾರೀಖಿನಿಂದ 12ನೇ ತಾರೀಖಿನವರೆಗೂ ಮಾಡುತ್ತಲಿದ್ದಾರೆ. ಮೊದಲಿಗೆ ಸಭಾಂಗಣವನ್ನು ಪ್ರವೇಶಿಸಿದ ಕೂಡಲೇ ಸುಂದರವಾದ ಆಕಳು ಕರುವಿನ ವಿಗ್ರಹವು ನಮ್ಮನ್ನು ಸ್ವಾಗತಿಸುತ್ತದೆ. ಈ ಗೊಂಬೆ ಪ್ರದರ್ಶನಕ್ಕೆ ಯಾವುದೇ ಶುಲ್ಕವಿಲ್ಲ.
ಶಿಲ್ಪ ಮಧುಸೂಧನ್ ರವರ ಗಾದೆಗಳ ಗೊಂಬೆಯಲ್ಲಿ ಗಾದೆ ಗುರುತಿಸುವವರಿಗೆ ಸಿಹಿ ತಿನಿಸುಗಳನ್ನು ಬಹುಮಾನವಾಗಿ ಕೊಡುತ್ತಾರೆ. ಅಬಲಾಶ್ರಮದ ಉದ್ದೇಶ ನಶಿಸುತ್ತಿರುವ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ ಜನರಲ್ಲಿ ಗೊಂಬೆ ಹಬ್ಬದ ಮಹತ್ವವನ್ನು ತೋರಿಸುವುದು ಮತ್ತು ತಮ್ಮ ಮನೆಯಲ್ಲಿ ಸಾಕಷ್ಟು ಗೊಂಬೆಗಳಿದ್ದು ಅದನ್ನು ಪ್ರದರ್ಶಿಸಲು ಸ್ಥಳವಿಲ್ಲದಿರುವವರಿಗೆ ಸಹಾಯ ಮಾಡುವುದು ಜೊತೆಗೆ ನಶಿಸುತ್ತಿರುವ ಗೊಂಬೆಗಳ ನಿರ್ಮಾಣ ಮತ್ತು ಮಾರಾಟಕ್ಕೆ ಪ್ರೋತ್ಸಾಹ ಕೊಡುವುದಾಗಿದೆ.
ಮಾಧುರಿ ದೇಶಪಾಂಡೆ, ಬೆಂಗಳೂರು