ನಾಗಠಾಣಮಠ ಶ್ರೀಗಳ ಕಾರ್ಯ ಶ್ಲಾಘನೀಯ - ನಾಗನಗೌಡ ಸುಬೇದಾರ
ನಾಗಠಾಣಮಠ ಶ್ರೀಗಳ ಕಾರ್ಯ ಶ್ಲಾಘನೀಯ - ನಾಗನಗೌಡ ಸುಬೇದಾರ
ಶಹಾಪುರ : ಲೋಕ ಕಲ್ಯಾಣಕ್ಕಾಗಿ ಅತಿ ಚಿಕ್ಕ ವಯಸ್ಸಿನಲ್ಲಿ 21 ದಿನಗಳ ಮೌನ ಅನುಷ್ಠಾನ ಪೂರೈಸಿ ಸಾಧನೆ ಮಾಡಿದ ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳ ಕಾರ್ಯ ಶ್ಲಾಘನೀಯವಾದದ್ದು ಎಂದು ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ನಾಗನಗೌಡ ಸುಬೇದಾರ ಹೇಳಿದರು.
ತಾಲೂಕಿನ ಸಗರ ಗ್ರಾಮದ ಶಂಕರನಾರಾಯಣ ಕೆರೆಯ ಪಕ್ಕದಲ್ಲಿರುವ ಬೆಲ್ಲದ ಸಂಗಯ್ಯ ದೇವಸ್ಥಾನದ ಆವರಣದಲ್ಲಿ ಮೌನ ಅನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು,ಇಂಥಹ ಧಾರ್ಮಿಕ ಕಾರ್ಯಕ್ರಮಗಳಿಗೆ ಗ್ರಾಮದ ಭಕ್ತಾದಿಗಳ ಜೊತೆಗೆ ನಾವು ಯಾವಾಗಲೂ ನಿಮಗೆ ಸಹಕಾರ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ನುಡಿದರು.
ಒಂದು ತಿಂಗಳಗಳ ಕಾಲ ಮೌನ ಅನುಷ್ಠಾನ ಪೂರೈಸಿದ ಬಳಿಕ ಮೊಟ್ಟ ಮೊದಲ ಬಾರಿಗೆ ಆಶೀರ್ವಚನ ನೀಡಿ ಮಾತನಾಡಿದ ಸೋಮೇಶ್ವರ ಶಿವಾಚಾರ್ಯರು ಸತ್ಕಾರ್ಯಗಳಿಗೆ ಹಾಗೂ ಸಂಕಲ್ಪಗಳಿಗೆ ಏಕಾಗ್ರತೆಯಲ್ಲಿ ಮನುಷ್ಯನ ಮನಸ್ಸನ್ನು ತೊಡಗಿಸಿಕೊಳ್ಳುವಲ್ಲಿ ಮೌನ ವೃತ ಸಹಕಾರಿಯಾಗುತ್ತದೆ,ಮನುಷ್ಯನಾಗಿ
ಹುಟ್ಟಿದ ಬಳಿಕ ಒಂದಿಷ್ಟು ಒಳ್ಳೆಯ ಕಾರ್ಯಗಳು ಮಾಡುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಮಾರಂಭದ ವೇದಿಕೆಯ ಮೇಲೆ ಗುಂಡಕನಾಳ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಲಕ್ಷ್ಮಿಪುರದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು,ಇಟಗಿಯ ಚಂದ್ರಶೇಖರ ದೇವರು,ಸಿದ್ದರಾಮೇಶ್ವರ ಸ್ವಾಮೀಜಿಗಳು ಸೇರಿದಂತೆ ಗ್ರಾಮದ ಯುವ ಮುಖಂಡರಾದ ಆನಂದಗೌಡ ಸುಬೇದಾರ,ಲಿಂಗನಗೌಡ ಮಾಲೀಪಾಟೀಲ್,ಶಿವಕುಮಾರ ದೇಸಾಯಿ,ಪ್ರಕಾಶ್ ದೇಸಾಯಿ, ಸೇರಿದಂತೆ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.ಶಿವಶರಣಪ್ಪ ನಾಗಲೋಟ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಶಹಾಪುರ ಗ್ರಾಮೀಣ ಬಸವರಾಜ ಶಿನ್ನೂರ ವರದಿ
ಚಿತ್ರ ಬರಹ : ಶಹಪುರ ತಾಲೂಕಿನ ಸಗರ ಗ್ರಾಮದ ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯರ ಮೌನ ಅನುಷ್ಠಾನ ಮುಕ್ತಾಯ ಸಮಾರಂಭದ ಭಾವಚಿತ್ರ.