ನಾಗೇಶ ಸ್ವಾಮಿ ಮಸ್ಕಲ್ (ನಾಸಾ ಕವಿ)
ನಾಗೇಶ ಸ್ವಾಮಿ ಮಸ್ಕಲ್ (ನಾಸಾ ಕವಿ)
ನಾಗೇಶ ಸ್ವಾಮಿ.ಯವರು ಅತ್ಯಂತ ಸರಳ ಸಹೃದಯತೆ ಯುಳ್ಳ ಸ್ನೇಹಜೀವಿ ನಾಗೇಶ ಸ್ವಾಮಿಯವರು.ನಾಸಾ ಅವರ ಕಾವ್ಯನಾಮ ವಾಗಿದೆ .
ಮೂಲತಃ ಬೀದರ ಜಿಲ್ಲೆಯ ಔರಾದ ತಾಲೂಕಿನ ಮಸ್ಕಲ್ ಗ್ರಾಮದವರು. ಇವರದು ಕೃಷಿಮನೆತನ, ತಂದೆ ಮಹಾದಯ್ಯ, ತಾಯಿ ಪಾರ್ವತಿ ದಂಪತಿಗಳ ಮಗನಾಗಿ (15.7.1988) ಜನಸಿದರು.
ಅವರು ಪ್ರಾಥಮಿಕ ಶಿಕ್ಷಣ ಸ್ವ ಗ್ರಾಮದಲ್ಲಿ , ಹೈಸ್ಕೂಲ್ ಹಾಗು ಪಿ. ಯು.ಸಿ. ಶಿಕ್ಷಣ ಸಂತಪುರದಲ್ಲಿ , ಪದವಿಯನ್ನು ಅಮರೇಶ್ವರ ಪದವಿ ಮಹಾವಿದ್ಯಾಲಯ ಔರಾದನಲ್ಲಿ ,
ಎಂ. ಎ. ಪದವಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದನಲ್ಲಿ ಹಾಗು ಬಿ. ಎಡ್. ಪದವಿ ಬಸವೇಶ್ವರ ಬಿ.ವಿ.ಬಿ ಕಾಲೇಜನಲ್ಲಿ ಪೂರ್ಣಗೊಳಿಸಿದರು.
ನಾಗೇಶ ಸ್ವಾಮಿಯವರು ಕನ್ನಡ ಉಪನ್ಯಾಸಕರಾಗಿದ್ದು , ಬೀದರಿನ ವಿವಿಧ ಕಾಲೇಜನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಈ-7 ನ್ಯೂಸ್ ನಿರೂಪಕರಾಗಿ ಕೆಲಸ ಮಾಡಿದ್ದಾರೆ.ಇವರು ಪ್ರಸ್ತುತ ಬೀದರನಲ್ಲಿ ಸ್ಪರ್ಧಾ ಅಕಾಡೆಮಿ ತೆರೆದು ವಿದ್ಯಾರ್ಥಿಗಳಿಗೆ ವಸತಿ ಸಹಿತ ಹಾಗು ವಸತಿ ರಹಿತ ನವೋದಯ, ಸೈನಿಕ, ಕಿತ್ತೂರು ರಾಣಿ ಚೆನ್ನಮ್ಮ ಕೋಚಿಂಗ್ ಮತ್ತು ಶಿಕ್ಷಕರ ತರಬೇತಿಗಾಗಿ ಟಿ. ಈ. ಟಿ. ಸ್ಪರ್ಧಾತ್ಮಕ ತರಬೇತಿ ಕೊಡುವ ಮೂಲಕ ನಿರುದ್ಯೋಗ, ಯುವಕ ಹಾಗು ಯುವತಿಯರ ಭವಿಷ್ಯದ ರೂಪಿಸುತ್ತಿದ್ದಾರೆ.
ನಾಗೇಶ ಸ್ವಾಮಿ ಅವರು ಹಿರಿಯ ಸಾಹಿತಿಗಳ ಜೊತೆ ಒಡನಾಟವನ್ನು ಇಟ್ಟುಕೊಂಡು ಸಾಹಿತ್ಯ ಆಸಕ್ತರಾಗಿ ಸಂಜೀವಿನಿ,ಮನಮೆಚ್ಚಿದ ಹುಡುಗಿ,ನನ್ನೊಲುವ ಕವನ ಸಂಕಲನಗಳು ಹಾಗು ಕೃತಿಬಿಂಬ (ವಿಮರ್ಶೆ ಕೃತಿ),ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳ ಮಹತ್ವ (ಸಂಶೋಧನ ಕೃತಿ), ಬಣ್ಣವಿಲ್ಲದ ಅಣ್ಣ (ವ್ಯಕ್ತಿ ಚರಿತ್ರೆ ) ಕೃತಿಗಳು ಪ್ರಕಟಿಸಿ ಓದುಗರ ಕೈಗೆ ನೀಡಿದ್ದಾರೆ . ಇವರೇ ಅನೇಕ ಬರಹ, ವಿಮರ್ಶೆಗಳು ಪ್ರಜಾವಾಣಿ, ವಿಶ್ವ ವಾಣಿ, ಭಾರತ ವೈಭವ, ಸಂಯುಕ್ತ ಕರ್ನಾಟಕ ದಿನಪತ್ರಿಕೆ,ಮಾಸಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ.
ಇವರು ವಿವೇಕ್ ಗ್ಲೋಬಲ್ ಟ್ರಸ್ಟ್ ಅಧ್ಯಕ್ಷರಾಗಿ ,ಸಿರಿ ಗನ್ನಡ ವೇದಿಕೆ ಕಾರ್ಯದರ್ಶಿಗಳಾಗಿ,ಗುರುಕುಲ ಕಲಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷರಾಗಿ ,ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೀದರ ಜಿಲ್ಲಾ ಅಧ್ಯಕ್ಷರಾಗಿ, ನಾಡು ನುಡಿ ನೆಲ ಜಲ ಭಾಷೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪ್ರಯತ್ನಿಸುತ್ತಿದ್ದಾರೆ.
ಪ್ರಶಸ್ತಿಗಳು
1:-ಜನ ಸೇವಾ ರಾಜ್ಯ ಪ್ರಶಸ್ತಿ,
2:-ಕಾವ್ಯ ಚಂದ್ರಿಕೆ ಪ್ರಶಸ್ತಿ
3:-ಕನ್ನಡ ರತ್ನ ಪ್ರಶಸ್ತಿ
4:-ಗುರುಕುಲ ಕಲಾ ಕುಸುಮ ರಾಜ್ಯ ಪ್ರಶಸ್ತಿ
5:-ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ
6:-ಗುರುಕುಲ ಶಿರೋಮಣಿ ಪ್ರಶಸ್ತಿ ಹಾಗು ವಿವಿಧ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಗೌರವ ಸನ್ಮಾನಕ್ಕೆ ಪಾತ್ರರಾಗಿರುವರು.
-ಓಂಕಾರ ಪಾಟೀಲ