ಭಂಡಾರದ ಒಡೆಯ ಮಾರ್ತಾಂಡ ಭೈರವ ಶ್ರಿ ರಾವುತ್ ರಾಯನ ಜಾತ್ರೇ ನಾಳೆ ಆರಂಭ
ಭಂಡಾರದ ಒಡೆಯ ಮಾರ್ತಾಂಡ ಭೈರವ ಶ್ರಿ ರಾವುತ್ ರಾಯನ ಜಾತ್ರೇ ನಾಳೆ ಆರಂಭ
ದೇವಾನು ದೇವತೆಗಳ ನಾಡು ದೇವರ ಹಿಪ್ಪರಗಿಯ ಐತಿಹಾಸಿಕ ಶ್ರೀ ಮಾರ್ತಾಂಡ ಭೈರವ ಶ್ರಿ ರಾವುತರಾಯ ಮಲ್ಲಯ್ಯನ ಜಾತ್ರೆ ಮಹೋತ್ಸವ ನಾಳೆಯಿಂದ ಆರಂಭವಾಗಲಿದೆ. ಐದು ದಿನಗಳ ಕಾಲ ನಡೆಯುವ ಈ ಜಾತ್ರೆ ಕರ್ನಾಟಕ ರಾಜ್ಯದ ಜಾತ್ರೆಗಳಲ್ಲಿ ತನ್ನದೆಯಾದ ಐತಿಹಾಸಿಕ ಹಿನ್ನೆಲೆ ಹೊಂದಿದೆ.
ಐತಿಹಾಸಿಕ ಹಿನ್ನೆಲೆಯ ಜತೆಗೆ, ಪುರಾಣ, ಜನಪದರ ಕಥೆಗಳೊಂದಿಗೆ ಶ್ರೀ ರಾವುತರಾಯನ ಜಾತ್ರೆಯು ತಳುಕು ಹಾಕಿಕೊಂಡಿದೆ. ಹಿಂದಿನ ಸಂಪ್ರದಾಯದಂತೆ ಇಲ್ಲಿಯವರೆಗೂ ಯಾವುದೇ ಸಮಸ್ಯೆಗಳು ಬರದ ಹಾಗೆ ಪಟ್ಟಣದ ಹಿರಿಯರು ಆಚರಿಸಿಕೊಂಡು ಬಂದಿರುವ ಈ ಜಾತ್ರಾ ಮಹೋತ್ಸವ, ಆಧುನಿಕತೆಯ ಜೀವನದಲ್ಲೂ ಸಡಗರ ಸಂಭ್ರಮಕ್ಕೆ ಕೊರತೆಯಾಗಿಲ್ಲ. ಪದ್ಧತಿಗಳಿಗೂ ಚ್ಯುತಿ ಬಾರದಂತೆ ಶ್ರದ್ದೆಯಿಂದ ನಡೆಯುತ್ತಿದೆ. ಇನ್ನೋಂದು ವಿಶೇಷವೆಂದರೆ ಕರೋನಾ ಸಮಯದಲ್ಲಿ ದೇಶದಲ್ಲಿ ಎಲ್ಲಾ ಜಾತ್ರೆಗಳು ರದ್ದಾಗಿದ್ದವು ಆದರೆ ಶ್ರೀ ರಾವುತ್ ರಾಯ ಮಲ್ಲಯ್ಯನ ಜಾತ್ರೆಗೆ ಕರೋನಾದಲ್ಲಿಯು ಅದ್ದೂರಿಯಾಗಿ ಜರುಗಿ ಯಾರಿಗೂ ತೊಂದರೆಯಾಗಿಲ್ಲ ಇದು ಇತಿಹಾಸ ನಿರ್ಮಿಸಿದ್ದಂತೂ ಸತ್ಯ.
ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಲ್ಲಿ ನೆಲೆಸಿರುವ ರಾವುತರಾಯನ ಭಕ್ತ ಸಮೂಹ ಜಾತ್ರೆ ಸಮಯದಲ್ಲಿ ದೇವರಹಿಪ್ಪರಗಿಗೆ ಭೇಟಿ ನೀಡಿ, ದೈವೀ ಸ್ವರೂಪವಾಗಿರುವ ರಾವುತರಾಯ-ಮಲ್ಲಯ್ಯನ ದರ್ಶನ ಪಡೆದು ಧನ್ಯತಾಭಾವ ಹೊಂದುತ್ತಾರೆ. ಅಶ್ವಾರೂಢ ರಾವುತರಾಯನ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ನೆರವೇರಿಸಿ ಪುನೀತರಾಗುತ್ತಾರೆ.
ದಸರಾ ಬಳಿಕ ಬರುವ ದ್ವಾದಶಿಯ ದಿನ ತೆರೆದ ಬಂಡಿಯಲ್ಲಿ ರಾವುತರಾಯ ಅಶ್ವಾರೂಢನಾಗಿ ಆಸೀನನಾಗುವ ಮೂಲಕ ಜಾತ್ರೆ ಆರಂಭಗೊಳ್ಳುತ್ತದೆ. ಈ ಬಂಡಿಯ ಮೆರವಣಿಗೆ ಛತ್ರಿ ಚಾಮರಗಳೊಂದಿಗೆ ರಾವುತರಾಯನ ದೇಗುಲದಿಂದ ಮಲ್ಲಯ್ಯನ ದೇಗುಲದವರೆಗೆ ನಡೆಯುತ್ತದೆ. ಇಲ್ಲಿಂದ 'ಮಾನೆದೊಡ್ಡಿ' ಎಂದೇ ಜನಜನಿತವಾದ ಸ್ಥಳಕ್ಕೆ ಮೆರವಣಿಗೆ ತಲುಪುತ್ತದೆ.
ಮೆರವಣಿಗೆ ಮಾನೆದೊಡ್ಡಿ ತಲುಪುತ್ತಿದ್ದಂತೆ ಮನೆತನಗಳ ಸಂಪ್ರದಾಯದಂತೆ 500ಕ್ಕೂ ಹೆಚ್ಚು ಭಕ್ತರು ವಿಜಯಪೂರಕ್ಕೆ ಮಡಿಯಲ್ಲಿಯೆ ಪಾದಯಾತ್ರೆ ಮೂಲಕ ತೆರಳಿ ಮಡಿಯಲ್ಲಿಯೆ ಆಗಮಿಸಿ ಅಶ್ವಾರೂಢ ಶ್ರೀ
ರಾವುತರಾಯನ ಮೂರ್ತಿಗೆ ಹೂವು ಮುಡಿಸುತ್ತಾರೆ. ಹೂವು ಮುಡಿದ ರಾವುತ್ ರಾಯನ ಬಂಡ
ಬಳಿಕ ಶಿಡಿಗಟ್ಟೆ-ಪಾದಗಟ್ಟೆ ಎಂದೇ ಕರೆಯಲಾಗುವ ಪವಿತ್ರ
ಸ್ಥಳದಲ್ಲಿ ಮುಂದೆ ಆಗುವ ಭವಿಷ್ಯದ ಕಾರಣಿಕ ಹೇಳಿಕೆ ನಡೆಯುತ್ತದೆ. ಬಳಿಕ
ಸಿಂದಗಿ ರಸ್ತೆಯಲ್ಲಿರುವ ಬನ್ನಿ ವೃಕ್ಷಕ್ಕೆ ತೆರಳಿ ಪ್ರದಕ್ಷಿಣೆ
ಮಾಡಿ ಮಲ್ಲಯ್ಯನ ದೇವಸ್ಥಾನವನ್ನು ರಾವುತರಾಯ ಪ್ರವೇಶಿಸುತ್ತಾನೆ.ನಂತರ ಅಕ್ಟೋಬರ್ 17 ರಂದು ಶೀಗಿ ಹುಣ್ಣಿಮೆ ದಿನ ಸಾಯಂಕಾಲ 4 ರಿಂದ ಆರಂಭವಾಗುವ ಸಕ್ಕರೆ ಲೋಭಾನ ಕಾರ್ಯಕ್ರಮ ನಸುಕಿನ 3 ಘಂಟೆಯವರೆಗೆ ನಡೆಯುತ್ತದೆ ಅಂದು ಭಕ್ತರು ರಾವುತರಾಯ ಮಲ್ಲಯ್ಯನಿಗೆ ಸಕ್ಕರೆ ಲೋಭಾನ ನೀಡಿ ಪುನಿತರಾಗುತ್ತಾರೆ.ಅಕ್ಟೋಬರ 18 ರಂದು ಭವ್ಯ ಬಂಡಿಯ ಮೆರವಣಿಗೆಯೊಂದಿಗೆ ಏಳುಕೋಟಿ ಏಳುಕೋಟಿ ಉಘೆಯೋಂದಿಗೆ ಶ್ರೀ ಮಲ್ಲಯ್ಯನ ದೇವಸ್ಥಾನದಿಂದ ಭಂಡಾರದ ಮಳೆಯೊಂದಿಗೆ ಮೂಲ ಶ್ರೀ ರಾವುತ್ ರಾಯನ ದೇವಸ್ಥಾನಕ್ಕೆ ತಲುಪುವುದು ರೊಂದಿಗೆ ಜಾತ್ರೆ ಸಂಪನ್ನಗೊಳ್ಳುತ್ತದೆ.
ಲೇಖಕರು- ಶ್ರೀ ಈರನಗೌಡ ಕೆ ಪಾಟೀಲ್ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜು ಕಲಬುರ್ಗಿ