ಅ.೧೫.ರಂದು ಮಡಿವಾಳರ ಜನಜಾಗೃತಿ ಸಮಾವೇಶ

ಅ.೧೫.ರಂದು ಮಡಿವಾಳರ ಜನಜಾಗೃತಿ ಸಮಾವೇಶ

ಅ.೧೫.ರಂದು ಮಡಿವಾಳರ ಜನಜಾಗೃತಿ ಸಮಾವೇಶ

ಕಲಬುರಗಿ: ಜಿಲ್ಲಾ ಮಡಿವಾಳರ ಸಂಘದ ವತಿಯಿಂದ ಅ.೧೫.ರಂದು ನಗರದ ಡಾ.ಎಸ್.ಎಮ್. ಪಂಡಿತ್ ರಂಗಮಂದಿರದಲ್ಲಿ ಬೆಳಿಗ್ಗೆ ೧೧:೦೦ ಕ್ಕೆ ಜಿಲ್ಲಾ ಮಡಿವಾಳರ ಜನಜಾಗೃತಿ ಸಮಾವೇಶ ಹಾಗೂ ಸಂಘದ ರಾಜ್ಯಾಧ್ಯಕ್ಷರಾದ ಸಿ. ನಂಜಪ್ಪರವರ ಜನ್ಮದಿ ನಿಮಿತ್ತ ಆಯ್ಕೆ ಯಾದ ಫಲಾನುಭವಿಗಳಿಗೆ ಮಾತ್ರ ಐರನ್ ಬಾಕ್ಸ್, ಬೆಡ್ ಶೀಟ್, ಕುಕ್ಕರ್, ನೋಟ್ ಬುಕ್ಸ್ ಉಚಿತವಾಗಿ ವಿತರಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ವಿಠ್ಠಲ್ ಮಡಿವಾಳ ತಿಳಿಸಿದ್ದಾರೆ.

ಸೇಡಂನ್ ಪರಮಪೂಜ್ಯ ಶ್ರೀಶ್ರೀ ನಿವಾಸ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸುವರು, ಮುಖ್ಯ ಅತಿಥಿಗಳಾಗಿ ಸಂಸದ ಡಾ. ರಾಧಾಕೃಷ್ಣ ದೋಡಮನಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, (ರಾಜ್ಯ ಸಚಿವ ಶ್ರೇಣ ) ಹಾಗೂ ಮುಖ್ಯಮಂತ್ರಿಗಳ ಗೌರವ ವೈದ್ಯಕೀಯ ಸಲಹೆಗಾರ ಡಾ. ಹೆಚ್. ರವಿಕುಮಾರ್, ಶಾಸಕರಾದ ಅಲ್ಲಮ ಪ್ರಭು ಪಾಟೀಲ್, ಖನಿಜ್ ಫಾತಿಮ್ಮಾ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮೇಯರ್ ಯಲ್ಲಪ್ಪ ನಾಯಕೋಡಿ, ದಯಾನಂದ ಅಗಸರ್, ಗಂಗಮ್ಮ ಬಸವರಾಜ್ ಮುನಳ್ಳಿ, ಬಿ.ಆರ್.ಪ್ರಕಾಶ, ದಿಗಂಬರ್ ವೈಜನಾಥ್ ಮಡಿವಾಳ, ಶಿವಪುತ್ರ ಮಲ್ಲಾಬಾದಕರ್, ಅಶೋಕ ಮಡಿವಾಳ, ಮೌನಪ್ಪ ನಾಯ್ಕಲ್, ಮಲ್ಲಣ್ಣ ಮಡಿವಾಳ, ಎಂ.ಇ. ಮೋಷನ್ ಇವರು ಆಗಮಿಸುವರು.

ಫಲಾನುಭಾವಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಸದುಪಯೋಗ ಪಡೆದುಕೊಳಬೇಕು ಮತ್ತು ಕರ್ನಾಟಕ ರಾಜ್ಯ ಮಡಿವಾರರ ಸಂಘ (ರಿ) ಎಲ್ಲಾ ಪದಾಧಿಕಾರಿಗಳು ಕಲಬುರಗಿ ಜಿಲ್ಲಾ ಮಡಿವಾಳರ ಸಂಘ (ರಿ) ಎಲ್ಲಾ ತಾಲ್ಲೂಕು ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು, ಕಲಬುರಗಿ ಜಿಲ್ಲಾ ಮಡಿವಾಳರ ಜನ ಜಾಗೃತಿ ಸಮಾವೇಶಕೆ ಹೆಚ್ಚಿನ ಜನರು ಬಂದು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ವಿಠ್ಠಲ್ ಮಡಿವಾಳ ಅವರು ತಿಳಿಸಿದ್ದಾರೆ.