ಎಸಸಿಪಿ/ಟಿಎಸಪಿ ಯೋಜನೆ ದುರುಪಯೋಗ : ಪರಿಶಿಷ್ಟರಿಗೆ ಅನ್ಯಾಯ
ಎಸಸಿಪಿ/ಟಿಎಸಪಿ ಯೋಜನೆ ದುರುಪಯೋಗ : ಪರಿಶಿಷ್ಟರಿಗೆ ಅನ್ಯಾಯ
ಶಹಾಬಾದ : - ಎಸ್ಸಿ ಎಸ್ಟಿ ಗಳಿಗೆ ಮೀಸಲಾದ ಎಸಸಿಪಿ/ಟಿಎಸಪಿ ಯೋಜನೆ ಸಾಮಾನ್ಯರಿಗಾಗಿ ಬಳಕೆ ಮಾಡಲಾಗುತ್ತಿದೆ ಎಂದು ಕದಸಂಸ (ಎನ. ಮೂರ್ತಿ ಬಣ) ಅಧ್ಯಕ್ಷ ಜಗದೀಶ ಹುಲಿ ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ನಗರ ಸಭೆಯ ವತಿಯಿಂದ ಎಸಸಿಪಿ/ಟಿಎಸಪಿ ಯೋಜನೆಯಲ್ಲಿ ಪ. ಜಾ/ಪ.ಪಂ ದ ಜನರಿಗಾಗಿ ಮೀಸಲಾದ ಈ ಯೋಜನೆ ನಗರ ಸಭೆ ವತಿಯಿಂದ ಎಲ್ಇಡಿ ಲೈಟ್ ಗಳನ್ನು ಅಳವಡಿಸಲಾಗುತ್ತಿದೆ.
ನಗರದ ವಾರ್ಡ ಸಂಖ್ಯೆ 27 ರ ನಗರ ಸಭೆಯ ಸದಸ್ಯ ರೊಬ್ಬರು ಸೆಕ್ಯುಲರ್ ಪಾರ್ಟಿ ಯಿಂದ ಗೆದ್ದಿದ್ದಾರೆ ಆದರೆ ನೀತಿ ಮಾತ್ರ ಧರ್ಮ ಹಾಗೂ ಜಾತಿ ತಾರತಮ್ಯ ದಿಂದ ಕೂಡಿದೆ, ಎಸ್ಸಿ, ಎಸ್ಟಿ ಬಡಾವಣೆ ಗಳಲ್ಲಿ ಹಾಕಬೇಕಾದ ಎಲ್ಇಡಿ ಲೈಟ್ ಗಳು ಸಾಮಾನ್ಯ ವರ್ಗದ ಜನರ ಮನೆಗಳ ಹತ್ತಿರ ಹಾಕಿದ್ದಾರೆ, ಇದನ್ನ ಕೇಳಿದರೆ ನನಗೆ ಬೇಕಾದಲ್ಲಿ ಹಾಕುತ್ತೇನೆ ನೀವು ಯಾರು ಕೇಳುವರು ಎಂದು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ.
ನಗರ ಸಭೆಯಿಂದ 27 ವಾರ್ಡ ಗೆ ಎಸ್ಸಿ, ಎಸ್ಟಿ ಜನರಿಗಾಗಿ ಎಸಸಿಪಿ/ಟಿಎಸಪಿ ಯೋಜನೆಯಿಂದ 8-10 ಎಲ್ಇಡಿ ಲೈಟ್ ಗಳು ನೀಡಲಾಗಿದೆ ಆದರೆ 4-5 ಲೈಟ್ ಕಾಣಿಸುತ್ತಿವೆ, ಅದರಲ್ಲಿ ಈಗಾಗಲೇ ಕೆಲವು ಕೆಟ್ಟು ಹೋಗಿ ಕತ್ತಲು ಆವರಿಸಿದೆ, ಪ. ಜಾ ಮತ್ತು ಪ. ಪಂ ದ ಜನರು ವಾಸಿಸುವ ಬಡಾವಣೆಗೆ ಒಂದು ಎಲ್ಇಡಿ ಲೈಟ್ ಹಾಕದೆ ಬಹಿರಂಗವಾಗಿ ಜಾತಿ ತಾರತಮ್ಯದ ನೀತಿ ಅನುಸರಿಸಿದ್ದಾರೆ.
ಯೋಜನೆ ಜಾರಿ ಮಾಡಿ ಹಾಗೂ ಹಣ ಬಿಡುಗಡೆ ಮಾಡಿದರೆ ಸಾಲದು ಅಧಿಕಾರಿಗಳು ಎ.ಸಿ ರೂಂ ನಿಂದ ಹೊರ ಬಂದು ಯೋಜನೆ ಎಲ್ಲಿ, ಎಲ್ಲಿ ಬಳಕೆ ಮಾಡಲಾಗಿದೆ ಎಂದು ವೀಕ್ಷಣೆ ಮಾಡಿದಾಗ ಮಾತ್ರ ಯೋಜನೆ ಸಾಮಾನ್ಯ ಜನರಿಗೆ ತಲುಪುತ್ತದೆ.
ಆದ್ದರಿಂದ ಪರಿಶಿಷ್ಟರ ಬಡಾವಣೆಯಲ್ಲಿ ಎಲ್ಇಡಿ ಲೈಟ್ ಗಳು ಹಾಕಿಸಬೇಕು ಇಲ್ಲವಾದರೆ ಪರಿಶಿಷ್ಟರ ಕಾಯ್ದೆ ಅನುಗುಣವಾಗಿ ಇವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಒಂದು ವೇಳೆ ಅಧಿಕಾರಿಗಳು ಗಮನ ಹರಿಸದೆ ಹೋದರೆ ಮುಂದಿನ ದಿನಗಳಲ್ಲಿ ನಗರ ಸಭೆ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ. ಮೂರ್ತಿ ಬಣ) ದ ಅಧ್ಯಕ್ಷ ಜಗದೀಶ ಹುಲಿ, ಪ್ರಧಾನ ಕಾರ್ಯದರ್ಶಿ ದಯಾನಂದ ಸಾಗರ, ಖಜಾಂಚಿ ಶೈಲೇಂದ್ರ ಕುಸಾಳೆ ರವರು ಪೌರಾಯುಕ್ತರಿಗೆ ಬರೆದ ದೂರಿನ ಪತ್ರದಲ್ಲಿ ತಿಳಿಸಿದ್ದಾರೆ.
ಶಹಾಬಾದ ವರದಿ:- ನಾಗರಾಜ್ ದಂಡಾವತಿ