ಕಿರುಚಿತ್ರೋತ್ಸವದಲ್ಲಿ ಮಿಂಚಿದ ‘ನೀರೆಲ್ಲವೂ ತೀರ್ಥ’

ಕಿರುಚಿತ್ರೋತ್ಸವದಲ್ಲಿ ಮಿಂಚಿದ ‘ನೀರೆಲ್ಲವೂ ತೀರ್ಥ’

 ಕಿರುಚಿತ್ರೋತ್ಸವದಲ್ಲಿ ಮಿಂಚಿದ ‘ನೀರೆಲ್ಲವೂ ತೀರ್ಥ’

ಡಾ. ಲೀಲಾಬಸವರಾಜು ಹಾಗೂ ಶ್ರೀಶಿವ ಅವರು ಮುಖ್ಯ ಭೂಮಿಕೆಯಲ್ಲಿದ್ದು ನಟಿಸಿರುವ ಕಿರುಚಿತ್ರ' ನೀರೆಲ್ಲವೂ ತೀರ್ಥ'

ವಿಜಯಕರ್ನಾಟಕ ಪತ್ರಿಕೆ ಆಯೋಜಿಸಿದ್ದ ಕಿರುಚಿತ್ರೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದು ಗಮನಸೆಳೆದಿದೆ. ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚೆನ್ನಿಂಗಹಳ್ಳಿ ಪ್ರಶಸ್ತಿ ನೀಡಿ ಗೌರವಿಸಿದರು. ಲೀಲಾ ರವರ ಪತಿ ಹಿರಿಯರಂಗಭೂಮಿ ಕಲಾವಿದ ಎಂ.ಬಸವರಾಜು ಉಪಸ್ಥಿತರಿದ್ದರು.

ಈ ಚಿತ್ರದ ಮೂಲಕ ಎಂಭತ್ತನೇ ವಯಸ್ಸಿನ ಗಡಿಗೆ ಅಡಿಯಿಡುತ್ತಿರುವ ಡಾ. ಲೀಲಾಬಸವರಾಜು ತಮ್ಮ ಸಹಜ, ಹೃದಯಸ್ಪರ್ಶಿ ಅಭಿನಯಕ್ಕೆ “ಅತ್ಯುತ್ತಮ ನಟಿ” ಪ್ರಶಸ್ತಿಯನ್ನು ಪಡೆದು ಮತ್ತೊಮ್ಮೆ ತಮ್ಮ ಅಭಿನಯ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ.

‘ಇದು ಆಕಸ್ಮಿಕವಾದರೂ ಆನಂದ ಅಪಾರ’

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ. ಲೀಲಾಬಸವರಾಜು,

“ಈ ಪ್ರಶಸ್ತಿ ಆಕಸ್ಮಿಕವಾಗಿ ದೊರಕಿದರೂ ಅಪಾರ ಸಂತೋಷ ತಂದಿದೆ. ಇದು ನನ್ನ ಮೂವತ್ತೈದು ವರ್ಷಗಳ ಕಲಾಸಾಧನೆಯ ಫಲ” ಎಂದು ಭಾವುಕವಾಗಿ ಹೇಳಿದರು.

ಕಥೆಯ ಹೃದಯ – ಸಂಪ್ರದಾಯ ಮತ್ತು ಮಾನವೀಯತೆ

‘ನೀರೆಲ್ಲವೂ ತೀರ್ಥ’ ಕಿರುಚಿತ್ರದ ಕಥಾವಸ್ತು ಗಟ್ಟಿಯಾದ ಸಂಪ್ರದಾಯಸ್ಥ ಕುಟುಂಬದ ಹಿನ್ನೆಲೆಯನ್ನು ಹೊಂದಿದೆ.

ಹಿಂದಿನ ಕಾಲದ ಮಡಿ–ಮೈಲಿಗೆ ಪಾಲಿಸುವ ಮನೆ ಒಡತಿ, ತನ್ನ ಮಕ್ಕಳು ಜೀವನಕ್ಕಾಗಿ ಪರದೇಶದಲ್ಲಿ ನೆಲೆಸಬೇಕಾದ ಸಂದರ್ಭದಲ್ಲಿ, ಮನೆಯ ಆಳುಮಗನ ಮೇಲಿನ ಅವಿನಾಭಾವ ನಂಬಿಕೆ ಮತ್ತು ಮಮಕಾರವೇ ಕಥೆಯ ಕೇಂದ್ರಬಿಂದು.

“ಸಮಯಕ್ಕಾಗುವವನೇ ನೆಂಟ” ಎಂಬ ನುಡಿಯಂತೆ, ತನ್ನ ಎಲ್ಲ ಸಂಪ್ರದಾಯಗಳನ್ನು ಬದಿಗಿಟ್ಟು, ಆಳುಮಗನನ್ನು ತನ್ನ ಮಗನಂತೆ ಕಾಣುವ ತಾಯಿ, ಅವನನ್ನು ತೊಡೆಯ ಮೇಲೆ ಮಲಗಿಸಿಕೊಂಡು ತಲೆ ನೇವರಿಸಿ ಸ್ವಾಂತನ ನೀಡುವ ದೃಶ್ಯ ಸಮಾಜಕ್ಕೆ ಗಾಢವಾದ ಮಾನವೀಯ ಸಂದೇಶವನ್ನು ನೀಡುತ್ತದೆ.

ಅಭಿನಯದ ಅಮೋಘತೆಡಾ. ಲೀಲಾಬಸವರಾಜು ಹಾಗೂ ಶ್ರೀಶಿವ ಅವರ ಅಭಿನಯ ಚಿತ್ರಕ್ಕೆ ಜೀವ ತುಂಬಿದೆ.

ಭಾವ, ಸಂಯಮ ಮತ್ತು ನೈಜತೆಯ ಮಿಶ್ರಣವು ಪ್ರೇಕ್ಷಕರ ಮನಸ್ಸಿಗೆ ನೇರವಾಗಿ ತಲುಪುತ್ತದೆ.

ಇಬ್ಬರೂ ಕಲಾವಿದರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಅವಕಾಶಗಳು ದೊರಕಲಿ, ಅನೇಕ ಪ್ರಶಸ್ತಿಗಳು ಅವರ ಮುಡಿಗೇರಲಿ ಎಂದು ಹಾರೈಸೋಣ.