78ನೇ ಸ್ವಾತಂತ್ರ್ಯೋತ್ಸವ : ಕೆನರಾ ಬ್ಯಾಂಕ್ ನಿಂದ ವಿದ್ಯಾಜ್ಯೋತಿ ಚೆಕ್ ವಿತರಣೆ :..

78ನೇ ಸ್ವಾತಂತ್ರ್ಯೋತ್ಸವ : ಕೆನರಾ ಬ್ಯಾಂಕ್ ನಿಂದ ವಿದ್ಯಾಜ್ಯೋತಿ ಚೆಕ್ ವಿತರಣೆ :..

78ನೇ ಸ್ವಾತಂತ್ರ್ಯೋತ್ಸವ : ಕೆನರಾ ಬ್ಯಾಂಕ್ ನಿಂದ ವಿದ್ಯಾಜ್ಯೋತಿ ಚೆಕ್ ವಿತರಣೆ :.. 

ಶಹಾಬಾದ : -78ನೇ ಸ್ವಾತಂತ್ರ್ಯೋತ್ಸವದ ಶುಭ ಸಂಧರ್ಭದಲ್ಲಿ ದೇಶದ 26 ಕೇಂದ್ರಗಳಿಂದ 177 ರೀಜನಲ್ ಕಛೇರಿಗಳು ಮತ್ತು 7457 ಬ್ರ್ಯಾಂಚ್ ಗಳ ಕೆನರಾ ಬ್ಯಾಂಕ್ ನಿಂದ ಸರ್ಕಾರಿ/ಸರಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಪ್ರತಿಭಾನ್ವಿತ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿನಿಯರಿಗೆ ( 5 ರಿಂದ 7ನೇ ತರಗತಿ ಯವರಿಗೆ ರೂ. 3 ಸಾವಿರ ಮತ್ತು 8 ರಿಂದ 10 ನೇ ತರಗತಿಯವರಿಗೆ 5 ಸಾವಿರ ರೂ. ಗಳು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ 6 ವಿದ್ಯಾರ್ಥಿನಿಯರಿಗೆ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಲು ಡಾ. ಅಂಬೇಡ್ಕರ್ ಸ್ಕಾಲರ್ಶಿಪ್ ವಿದ್ಯಾ ಜ್ಯೋತಿ ವಿದ್ಯಾರ್ಥಿವೇತನವನ್ನು ವಿಸ್ತರಿಸಲಾಯಿತು. 

ಗುರುವಾರ ಇಲ್ಲಿನ ನಗರದ ಸರ್ಕಾರಿ ಕನ್ಯಾ ಪ್ರೌಢಶಾಲೆಯ 3 ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 3 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನದ ಚೆಕ್ ವಿತರಿಸಿದರು. 

ಕೆನರಾ ಬ್ಯಾಂಕ್‌ನ ಬ್ರ್ಯಾಂಚ್ ಮ್ಯಾನೇಜರ್ ಎಸ್. ಮುನಿಯ್ ಅವರು ಯೋಜನೆಯ ಚೆಕ್ ನೀಡಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಹಿನ್ನಡೆ ಆಗಬಾರದು ಎಂಬ ಕಾರಣಕ್ಕೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ, ಆರ್ಥಿಕ ಕಾರಣಗಳಿಗಾಗಿ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಕೊಕ್ಕೆ ಹಾಕಿದ ಸಂದರ್ಭಗಳಿವೆ, ಕುಟುಂಬದ ಬಡತನ ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಅಂತ್ಯಕ್ಕೆ ಕಾರಣವಾಗಬಾರದು ಎಂಬ ಉದ್ದೇಶದಿಂದ ವಿದ್ಯಾ ಜ್ಯೋತಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿ 6 ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು. 

ಹರ್ಷ ವ್ಯಕ್ತ : ಕೆನರಾ ಬ್ಯಾಂಕ್ ನಿಂದ ಡಾ. ಅಂಬೇಡ್ಕರ್ ಸ್ಕಾಲರ್ಶಿಪ್ ವಿದ್ಯಾಜ್ಯೋತಿ ವಿದ್ಯಾರ್ಥಿ ವೇತನದ ಚೆಕ್ ನ್ನ ಬ್ಯಾಂಕ್ ಮ್ಯಾನೇಜರ್ ಎಸ್. ಮುನಿಯ್ ರವರು ವಿತರಿಸುತ್ತಿರುವ ಈ ಸಂಧರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ, ಕನ್ಯಾ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶಶಿಕಾಂತ ನಡಗೇರಿ, ಪ್ರತಿಭಾ ಪ್ರಿಯದರ್ಶಿನಿ

ಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿ ಹಾಗೆ ಅಭಿನಂದನೆ ಸಲ್ಲಿಸಿದರು.