ದತ್ತಪ್ಪ ಸಾಗನೂರ ವರ್ಗಾವಣೆಗೆ ನಾಲವಾರಕರ್ ಒತ್ತಾಯ

ದತ್ತಪ್ಪ ಸಾಗನೂರ ವರ್ಗಾವಣೆಗೆ ನಾಲವಾರಕರ್ ಒತ್ತಾಯ

 ಮಂಜುನಾಥ ನಾಲವಾರಕರ್ 

ಕಲಬುರಗಿ: ಡಾ. ಎಸ್.ಎಂ. ಪಂಡಿತ್ ರಂಗಮಂದಿರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ್ ಅವರನ್ನು ಕೂಡಲೇ ವರ್ಗಾ ವಣೆಗೊಳಿಸಿ, ರಂಗಮಂದಿರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್ ನಾಲವಾರಕರ್ ಅವರು ಆಗ್ರಹಿಸಿದ್ದಾರೆ.

ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾ ತನಾಡಿದ ಅವರು, ರಂಗಮಂದಿರದಲ್ಲಿ ಇರುವ ಸೌಲಭ್ಯಗಳನ್ನೂ ಸಹ ಮುಂದುವರೆಸಿಕೊಂಡು ಹೋಗುವಲ್ಲಿ ವಿಫಲವಾಗಿದ್ದರಿಂದ ಕುಳಿತು ಕೊಳ್ಳುವ ಆಸನಗಳು ಮುರಿದಿವೆ. ಧ್ವನಿವರ್ಧಕ ವ್ಯವಸ್ಥೆ ಕೆಟ್ಟು ಹೋಗಿದೆ. ಹವಾ ನಿಯಂತ್ರಣ ಸೌಲಭ್ಯವೂ ಇಲ್ಲವಾಗಿದೆ. ಶೌಚಾಲಯಗಳೂ ಸಹ ಕಾರ್ಯನಿರ್ವಹಿಸುತ್ತಿಲ್ಲ. ಒಟ್ಟಾರೆ ಯಾಗಿ ರಂಗಮಂದಿರ ಹದಗೆಟ್ಟು ಹೋದರೂ ಸಹ ಅದರ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ದತ್ತಪ್ಪ ಸಾಗನೂ‌ರ್ ಅವರು ಪೂರ್ಣ ವಿಫಲವಾಗಿದ್ದಾರೆ ಎಂದು ದೂರಿದರು.

ಕಳೆದ 2009 ರ ಜನವರಿ 4 ರಂದು ಅಂದಿನ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್, ಅಂದಿನ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ್ ಕಾರಜೋಳ್ ಅವರು ನಗರದಲ್ಲಿ ಎಸ್.ಎಂ. ಪಂಡಿತ್ ರಂಗಮಂದಿ ರವನ್ನು ನಿರ್ಮಾಣಗೊಳಿಸಿದ್ದರು. 

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ರಂಗಮಂದಿರಕ್ಕಿಂತಲೂ ಅಧಿಕ 1000 ಆಸನಗಳುಳ್ಳ ಎಸ್.ಎಂ. ಪಂಡಿತ್ ರಂಗಮಂದಿರ ನಿರ್ಮಾಣ ಮಾಡಲಾಗಿದೆ. ಅಂತರ್ ರಾಷ್ಟ್ರೀಯ ಕಲಾವಿದರ ಹೆಸರನ್ನು ರಂಗಮಂದಿರಕ್ಕೆ ಇಡಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ರಂಗಮಂದಿರದಲ್ಲಿ ಬಾಡಿಗೆ ಒಂದು ತಾಸಿಗೆ 2000ರೂ.ಗಳಿದ್ದು, ನಗರದ ಎಸ್.ಎಂ. ಪಂಡಿತ್ ರಂಗ 'ಮಂದಿರಕ್ಕೆ 25000ರೂ.ಗಳ ಬಾಡಿಗೆ ತೆಗೆದುಕೊಳ್ಳುತ್ತಿದ್ದರು. ಇದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದಾಗ ಅಂದಿನ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವೆ ಶ್ರೀಮತಿ ಉಮಾಶ್ರೀ ಅವರು ಏಕರೂಪದ ಬಾಡಿಗೆಯನ್ನು ವಿಧಿಸಲು ಕ್ರಮಕೈಗೊಂಡರು ಎಂದು ಅವರು ತಿಳಿಸಿದರು. 

ಕಳದ 2019 ರಿಂದ ಇಲ್ಲಿಯ ವರಗೆ ಕನ್ನಡ ಮತ್ತು ಸಂಸ್ಕೃತಿ ಇಲಾ ಖೆಯ ಸಹಾಯಕ ನಿರ್ದೇ ಶಕರಾಗಿರುವ ದತ್ತಪ್ಪ ಸಾಗನೂ‌ರ್ ಅವರು ರಂಗಮಂದಿರ ನಿರ್ವಹಣೆ ಮಾಡುವಲ್ಲಿ ಮತ್ತು ಸಿಬಂದಿಗಳ ವೇತನ ಕೊಡುವಲ್ಲಿ ತಾರತಮ್ಯಮಾಡುತ್ತಿದ್ದಾರೆ. ಯಾವುದೇ ಕಲಾವಿದರೂ ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುಕೂಲತೆ ಮಾಡಿಕೊಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಅನೇಕ ಮಹಾಪುರುಷರ ಜಯಂತಿಗಳನ್ನು ಕೂಡ ಕಾಟಾಚಾರಕ್ಕಾಗಿ ಹಾಗೂ ಪ್ರಚಾರ ವಿಲ್ಲದೇ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಸದ್ಯದ ಪರಿಸ್ಥಿತಿ ನೋಡಿದರೆ ರಂಗ ಮಂದಿರದಲ್ಲಿ ಆಸನಗಳು, ಧ್ವನಿ ವರ್ಧಕ, ಹವಾ ನಿಯಂತ್ರಣ, ಶೌಚಾ ಲಯ ದುರಸ್ತಿ ಮಟ್ಟದಲ್ಲಿದ. ಕಟ್ಟಡವೂ ಸಹ ಬಿರುಕು ಬಿಟ್ಟಿದೆ. ಹೀಗಾಗಿ ನಿರ್ವಹಣೆ ಮಾಡುವಲ್ಲಿ ವಿಫಲ ವಾಗಿರುವ ದತ್ತಪ್ಪ ಸಾಗನೂರ್ ಅವರನ್ನು ಕೂಡಲೇ ವರ್ಗಾವಣೆ ಮಾಡಿ ಉತ್ತಮ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಡಾ. ಎಸ್.ಎಂ. ಪಂಡಿತ್ ರಂಗಮಂದಿರಕ್ಕೆ ಶಾಸಕರು, ರಾಜ್ಯ ವಿಧಾನ ಪರಿಷತ್ ಸದಸ್ಯರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು ಅನುದಾನ ನೀಡುವ ಮೂಲಕ ರಂಗಮಂದಿರಕ್ಕೆ ಸುಣ್ಣ, ಬಣ್ಣ ಮತ್ತು ದುರಸ್ತಿ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲಿಸಬೇಕು ಎಂದು ಅವರು ಕೋರಿದರು.

ಬೇಡಿಕೆಗಳನ್ನು ಪರಿಗಣಿಸದೇ ಹೋದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಮುಂದೆ ಕನ್ನಡಪರ ಸಂಘಟನೆಗಳು ಸೇರಿ ಭಜನೆ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.