ಮೂಡಾ ಹಗರಣದ ಚರ್ಚೆಯಲ್ಲಿ ಮೂಢರಾದ ಜನಪ್ರತಿನಿಧಿಗಳು.
ಮೂಡ ಹಗರಣದ ಚರ್ಚೆಯಲ್ಲಿ ಮೂಢರಾದ ಜನಪ್ರತಿನಿಧಿಗಳು.
ನಿಮ್ಮ ಹಗರಣ ನಮಗೆ ಗೊತ್ತು ಎಲ್ಲವನ್ನು ಬಿಚ್ಚಿಡುತ್ತೇವೆ ಎಂದು ಆಡಳಿತ ಪಕ್ಷದವರು ಹೇಳಿದರೆ, ವಿರೋಧ ಪಕ್ಷದವರು ಅದೇ ಹೇಳುತ್ತಿದ್ದಾರೆ. ಇದು ಅಧಿಕೃತವಾಗಿ ಎರಡೂ ಸದನಗಳಲ್ಲಿ ದಾಖಲೆಯಾಗಿದೆ. !
ಎಲ್ಲರ ಹಗರಣಗಳನ್ನು ಬಿಚ್ಚಿಡುವುದು. ಮಾತನಾಡಿದರೆ ನಿಜಕ್ಕೂ ರಾಜಕಾರಣಿಗಳ ಬಗ್ಗೆ ಆಕ್ರೋಶ ಉಕ್ಕಿ ಬರುತ್ತದೆ ಮತ್ತು ಅಸಹ್ಯವಾಗುತ್ತದೆ
ರಾಜ್ಯದ ಸಂಪನ್ಮೂಲಗಳನ್ನು ನಿಯಂತ್ರಿಸಿ, ಎಲ್ಲ ಪ್ರಜೆಗಳಿಗೂ ನ್ಯಾಯಯುತವಾಗಿ ಹಂಚಿ, ಜನರ ಜೀವನಮಟ್ಟ ಸುಧಾರಣೆಯಾಗಲಿ ಎಂದು ಜನರ ತೆರಿಗೆ ಖರ್ಚು ಮಾಡಿ 224 + 75 ( ವಿಧಾನ ಪರಿಷತ್ ) ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ್ದು .
ಸದನದಲ್ಲಿ ಪ್ರಜೆಗಳಿಗೆ ಒಳಿತಾಗಲು ಚರ್ಚೆ ಮಾಡಿ ಎಂದರೆ ಒಬ್ಬ ನೊಬ್ಬರು ಕಾಲು ಯಳಿಯುವ ಕೆಲಸ ಮಾಡಿ ಸಾರ್ವಜನಿಕರ ಮಾನ ಮರ್ಯಾದೆಯನ್ನೇ ಕಳೆಯುತ್ತಿದ್ದಾರೆ.
ಎರಡು ಪಕ್ಷದವರು ಹೊಂದಾಣಿಕೆ ಮಾಡಿಕೊಂಡು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂಬುದು ನಮ್ಮ ಅನಿಸಿಕೆ.
ಎಲ್ಲಾ ಅಧಿಕಾರಗಳನ್ನು ತಮ್ಮಲ್ಲೇ ಉಳಿಸಿಕೊಂಡು, ಬಿಚ್ಚಿಡುವ ಅಧಿಕಾರ, ಶಕ್ತಿ ಸಾಮರ್ಥ್ಯವಿದ್ದರೂ, ಸುಮ್ಮನೆ ಬಿಚ್ಚಿಡುತ್ತೇವೆ ಎನ್ನುವುದು ಪ್ರಜೆಗಳಿಗೆ ಮಾಡುವ ಅವಮಾನವಲ್ಲವೇ..?
ನಿಜವಾದ ಕಾವಲುಗಾರರು ಕಾರ್ಯಾಂಗದ ಅಧಿಕಾರಿಗಳು. ಇವರು ಎಲ್ಲವನ್ನು ಮುಚ್ಚಿಕೊಂಡಿದ್ದಾರೆಯೇ ಅದರಲ್ಲಿ ಅವರು ಪಾಲದಾರರೇ, ನಮಗೂ ಅನುಮಾನ ಕಾಡುತ್ತದೆ. ತೆರಿಗೆಯ ಹಣದಿಂದಲೇ , ಅವರು ಬದುಕು ಸಾಗಿಸುತ್ತಿದ್ದಾರೆ . ಅದನ್ನು ಕೇಳುವ ಹಕ್ಕು ನಮಗಿದೆ. ಬಿಚ್ಚಿಡುವುದಿದ್ದರೆ ಬಿಚ್ಚಿಡಿ ನಾಟಕಮಾಡೋದು ನಿಲ್ಲಿಸಿ.
ತಮ್ಮ ರಾಜಕೀಯ ಭವಿಷ್ಯ ಗೋಸ್ಕರ ಪಾದಯಾತ್ರೆ ಮಾಡಿದರೆ ಇಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಒಡೆತಕ್ಕೆ ಸಿಕ್ಕಿ ಅನೇಕರು ಜನರು ಪಡಬಾರದ ಕಷ್ಟ ಪಡುತ್ತಿದ್ದಾರೆ. ರೋಗರುಜಿನಗಳಿಂದ ಸಾಕಷ್ಟು ಜನ ನರಳುತ್ತಿದ್ದಾರೆ. ಬದುಕಿನಲ್ಲಿ ಎಷ್ಟೋ ಜನ ಪರಿಸ್ಥಿತಿ ಎದುರಿಸಲಾಗದೆ, ನಿರಾಶರಾಗಿ ನಿರಾಶ ಭಾವನೆ ಯ ಮಾತುಗಳನ್ನ ಆಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಏನಿದು ನಿಮ್ಮ ರಾಜಕೀಯ, ಸಾರ್ವಜನಿಕರು ಒಂದು ಸಣ್ಣ ತಪ್ಪು ಮಾಡಿದರೆ ದಂಡವಿಧಿಸುವಿರಿ,
ಶಿಕ್ಷಿಸುವಿರಿ. ಆದರೆ ನಿಮಗೆ ಮಾತ್ರ ವಿಶೇಷ ನಿಯಮಗಳು.ಎಲ್ಲ ನಿಯಮಗಳನ್ನು ಮೀರಿದವರೇ, ಹೇಳುವುದು ಮಾತ್ರ ಪ್ರಜೆಗಳೇ ಪ್ರಭುಗಳು ಎಂದು, ಆದರೆ ವಾಸ್ತವದಲ್ಲಿ ಜನಪ್ರತಿನಿಧಿಗಳೇ ಪ್ರಭುಗಳು. ಜನರೆಲ್ಲ ಗುಲಾಮರು, ಜೀತದಾಳುಗಳು...
ಇನ್ನಾದರೂ ಈ ದೇಶದ ಪ್ರಜೆಗಳು ಜಾಗ್ರತರಾಗಿ ,ತನ್ನ ಕುಟುಂಬವೇ ತನ್ನ ಸರ್ವಸ್ವ, ಅದರ ಯೋಗ ಕ್ಷೇಮವೇ ತನ್ನ ಜೀವನದ ಸಾರ್ಥಕತೆ ಎಂಬ ಸಂಕುಚಿತ ಮನೋಭಾವ ಬೆಳೆಸಿಕೊಂಡರೆ ಯಾವ ಸಮಾಜವು ತನ್ನ ಕುಟುಂಬವನ್ನು ನೆಮ್ಮದಿಯಿಂದ ಇರಿಸಲು ಸಾಧ್ಯವಿಲ್ಲ. ಏಕೆಂದರೆ . ಈಗಿನ ಸಮಾಜದ ಅನೇಕ ಸಮಸ್ಯೆಗಳನ್ನು ನೋಡಿದಾಗ ಇದು ನಿಜ ಎನಿಸುತ್ತದೆ. ಬಹಳಷ್ಟು ಜನರಿಗೆ ಸಾಮಾಜಿಕ ಕಳಕಳಿಯೂ ಇಲ್ಲ, ರಾಜಕೀಯ ಪ್ರಜ್ಞೆಯೂ ಇಲ್ಲ, ವೈಚಾರಿಕ ಮನೋಭಾವವೂ ಇಲ್ಲ, ಪ್ರಶ್ನಿಸುವ ಧೈರ್ಯವೂ ಇಲ್ಲ, ಅದರ ಲಾಭ ರಾಜಕಾರಣಿಗಳು ಮತ್ತು ಕೆಲವು ಅಧಿಕಾರಿಗಳು ಪಡೆಯುತ್ತಿದ್ದಾರೆ. ಇನ್ನಾದರೂ ಪ್ರಜೆಗಳು ಎಚ್ಚೆತ್ತುಕೊಳ್ಳಿ.