ಅತಿಶೀಘ್ರದಲ್ಲಿ ಕಲ್ಯಾಣ ಭಾಗಕ್ಕೆ 5500 ಶಿಕ್ಷಕರ ಭರ್ತಿ : ಸಚಿವ ಶರಣಪ್ರಕಾಶ ಪಾಟೀಲ್ ಭರವಸೆ

ಅತಿಶೀಘ್ರದಲ್ಲಿ ಕಲ್ಯಾಣ ಭಾಗಕ್ಕೆ 5500 ಶಿಕ್ಷಕರ ಭರ್ತಿ : ಸಚಿವ ಶರಣಪ್ರಕಾಶ ಪಾಟೀಲ್ ಭರವಸೆ

ಕಾಂಗ್ರೇಸ್ ಪಕ್ಷ ಆಡಳಿತಕ್ಕೆ ಬಂದಾಗಲೇಲ್ಲ ಕಟ್ಟ ಕಡೆಯ ವ್ಯಕ್ತಿಯ ಹೀತ ಕಾಯುವ ಕೆಲಸ ಮಾಡಿದೆ

ಸುದ್ದಿ : ಚಿಂಚೋಳಿ 

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಸಲು 5500 ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲರು ತಿಳಿಸಿದ್ದಾರೆ. 

ತಾಲೂಕಿನ ಗಣಾಪೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ 2024-25ನೇ ಸಾಲಿನ ಅಪೆಂಡಿಕ್ಸ್ – ಇ ಯೋಜನೆಯಡಿಯಲ್ಲಿ ಚಿಂಚೋಳಿ ತಾಲೂಕಿನ ಸೇಡಂ ಮತಕ್ಷೇತ್ರದ ರಾಜ್ಯ ಹೆದ್ದಾರಿ 122 ಮಹಾರಾಷ್ಟ್ರ ಗಡಿ ಭಾಗದಿಂದ ಸೇಡಂ ತಾಲೂಕಿನ ಹಂದರಕಿ ರಸ್ತೆಯ 157.20 ರಿಂದ 153.20 ಕಿ.ಮೀ ಸುಧಾರಣೆ ಕಾಮಗಾರಿ ಅಂದಾಝು ಮೊತ್ತ 800 ಲಕ್ಷ ರು ಗಳ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

ಸೇಡಂ ಮತಕ್ಷೇತ್ರಕ್ಕೆ ಒಳಪಡುವ ಚಿಂಚೋಳಿ ತಾಲೂಕಿನ 30 ಹಳ್ಳಿಗಳ ಅಭಿವೃದ್ಧಿಗೆ ಮನ್ನಣೆ ನೀಡಿ, ಚುರುಕು ಗೊಳಿಸಲಾಗಿದೆ. 

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕೆ.ಕೆ ಮಂಡಳಿಗೆ ಸರಕಾರ ನುಡಿದಂತೆ 5 ಸಾವಿರ ಕೋಟಿ ಹಣ ನೀಡಿದ್ದು, ಇದರ ಮೂಲಕ ಪ್ರತಿ ಗ್ರಾಮ ಮತ್ತು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳು ನೀಡಲಾಗುತ್ತಿದೆ. ಹಳ್ಳಿಗಳು ಅಭಿವೃದ್ಧಿಗಳಾದರೆ, ರಾಜ್ಯ ಅಭಿವೃದ್ಧಿಗೊಳಲಿದೆ ಎಂಬ ಕಾಂಗ್ರೇಸ್ ಪಕ್ಷದ ಸಿದ್ದಾಂತದೊಂದಿಗೆ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಮಂಡಿಳಿಯ ಹಣದಿಂದ ಶೇ.25 ರಷ್ಟು ಹಣ ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ ಮತ್ತು ಅತಿಶೀಘ್ರದಲ್ಲಿಯೇ 5500 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದರು. ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗಲೇಲ ಬಡವರ ಹೀತಕ್ಕಾಗಿ ಕೆಲಸ ಮಾಡಿದೆ. ಅದರಂತೆ ಚುನಾವಣೆ ಪ್ರಣಾಳಿಕೆಯಲ್ಲಿ ನುಡಿದಂತೆ ಪಂಚಗ್ಯಾರೆಂಟಿ ಯೋಜನೆಗಳು ಅನುಷ್ಠಾನಕ್ಕೆ ತಂದು 82 ಸಾವಿರ ಕೋಟಿ ರು ಅನುದಾನದ ಯೋಜನೆಗಳು ಬಡವರ ಮನೆಯ ಬಾಗಿಲಿಗೆ ತಲುಪಿಸುವ ಕೆಲಸ ಕಾಂಗ್ರೇಸ್ ಪಕ್ಷ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಮಾಡುತ್ತಿದೆ ಎಂದರು. ನಾಗೇಶ್ವರ ಮಾಲಿ ಪಾಟೀಲ, ಸಂತೋಷ ಗುತ್ತೇದಾರ ಅವರು ಮಾತನಾಡಿದರು. 

ಈ ಸಂದರ್ಭದಲ್ಲಿ ಗರಗಪಳ್ಳಿ ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಗುಂಡಪ್ಪ ಭಂಗಿ, ಬಾಬುಮೀಯ, ಸದಸ್ಯ ಕೆ.ಮಹೇಶ, ಲೋ.ಕಾರ್ಯನಿರ್ವಾಹಕ ಅಭಿಯಂತರ ಪ್ರಭು ಮಠಪತಿ, ಎಇಇ ಬಸವರಾಜ ಪಿ. ಬೈನೂರ, ಬಸವರಾಜ ಪಾಟೀಲ, ನರಸಿಂಹಲು ಕುಂಬಾರ, ಶಿವಶರಣರೆಡ್ಡಿ, ಮಹೇಶ ಪಾಟೀಲ, ಮಹ್ಮದ್ ಶಫಿ, ರಾಯಪ್ಪ ಪೂಜಾರಿ, ರೇವಣಸಿದ್ದಯ್ಯ ಸ್ವಾಮಿ ಸೇರಿದಂತೆ ಗ್ರಾಮದ ಹಿರಿಯರು, ಕಾರ್ಯಕರ್ತರು ಉಪಸ್ಥಿತರಿದರು.   

ಗಣಾಪೂರ ಗ್ರಾಮಸ್ಥರಿಂದ ಸಚಿವರಿಗೆ ಅದ್ಧೂರಿ ಸ್ವಾಗತ : 

ಅಡಿಗಲ್ಲು ಸಮಾರಂಭಕ್ಕೆ ಆಗಮಿಸಿದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲರಿಗೆ ತಾಲೂಕಿನ ಗಣಾಪೂರ ಗ್ರಾಮದ ಮಹಿಳೆಯರು ಆರುತಿ ಬೆಳಗಿಸಿ ಸ್ವಾಗತ ಕೋರಿದ್ದರು. ಕಾಂಗ್ರೇಸ್ ಕಾರ್ಯಕರ್ತರು ಬೃಹತ್ ಸೇಬು ಹಣ್ಣಿನ ಹಾರಕಿ ಅದ್ಧೂರಿಯಾಗಿ ಸ್ವಾಗತಿಸಿ, ಸಂಭ್ರಮಿಸಿದರು.