ಡಾ. ಪಂಚಾಕ್ಷರಿ ಹಿರೇಮಠ ಅವರ ನೆನಪು ಮಾತ್ರ

ಡಾ. ಪಂಚಾಕ್ಷರಿ ಹಿರೇಮಠ ಅವರ ನೆನಪು ಮಾತ್ರ
ಬಿಸರಳ್ಳಿಯ ಸ್ವಾತಂತ್ರ್ಯ ಹೋರಾಟಗಾರರು,ಧಾರವಾಡ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕರು, ವಿಶ್ವ ಕವಿಮುಕ್ತಕ ಕವಿ,ಅನುವಾದಕರಾದ ಡಾ.ಪಂಚಾಕ್ಷರಿ ಹಿರೇಮಠ ಅವರು ಇಂದು ಲಿಂಗೈಕ್ಯರಾಗಿರುವುದು ಕನ್ನಡ ಸಾಹಿತ್ಯ ಲೋಕದ ಕೊಂಡಿ ಕಳಚಿದಂತಾಗಿದೆ.
ನಾಳೆ ದಿನಾಂಕ: ೧೪-೦೩-೨೦೨೫ ರಂದು ಬಿಸರಳ್ಳಿಯಲ್ಲಿ ಅಂತ್ಯಕ್ರಿಯೆ ನಡೆದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಡಾ. ಪಂಚಾಕ್ಷರಿ ಹಿರೇಮಠ ಅವರ ಲಿಂಗೈಕ್ಯ ದಿಂದ ಕನ್ನಡ ಸಾಹಿತ್ಯ ಲೋಕವು ಮಹತ್ವದ ಕೊಂಡಿಯನ್ನು ಕಳೆದುಕೊಂಡಿದೆ. ೧೯೩೩ರ ಜನವರಿ ೬ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಹಳ್ಳಿಯಲ್ಲಿ ಜನಿಸಿದ ಅವರು, ತಮ್ಮ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು, ಕೊಪ್ಪಳದಲ್ಲಿ ನಿಜಾಮ ಶಾಹಿ ಆಳ್ವಿಕೆಯಲ್ಲಿ ನಡೆದ ದಬ್ಬಾಳಿಕೆಯನ್ನು ಎದುರಿಸಿದರು. ಸ್ವಾಮಿ ರಾಮಾನಂದ ತೀರ್ಥರ ನೇತೃತ್ವದಲ್ಲಿ ಹೈದರಾಬಾದ್ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿ, ಕೊಪ್ಪಳ ಕೋಟೆಯ ಮೇಲೆ ಧ್ವಜ ಹಾರಿಸುವ ಮೂಲಕ ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸಿದವರು.
ಅವರು ಧಾರವಾಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅಮೆರಿಕದ ಅರಿಜೋನಾ ಜಾಗತಿಕ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಪಡೆದ ಮೊದಲ ಕನ್ನಡಿಗ ಎಂಬ ಗೌರವ ಅವರಿಗೆ ಸಲ್ಲುತ್ತದೆ.
ಅನುವಾದ ಕ್ಷೇತ್ರದಲ್ಲಿಯೂ ಅವರು ಮಹತ್ವದ ಕೊಡುಗೆಗಳನ್ನು ನೀಡಿದ್ದು, ಜ್ಞಾನಪೀಠ ಪುರಸ್ಕೃತ ಖ್ವಾರತ್-ಉಲ್-ಐನ್ ಹೈದರ್ ಅವರ 'ಪಥ್ ಝಡ್ ಕೀ ಆವಾಜ್' ಕೃತಿಯನ್ನು 'ಹೇಮಂತ ಋತುವಿನ ಸ್ವರಗಳು' ಎಂದು ಅನುವಾದಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಅವರ ಅಂತ್ಯಕ್ರಿಯೆ ಮಾರ್ಚ್ ೧೪, ೨೦೨೫ರಂದು ಬಿಸರಹಳ್ಳಿಯಲ್ಲಿ ನಡೆಯಲಿದೆ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕವು ಅಪಾರ ನಷ್ಟವನ್ನು ಅನುಭವಿಸಿದೆ.
ಡಾ.ಗವಿಸಿದ್ದಪ್ಪಾ ಪಾಟೀಲ ಮತ್ತು ಡಾ.ಜಯದೇವಿ ಗಾಯಕವಾಡ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.