ಬೀದರ್‌ ಪೊಲೀಸರ ಕಾರ್ಯಾಚರಣೆ ಮೆತ್ತೆ 2 ಕೋಟಿ ರೂ.ಗಾಂಜಾ ವಶ

ಬೀದರ್‌ ಪೊಲೀಸರ ಕಾರ್ಯಾಚರಣೆ  ಮೆತ್ತೆ 2 ಕೋಟಿ  ರೂ.ಗಾಂಜಾ ವಶ

ಬೀದರ್‌ ಪೊಲೀಸರ ಕಾರ್ಯಾಚರಣೆ ಮೆತ್ತೆ 2 ಕೋಟಿ ರೂ.ಗಾಂಜಾ ವಶ

ಬೀದರ್ : ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಇರುವ ಉಜಳಾಂಬ ಗ್ರಾಮದ ಜಮೀನಿನಲ್ಲಿ ಅನಧಿಕೃತವಾಗಿ ಬೆಳೆದಿದ್ದ 2 ಕೋಟಿ ರೂ.ಗೂ ಅಧಿಕ ಮೌಲ್ಯದ ಗಾಂಜಾವನ್ನು ಬೀದರ್ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ ಎಂದು ಎಂದು ಪೊಲೀಸ ಮೂಲಗಳು ತಿಳಿಸಿವೆ.

ಅಕ್ರಮವಾಗಿ, ಜಮೀನೊಂದರಲ್ಲಿ 6 ಅಡಿಯ ಎತ್ತರದ ಸುಮಾರು 700ಕ್ಕೂ ಹೇಚ್ಚು ಗಿಡಗಳನ್ನು ಬೆಳೆದಿದ್ದಾರೆ.ಅದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ‌ ನಡೆಸಿದ್ದಾರೆ.

ಮಹಾರಾಷ್ಟ್ರ ಮೂಲದ ಬಸಂತ್ ಎಂಬಾತ ವ್ಯಕ್ತಿ ಗಾಂಜಾ ಬೆಳೆದಿದ್ದ ಎಂದು ತಿಳಿದು ಬಂದಿದೆ. ಆತನು ಓಡಿಹೋಗಿದ್ದಾನೆ, ಆತನ ಬಂಧನಕ್ಕಾಗಿ ಬೀದರ ಪೊಲೀಸರು ಬಲೆ ಬೀಸಿದ್ದಾರೆ.

ಗಾಂಜಾ ಗಿಡಗಳನ್ನು ಎಸ್ಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ನಾಶ ಪಡಿಸಲಾಗಿದೆ. ಈ ಸಂಬಂಧಿಸಿದ ಪ್ರಕರಣ ಮಂಠಾಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಇತ್ತೀಚೆಗೆ ದೇಶದೆಲ್ಲೆಡೆ ಮಾದಕ ವಸ್ತುಗಳ ವಿರುದ್ಧ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ತೀರಾ ಇತ್ತೀಚೆಗೆ ದೆಹಲಿಯಲ್ಲಿ 5,000 ಕೋಟಿ ರೂ. ಮೌಲ್ಯದ ಕೊಕೇನ್‌ ವಶಕ್ಕೆ ಪಡೆದು ಐವರನ್ನು ಬಂಧಿಸಿದ್ದರು. ಇನ್ನೂ ಕಲಬುರ್ಗಿಯಲ್ಲಿ ಕೂಡಾ ಕಾರ್ಯಚರಣೆ ನಡೆಸಿದ್ದಾರೆ.

ಈ ಹಿಂದೆ ಇದರ ಸುತ್ತಲಿನ ಪ್ರದೇಶದಲ್ಲಿ ಪೊಲೀಸ್ ದಾಳಿ ಮಾಡಿದಾಗ ಕಲಬುರಗಿಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಮಂತ ಇಲ್ಳಾಳ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.