ಸೀಗಿ ಹುಣ್ಣಿಮೆ ಪ್ರಯುಕ್ತ “ಸೇವಾಶ್ರೀ ಪ್ರಶಸ್ತಿ” ಪ್ರಧಾನ ಮತ್ತು ವಿಶೇಷ ಸತ್ಕಾರ ಸಮಾರಂಭ

ಸೀಗಿ ಹುಣ್ಣಿಮೆ ಪ್ರಯುಕ್ತ “ಸೇವಾಶ್ರೀ ಪ್ರಶಸ್ತಿ” ಪ್ರಧಾನ ಮತ್ತು ವಿಶೇಷ ಸತ್ಕಾರ ಸಮಾರಂಭ

ಸೀಗಿ ಹುಣ್ಣಿಮೆ ಪ್ರಯುಕ್ತ “ಸೇವಾಶ್ರೀ ಪ್ರಶಸ್ತಿ” ಪ್ರಧಾನ ಮತ್ತು ವಿಶೇಷ ಸತ್ಕಾರ ಸಮಾರಂಭ

ಕಾಳಗಿ ತಾಲೂಕ ಟೆಂಗಳಿ ಗ್ರಾಮದ ಅಂಭಾಭವಾನಿ ದೇವಸ್ಥಾನದಲ್ಲಿ ಅಕ್ಟೋಬರ್ ೭, ಮಂಗಳವಾರರಂದು ಸೀಗಿ ಹುಣ್ಣಿಮೆ ಪ್ರಯುಕ್ತ ಅಂಡಗಿ ಮನೆತನದ ವತಿಯಿಂದ ಅಂಬಾ ಭವಾನಿಗೆ ಉಡಿ ತುಂಬುವ ೪೮ನೇ ವಾರ್ಷಿಕೋತ್ಸವದ ಅಂಗವಾಗಿ “ಸೇವಾಶ್ರೀ ಪ್ರಶಸ್ತಿ” ಪ್ರಧಾನ ಹಾಗೂ ವಿಶೇಷ ಸತ್ಕಾರ ಸಮಾರಂಭ ಜರುಗಲಿದೆ.

ಈ ಸಂದರ್ಭದಲ್ಲಿ ನವರಾತ್ರಿಯ ೯ ದಿನಗಳ ಕಾಲ ನಿರಂತರವಾಗಿ ಭಜನೆ ಸಲ್ಲಿಸಿ ಧಾರ್ಮಿಕ ಸೇವೆ ಮಾಡಿದ ವಿವಿಧ ಭಜನಾ ಮಂಡಳಿ ಅಧ್ಯಕ್ಷರಿಗೆ “ಸೇವಾಶ್ರೀ ಪ್ರಶಸ್ತಿ” ಪ್ರದಾನವಾಗಲಿದೆ. ಪ್ರಶಸ್ತಿ ವಿತರಣೆಯನ್ನು ಶಾಂತೇಶ್ವರ ಮಠದ ಪೂಜ್ಯ ಶ್ರೀ ಡಾ. ಶಾಂತ ಸೋಮನಾಥ ಶಿವಾಚಾರ್ಯರು ನೆರವೇರಿಸಲಿದ್ದು, ಟೆಂಗಳಿ ಅಂಭಾಭವಾನಿ ದೇವಸ್ಥಾನದ ಅಧ್ಯಕ್ಷ ಧನಂಜಯ ಕುಲಕರ್ಣಿ, ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ವಿರೇಂದ್ರ ವಾಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ ಅಂಡಗಿ ಪ್ರತಿಷ್ಠಾನದ ಗೌರವಾಧ್ಯಕ್ಷ ಸಿದ್ರಾಮಪ್ಪ ಅಂಡಗಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ತಿಳಿಸಿದ್ದಾರೆ.

ವಿಶೇಷ ಸತ್ಕಾರ:

 ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕ ಗುಂಡಪ್ಪ ಪಟೇದ

 ಕೋರವಾರದ ಅಣವೀರಭದ್ರೇಶ್ವರ ಪುರಾಣ ಗ್ರಂಥದ ಪ್ರಕಟಣೆಗೆ ಕಾರಣೀಭೂತರಾದ ಪೂಜ್ಯ ಶ್ರೀ ಅಮರೇಶ ಧನಂಜಯ ಹಿರೇಮಠ

ಸೇವಾಶ್ರೀ ಪ್ರಶಸ್ತಿ ವಿಜೇತರು:

ನಾಗಣ್ಣ ಗರ್, ಚಂದ್ರಶೇಖರ ಬಸ್ತೆ, ಶ್ರೀಶೈಲ ತಮ್ಮನಗೌಡ, ಅನೀತಾ ಆರ್. ಮಠಪತಿ, ಕಾಶಮ್ಮ ಎ. ಜೋಗದ, ಸಿದ್ದಲಿಂಗ ಜಂಬಗಿ, ಸುಲಗಮ್ಮ ಕುಡಗುಂಟಿ, ಈರಣ್ಣ ಸಾಹುಕಾರ ಕೇಶ್ವಾರ, ಮಹಾದೇವ ಸ್ವಾಮಿ ಮಠಪತಿ.

ಭಜನಾ ಜಾಗರಣೆ ಕಾರ್ಯಕ್ರಮ:

ಟೆಂಗಳಿ ಗ್ರಾಮದ ಹಿರಿಯ ಭಜನಾ ಕಲಾವಿದರು ಮಡಿವಾಳಯ್ಯ ಸಾಲಿಮಠ, ವಿಶ್ವನಾಥ ಬಾಳದೆ, ಚಂದ್ರಶೇಖರ ಎಲೇರಿ, ಬೀರಣ್ಣ ಪೂಜಾರಿ, ನಾಗರಾಜ ಹೂಗಾರ, ಮಲ್ಲು ಹೊಸಹಳ್ಳಿ, ಸಿದ್ದು ಪಾಟೀಲ ಸಾಲಹಳ್ಳಿ, ಶರಣು ನೀಲಹಳ್ಳಿ, ಬಸವರಾಜ ಕಡ್ಲಿ, ಚಂದ್ರಶೇಖರ್ ಕಡ್ಲಿ, ಮನೋಹರ ಕಂಬಾರ, ಫಕೀರಯ್ಯ ಸ್ಥಾವರಮಠ ಹಾಗೂ ಸಂಗಡಿಗರಿಂದ ಭಜನಾ ಜಾಗರಣೆ ಕಾರ್ಯಕ್ರಮ ಜರುಗಲಿದೆ.