ಅನೈತಿಕ ತಾಣವಾಗುತ್ತಿರುವ ಕಲಬುರಗಿ ಉದ್ಯಾನ ವನ
ಅನೈತಿಕ ತಾಣವಾಗುತ್ತಿರುವ ಕಲಬುರಗಿ ಉದ್ಯಾನ ವನ
ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನ ವನ್ನು ಸಾರ್ವಜನಿಕವಾಗಿ ಮಿಸಲಾಗಿದ್ದು ಇದರಲ್ಲಿ ಜನಸಾಮಾನ್ಯರರು ವಾಯು ವಿಹಾರ ಯೋಗ ಧ್ಯಾನ ಮೊದಲಾದ ಚಟುವಟಿಕೆಗಳಿಗಾಗಿ ಜನ ದಿನ ನಿತ್ಯ ಇಲ್ಲಿಗೆ ಆಗಮಿಸುತ್ತಾರೆ.
ಆದರೆ ಇಲ್ಲಿ ಕೆಲವರು ಪ್ರೀತಿ ಪ್ರೇಮ ಪ್ರಣಯದ ಹೆಸರಿನಲ್ಲಿ ಉದ್ಯಾನವನಕ್ಕೆ ಆಗಮಿಸುತ್ತಿದ್ದು ಅಲ್ಲಲ್ಲಿ ಗೌಪ್ಯವಾಗಿ ಅನೈತಿಕ ಚಟುವಟಿಕೆಗಳು ಕೂಡ ನಡೆಯುತ್ತಿರುವುದು ಕಂಡು ಬರುತ್ತಿದೆ.
ಕಾಲೇಜಿಗೆಂದು ಮನೆಯಿಂದ ಬರುವ ಹುಡುಗ ಹುಡುಗಿಯರು ,ಕೆಲಸಕ್ಕೆಂದು ಬರುವ ಮಹಿಳೆಯರು ಇಲ್ಲಿ ತಮಗೆ ಬೇಕಾದ ಜೊತೆಗಾರರನ್ನು ಕರೆದುಕೊಂಡು ಅಪ್ಪಿಕೊಂಡು ಕುಳಿತು ಕೊಳ್ಳುತ್ತಿದ್ದಾರೆ. ಮತ್ತು
ಕಾಲೇಜಿನ ವಿದ್ಯಾರ್ಥಿಗಳು, ತೃತೀಯ ಲಿಂಗಿಗಳು ಇಲ್ಲಿಯ ಮಹಾನಗರ ಪಾಲಿಕೆ ಉದ್ಯಾನ ವನದಲ್ಲಿ ಜೊತೆಗಾರರೊಂದಿಗೆ ಸಾರ್ವಜನಿಕವಾಗಿ ಚುಂಬನ ಕೊಡುವುದು, ಒಬ್ಬರನ್ನೊಬ್ಬರು
ಸ್ಪೃಶ್ಯ ಮಾಡಿ ಕೊಡುವುದು, ಪ್ರೆಂಚ್ ಕಿಸ್ ಕೊಡುವುದು ಕಂಡು ಬರುತ್ತಿದೆ. ಅಷ್ಟೇಯಲ್ಲದೆ ರಾತ್ರಿ ಸಮಯದಲ್ಲಿ ಕತ್ತಲಾದ ಮೇಲೆ ಇಂತಹ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಕಂಡು ಬರುತ್ತಿವೆ.
ಈ ವಿಷಯವನ್ನು ಕಲಬುರಗಿ ನಗರದ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ನಗರ ಪೋಲಿಸರು ಗಂಭೀರವಾಗಿ ಪರಿಗಣಿಸಿ ಇಲ್ಲಿ ಅನೈತಿಕ ಘಟನೆಗಳು ನಡೆಯದಂತೆ ನೋಡಿ ಕೊಳ್ಳಬೇಕೆಂದು ಕಲಬುರಗಿ ನಗರದ ಸಾರ್ವಜನಿಕರು ಆಗ್ರಹಿಸಿದ್ದಾರೆ.