ಬುರ್ಖಾ ಹಾಕಿಕೊಂಡು ಕಳ್ಳತನ ಮಾಡಿದ್ದ ಮಹಿಳೆಯರ ಬಂದನ

ಬುರ್ಖಾ ಹಾಕಿಕೊಂಡು ಕಳ್ಳತನ ಮಾಡಿದ್ದ ಮಹಿಳೆಯರ ಬಂದನ

ಬುರ್ಖಾ ಹಾಕಿಕೊಂಡು ಕಳ್ಳತನ ಮಾಡಿದ್ದ ಮಹಿಳೆಯರ ಬಂದನ

ಕಲಬುರಗಿ: ಜಿಲ್ಲೆಯಲ್ಲಿ ಬುರ್ಖಾ ಹಾಕಿಕೊಂಡು ಮಹಿಳೆಯರ ಆಭರಣದ ಬ್ಯಾಗ್‌ನ್ನು ಕಳ್ಳತನ ಮಾಡುತ್ತಿದ್ದ ಕಳ್ಳಿಯರ ಗ್ಯಾಂಗ್ ಬ್ರಹ್ಮಪುರ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಕಲಬುರಗಿಯ ಬಾಪು ನಗರದಲ್ಲಿ ಏಕತಾ ಕೈಲಾಸ ಉಪಾಧ್ಯ, ಸರಿತಾ ಕಾಶಿನಾಥ ಪಾಟೀಲ್‌ ಮತ್ತು ಸ್ಲಂ ಬೋರ್ಡ್ ಏರಿಯಾದ ಕರುಣಾನಿಧಿ ಸಿದ್ದರಾಜು ಜೀನಕೇರಿ ಅವರನ್ನು ಬಂಧಿತ ಮಹಿಳಾ ಆರೋಪಿಗಳಾಗಿದ್ದಾರೆ. 

ನಗರದ ಮಾರ್ಕೆಟ್ ಜನಬೀಡ ಪ್ರದೇಶ ಸೇರಿ ಕೆಲವು ಕಡೆ ಬಸ್ ಹತ್ತುವಾಗ ಮಹಿಳೆಯರ ಕೈ ಚೀಲದ ಬ್ಯಾಗ್‌ನಿಂದ ಮೂವರನ್ನು ಒಳಗೊಂಡ ಕಳ್ಳಿಯರ ಗ್ಯಾಂಗ್ ಆಭರಣ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. 

 ಸೇಡಂ ತಾಲೂಕಿನ ನಿವಾಸಿ ನಾಗಮ್ಮ ಸೂರ್ಯಕಾಂತ ಹೊಸಪೇಟೆ ಅವರು ಅ.14 ರಂದು ಬಸ್ ಹತ್ತುವಾಗ ಕೈಚೀಲದಲ್ಲಿದ್ದ ಬಂಗಾರದ ಒಡವೆಗಳು ಕಳ್ಳತನ ಆಗಿರುವ ಕುರಿತು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಕಳ್ಳಿಯರನ್ನು ಬಂಧಿಸಿದ ಪೊಲೀಸ್ ತನಿಖಾ ತಂಡವು ಅವರ ಬಳಿಯಿಂದ 3.5 ಲಕ್ಷ ರೂ. ಮೌಲ್ಯದ 55 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿದುಬಂದಿದೆ.

ನಗರದ ಬ್ರಹ್ಮಪುರ ಪಿ.ಐ ಸೋಮಶೇಖರ ಕಿರದಳ್ಳಿ ಮತ್ತು ಪಿಎಸ್‌ಐ ಯಶೋಧಾ ಕಟಕೆ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ ಎಂದು ವರದಿಯಾಗಿದೆ.