ಪಿಂಚಣಿ ವಂಚಿತ ನೌಕರರ ಹೋರಾಟಕ್ಕೆ ಹೈ ಕ ಶಿಕ್ಷಣ ಸಂಸ್ಥೆಯ ಪಿಂಚಣಿ ವಂಚಿತ ನೌಕರರ ಬೆಂಬಲ ಬೆಳಗಾವಿಯ ಹೋರಾಟದಲ್ಲಿ ಭಾಗಿ
ಪಿಂಚಣಿ ವಂಚಿತ ನೌಕರರ ಹೋರಾಟಕ್ಕೆ ಹೈ ಕ ಶಿಕ್ಷಣ ಸಂಸ್ಥೆಯ ಪಿಂಚಣಿ ವಂಚಿತ ನೌಕರರ ಬೆಂಬಲ ಬೆಳಗಾವಿಯ ಹೋರಾಟದಲ್ಲಿ ಭಾಗಿ
ಕಲಬುರ್ಗಿ:ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ರಿ. ಬೆಂಗಳೂರು ಇವರ ನೇತೃತ್ವದಲ್ಲಿ ನಡೆಯುತ್ತಿರುವ ಅನುದಾನ ರಹಿತ ಸೇವೆಯ ಪರಿಗಣನೆ (2006ರ ಪೂರ್ವ ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟವರಿಗಾಗಿ), ಪ್ರಣಾಳಿಕೆಯಲ್ಲಿ ಗೋಷಿಸಿರುವಂತೆ OPS ಜಾರಿಗೊಳಿಸಲು, ಆರೋಗ್ಯ ಸಂಜೀವಿನಿ, ಖಾಲಿ ಹುದ್ದೆ ಭರ್ತಿ, ಮಾನ್ಯತೆ ನವೀಕರಣ ಸಮಸ್ಯೆ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ. “ಬೆಳಗಾವಿ ಚಲೋ” ದಿನಾಂಕ 17-12-2025 ಸ್ಥಳ: “ಸುವರ್ಣ ಸೌಧ” ಗಾರ್ಡನ್ ಟೆಂಟ್ ನಂ-08, ಬೆಳಗಾವಿಯಲ್ಲಿ ನಡೆಯುವ ಹೋರಾಟಕ್ಕೆ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಂಚಣಿ ವಂಚಿತ ನೌಕರರ ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ.
ಈಗಾಗಲೇ ಬೆಳಗಾವಿಗೆ ಸಂಸ್ಥೆಯ ಪಿಂಚಣಿ ವಂಚಿತ ನೌಕರರ ಸಂಘದ ಡಾ ಮಹೇಶ್ ಗಂವ್ಹಾರ, ಡಾ ಪ್ರೇಮಚಂದ ಚವ್ಹಾಣ, ಐ ಕೆ ಪಾಟೀಲ್ ಹಾಗೂ ರಾಯಚೂರಿನ ಡಾ ಕೃಷ್ಣಾ ನಾಯಕ ಹೋರಾಟದಲ್ಲಿ ಭಾಗವಹಿಲು ಇಂದು ತೆರಳಿದ್ದಾರೆ
ಬೆಳಗಾವಿಯಲ್ಲಿ ನಡೆಯುವ ಹೋರಾಟದಲ್ಲಿ
ಎಲ್ಲಾ ಪದಾಧಿಕಾರಿಗಳು ಹಾಗೂ ಪಿಂಚಣಿ ವಂಚಿತ ನೌಕರರು ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸೋಣ ಎಂದು ಐ ಕೆ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
