ವಾಡಿಯಲ್ಲಿ ಮತ್ತೆ ಕುಡಿಯುವ ನೀರು ರಾಡಿ.
ವಾಡಿಯಲ್ಲಿ ಮತ್ತೆ ಕುಡಿಯುವ ನೀರು ರಾಡಿ.
ಪಟ್ಟಣದಲ್ಲಿ ಪೂರೈಕೆಯಾಗುತ್ತಿರು ರಾಡಿ ನೀರು ಸಾರ್ವಜನಿಕರು ಅನಿವಾರ್ಯವಾಗಿ ಬಳಸುವ ಪರಿಸ್ಥಿತಿ ಮುಂದುವರೆದಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿ,ಸಾರ್ವಜನಿಕ ಹಿತಾಸಕ್ತಿಗಾಗಿಯಾದರೂ
ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಮತ್ತೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಪತ್ರ ಬರೆದಿದ್ದಾರೆ.
ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ನೀರು ಶುದ್ಧೀಕರಣ ಘಟಕ ನಿರ್ಮಾಣವಾದರೂ ಸಹ ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಶುದ್ದಿಕರಣ ಗೊಳ್ಳುತ್ತಿಲ್ಲ.
ಕ್ರಮಕ್ಕಾಗಿ ಜಿಲ್ಲಾಧಿಕಾರಿ ಗಳಿಗೆ ಸಾಕಷ್ಟು ಸಲ ಮನವಿ ಮಾಡಿದರು ಪ್ರಯೋಜನ ವಾಗುತ್ತಿಲ್ಲ, ಎಂದು ಪುರಸಭೆ ಎದುರು ಧರಣಿ ಕುಳಿತು ಮಾನ್ಯ ತಹಶಿಲ್ದಾರರಿಗೂ ಕುಡಿಯುವ ರಾಡಿ ನೀರಿನ ಗೋಳನ್ನು ತೊಡಗಿಕೊಂಡರು ಪರಿಹಾರ ಸಿಕ್ಕಿಲ್ಲ.
ಇಲ್ಲಿನ ಅನೇಕ ಬಡ ಕುಟುಂಬಗಳು ತಮ್ಮ ದಿನಗೂಲಿಯ ದುಡಿಮೆಯ ದುಡ್ಡನ್ನು ಆಸ್ಪತ್ರೆಗೆ ಹಾಕಿ ಪರದಾಡುತ್ತಿದ್ದಾರೆ.
ಈ ಮಳೆಗಾಲ ಸಂಧರ್ಭದಲ್ಲಿಅಶುದ್ಧ ನೀರು ಕುಡಿಯುವುದರಿಂದ ಅನೇಕ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಸಾರ್ವಜನಿಕರಿಗೆ ಶುದ್ಧ ನೀರನ್ನು ತಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ.
ಇದೇ ರೀತಿ ಸುಮಾರು ವರ್ಷಗಳಿಂದ ಜಿಲ್ಲಾಧಿಕಾರಿ ಗಳಿಗೆ ಮತ್ತು ಇಲ್ಲಿನ ಮುಖ್ಯಾಧಿಕಾರಿ ಗಳಿಗೆ ಬರೀ ಮನವಿ ಸಲ್ಲಿಸುವುದೇ ಆಗಿದೆ.
ಈಗಲಾದರೂ ಇದನ್ನು ಪರಿಹರಿಸಿ,ಇಲ್ಲದೆ ಹೋದರೆ ಕೆಲವೇ ದಿನಗಳಲ್ಲಿ ಪುರಸಭೆ ಎದುರು ಸಾರ್ವಜನಿಕರು ಹಾಗೂ ನಮ್ಮ ಪಕ್ಷದ ಮುಖಂಡರೊಂದಿಗೆ ಶುದ್ಧ ನೀರಿಗಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.