ಶಹಾಬಾದ: ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ
ಶಹಾಬಾದ: ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ
ನಾಗರಾಜ್ ದಂಡಾವತಿ ವರದಿ ಶಹಾಬಾದ : - ನಗರದ ನಗರ ಸಭೆ ಎದುರು, ಸರಕಾರಿ ಆಸ್ಪತ್ರೆ ಪಕ್ಕ ಹಾಗೂ ಡಾ.ಅಂಬೇಡ್ಕರ ಪ್ರತಿಮೆ ಹತ್ತಿರ, ಬಸ್ ಮತ್ತು ರೈಲ್ವೆ ನಿಲ್ದಾಣದಿಂದ ನಿತ್ಯ ಸಾವಿರಾರು ಜನರು ಪ್ರಯಾಣಿಸುವ ಪ್ರಯಾಣಿಕರು, ಆಸ್ಪತ್ರೆಯ ರೋಗಿಗಳಿಗೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟಿನ್ ಅನ್ನು ಜಿಲ್ಲಾ ಕಾಡಾ ನಿಗಮದ ಅಧ್ಯಕ್ಷ ಡಾ. ಎಂಎ ರಶೀದ ಉದ್ಘಾಟಿಸಿ ಮಾತನಾಡಿ, ಇಂದಿರಾ ಕ್ಯಾಂಟಿನ್ ಬಡ, ಕೂಲಿ ಕಾರ್ಮಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಆಸರೆಯಾಗಿ ಹಸಿವು ನೀಗಿಸುತ್ತಿದೆ, ಕರ್ನಾಟಕ ಸರಕಾರವು ನಗರ ಪ್ರದೇಶದಲ್ಲಿ ಕಡಿಮೆ ಹಾಗೂ ಕೈಗೆಟುಕುವ ದರದಲ್ಲಿ ಆಹಾರ ಒದಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಮಾದರಿ ಸೇವೆಗೆ ಮುಂದಾಗಿದೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಸರ್ಕಾರ ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸಲಾಗಿತ್ತು ಎಂದರು.
ನಂತರ 2023 ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಪುನಶ್ಚೇತನಗೊಂಡಿವೆ, ಪ್ರತಿನಿತ್ಯ ಬೆಳಗಿನ ಉಪಹಾರ 5 ರೂ.ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 10 ರೂ. ದರ ನಿಗದಿ ಮಾಡಲಾಗಿದೆ, ನಗರದ ಬಡವರಿಗೆ, ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಿದೆ ಎಂದರು.
ಉಧ್ಘಾಟನಾ ಸಮಾರಂಭದಲ್ಲಿ ದಸಂಸ ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ, ನಗರ ಸಭೆ ಪೌರಾಯುಕ್ತ ಡಾ. ಕೆ. ಗುರಿಲಿಂಗಪ್ಪ, ಸಾಬಣ್ಣ ಸುಂಗುಲ್ಕರ, ಕಾಂಗ್ರೆಸ್ ಮುಖಂಡರಾದ ಯಾಕೂಬ ಮರ್ಚೆಂಟ, ಕಾರ್ಯದರ್ಶಿ ಮೃತ್ಯುಂಜಯ ಹಿರೇಮಠ, ಕಿಶನ್ ನಾಯಕ, ಎಸ್ಸಿ ಘಟಕದ ಅಧ್ಯಕ್ಷ ರಾಜೇಶ್ ಯನಗುಂಟಿಕರ, ಯುವ ಅಧ್ಯಕ್ಷ ಕಿರಣ್ ಚೌಹಾನ, ಕುಮಾರ್ ಚೌಹಾನ, ಮಮ್ಮದ ಜಾವೀದ, ಶಂಕರ ಕೊಟ್ನೂರ, ನಾಗೇಂದ್ರ ನಾಟೇಕರ, ಹಾಷಮ ಖಾನ, ನಗರಸಭೆ ಮಾಜಿ ಸದಸ್ಯರಾದ ರಾಜು ಮೇಸ್ತ್ರಿ, ಶರಣು ಪಗಲಾಪುರ, ಅಹ್ಮದ್ ಪಟೇಲ, ನಾಗರಾಜ ಕರಣಿಕ, ವಾಜಿದಖಾನ ಜಮಾದಾರ, ಸಾಬೇರಾ ಬೇಗಂ, ಫಜಲ್ ಪಟೇಲ, ಸಾಹೇಬ್ ಗೌಡ, ಹಾಗೂ ಕೃಷ್ಣಪ್ಪ ಕರಣಿಕ, ಶಿವರಾಜ ಕೋರೆ, ಗೋವಾ ಬಾಬು, ವಸಂತ ಕಾಂಬಳೆ, ಮಮ್ಮದ ಮಸ್ತಾನ, ಸಿದ್ರಾಮ ಕುಸಾಳೆ, ಮಹ್ಮದ ಇಮ್ರಾನ ಸೇರಿದಂತೆ ನಗರ ಸಭೆ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿರಿದರು.
